RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸ್ವಚ್ಛತೆ , ಪರಿಸರ ಕುರಿತು ಅರಿವು ಮೂಡಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸಿಬೇಕು

ಗೋಕಾಕ:ಸ್ವಚ್ಛತೆ , ಪರಿಸರ ಕುರಿತು ಅರಿವು ಮೂಡಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸಿಬೇಕು 

ಸ್ವಚ್ಛತೆ , ಪರಿಸರ ಕುರಿತು ಅರಿವು ಮೂಡಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸಿಬೇಕು

 

ನಮ್ಮ ಬೆಳಗಾವಿ ಸುದ್ದಿ ಗೋಕಾಕ ಜೂ 8 :

 

ಜನರಿಗೆ ಸ್ವಚ್ಛತೆ ಹಾಗೂ ಪರಿಸರ ಕುರಿತು ಅರಿವು ಮೂಢಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸುವಂತೆ ಪ್ರಭಾರಿ ಪೌರಾಯುಕ್ತ ವಿ ಎಸ್ ತಡಸಲೂರ ಕರೆ ನೀಡಿದರು.

ಅವರು, ಶುಕ್ರವಾರದಂದು ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಜೆಸಿಐ ಸಂಸ್ಥೆಯ ಕಾರ್ಯಾಲಯದಲ್ಲಿ ಜೆಸಿಐ ಸಂಸ್ಥೆಯವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತ ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವದರಿಂದ ರೋಗಗಳನ್ನು ನಿಯಂತ್ರಿಸಬಹುದು.. ನಗರದ ಸೌಂದರ್ಯವು ಹೆಚ್ಚುತ್ತದೆ. ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುತ್ತಿದ್ದು ಸಾರ್ವಜನಿಕರು ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಆಪ್ ಲೆಟರ್ಸ್ ಪದವಿ ಪಡೆದ ಸಂಸ್ಥೆಯ ಸದಸ್ಯ ಜಿ ಆರ್ ನಿಡೋಣಿ ಹಾಗೂ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಕಾರ್ಯಕ್ರಮದಡಿ ಅಗ್ನಿ ಶಾಮಕ ಹಾಗೂ ಅಂಚೆ ಇಲಾಖೆ ಸಿಬ್ಬಂಧಿಯವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ಮಹಾವೀರ ಖಾರಿಪಟನ, ಮಹಿಳಾ ಘಟಕ ಅಧ್ಯಕ್ಷೆ ಲಿಲಾವತಿ ಖಾರಿಪಟನ, ಪದಾಧಿಕಾರಿಗಳಾದ ವಿಷ್ಣು ಲಾತೂರ, ಕೆಂಪಣ್ಣ ಚಿಂಚಲಿ, ರಜನಿಕಾಂತ ಮಾಳೊದೆ, ವಿಜಯಕುಮಾರ ಖಾರಿಪಟನ, ಧನ್ಯಕುಮಾರ ಕಿತ್ತೂರ, ಸುಧಾ ನಿಡೋಣಿ, ಪ್ರೇಮನಾಥ ಚೌಧರಿ, ರಾಚಪ್ಪ ಅಮ್ಮಣಗಿ, ಕೃಷ್ಣ ಕುರಬಗಟ್ಟಿ, ಅಗ್ನಿ ಶಾಮಕದಳದ ಬಿ ಎಮ್ ಪೀರಜಾದೆ, ಇದ್ದರು.

Related posts: