RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಅಧಿಕಾರ ದರ್ಪ ತೋರಿದ ಪೊಲೀಸ್ ಪೇದೆ ಮಂಜುನಾಥ ಹುಚ್ಚಗೌಡರ ಮೇಲೆ ಕ್ರಮಕ್ಕೆ ಕರವೇ ಒತ್ತಾಯ

ಗೋಕಾಕ :ಅಧಿಕಾರ ದರ್ಪ ತೋರಿದ ಪೊಲೀಸ್ ಪೇದೆ ಮಂಜುನಾಥ ಹುಚ್ಚಗೌಡರ ಮೇಲೆ ಕ್ರಮಕ್ಕೆ ಕರವೇ ಒತ್ತಾಯ 

ಅಧಿಕಾರ ದರ್ಪ ತೋರಿದ ಪೊಲೀಸ್ ಪೇದೆ ಮಂಜುನಾಥ ಹುಚ್ಚಗೌಡರ ಮೇಲೆ ಕ್ರಮಕ್ಕೆ ಕರವೇ ಒತ್ತಾಯ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 13 :

 

 

ಅಧಿಕಾರ ದರ್ಪ ತೋರಿದ ಪೊಲೀಸ್ ಪೇದೆ ಮಂಜುನಾಥ ಹುಚ್ಚಗೌಡರ ಬಕ್ಕಲ್ ನಂ. 3182 ರವರ ಮೇಲೆ ದೂರು ದಾಖಲು ಮಾಡಿ, ಅಮಾನತ್ತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಗುರುವಾರ ಮುಂಜಾನೆ ನಗರದ ಪೊಲೀಸ್ ಠಾಣೆ ಎದುರು ಸೇರಿದ ಕರವೇ ಕಾರ್ಯರ್ತರು ಪೊಲೀಸ್ ಪೇದೆ ಹಾಗೂ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಪಿಎಸ್‍ಐ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಗುರುವಾರ ಮುಂಜಾನೆ 9.45 ರ ಸುಮಾರಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಕರವೇ ಕಾರ್ಯಕರ್ತ ಯಲ್ಲಪ್ಪಾ ಧರ್ಮಟ್ಟಿ ಎಂಬುವವರು ತನ್ನ ಕಾರ್ಯ ನಿಮಿತ್ಯ ನ್ಯಾಯಾಲಯಕ್ಕೆ ಹೋಗುವಾಗ ಬಸವೇಶ್ವರ ವೃತ್ತದಲ್ಲಿರುವ ಸತೀಶ್ ಅಕ್ವಾ ಅಂಗಡಿ ಮುಂದೆ ಇಡಲಾದ ಬ್ಯಾರಿಗೇಡ್ ಪಕ್ಕದಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಅಲ್ಲಿಯ ಕರ್ತವ್ಯ ನಿರತ ನಗರ ಠಾಣೆ ಪೊಲೀಸ್ ಪೇದೆ ಮಂಜುನಾಥ ಹುಚ್ಚಗೌಡರ ಬಕ್ಕಲ್ ನಂ. 3182 ಆತನು ಯಾವುದೇ ಸಕಾರಣವಿಲ್ಲದೇ ಏಕಾಏಕಿ ಯಲ್ಲಪ್ಪಾ ಧರ್ಮಟ್ಟಿ ಮೇಲೆ ಹಲ್ಲೆ ನಡೆಸಿ ತನ್ನ ಅಧಿಕಾರ ದರ್ಪ ಮೆರೆದು ಸರ್ವಾಧಿಕಾರಿ ಧೋರಣೆ ತೋರಿದ್ದಾನೆ. ಅಲ್ಲಿ ನೆರೆದಿದ್ದ ಸಾರ್ವಜನಿಕರು ಈತನು ಯಾವುದೇ ತಪ್ಪು ಮಾಡಿಲ್ಲಾ ಏಕೆ ಅವನನ್ನು ಹೊಡೆಯುತ್ತಿದ್ದಿರಾ ? ಎಂದು ಪ್ರಶ್ನಿಸಿದರೂ ಸಹ ಅವರ ಮಾತಿಗೆ ಬೆಲೆ ಕೊಡದೇ ತನ್ನ ಅಧಿಕಾರ ದರ್ಪ ತೋರಿ ಅವನನ್ನು ಥಳಿಸಿದ್ದಾನೆ. ಇದಲ್ಲದೇ ಪೊಲೀಸ್ ಪೇದೆ ಮಂಜುನಾಥ ಹುಚ್ಚಗೌಡರ್ ಬಕ್ಕಲ್ ನಂ. 3182 ಬಸವೇಶ್ವರ ವೃತ್ತದಲ್ಲಿ ಕರ್ತವ್ಯ ನಿರತರಿದ್ದಾಗ ವಾಹನ ದಟ್ಟಣೆಯನ್ನು ಸರಿಪಡಿಸುವುದನ್ನು ಬಿಟ್ಟು ಹೋಮ್‍ಗಾರ್ಡ್ ಎ.ಡಿ. ಹುಕ್ಕೇರಿ ಜೊತೆಗೂಡಿ ವಾಹನ ಸವಾರರಿಂದ ಬೇಕಾ ಬಿಟ್ಟಿ ಹಣ ವಸೂಲಿ ಮಾಡುತ್ತಿರುತ್ತಾನೆ.
ಯಾವುದೇ ಸಕಾರಣವಿಲ್ಲದೇ ಹಲ್ಲೆ ಮಾಡಿದ ನಗರ ಠಾಣೆ ಪೊಲೀಸ್ ಪೇದೆ ಮಂಜುನಾಥ ಹುಚ್ಚಗೌಡರ ಬಕ್ಕಲ್ ನಂ. 3182 ನ ಮೇಲೆ ದೂರು ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿಲಾಗಿದೆ.
ಇದಕ್ಕೆ ತಪ್ಪಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಎದುರು ಧರಣಿ ನಡೆಸಲಾಗುವದೆಂದು ಈ ಮನವಿಯ ಮೂಲಕ ಎಚ್ಚರಿಸಲಾಗಿದೆ. ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾದಿಕ್ ಹಲ್ಯಾಳ, ದೀಪಕ ಹಂಜಿ, ರೆಹಮಾನ್ ಮೊಕಾಶಿ, ಅಶೋಕ ಗಾಡಿವಡ್ಡರ, ಶೆಟ್ಟೆಪ್ಪಾ ಗಾಡಿವಡ್ಡರ, ನಿಯಾಜ್ ಪಟೇಲ್, ರಾಮ ಸಣ್ಣಲಗಮನ್ನವರ, ಮುಗುಟ ಪೈಲವಾನ , ರಮೇಶ ಕಮತಿ, ಬಸು ಗಾಡಿವಡ್ಡರ, ಫಕೀರಪ್ಪಾ ಗಣಾಚಾರಿ, ಲಕ್ಕಪ್ಪಾ ನಂದಿ, ವಿಠ್ಠಲ ರಾನಪ್ಪಗೋಳ, ದುಂಡಪ್ಪಾ ನಿಂಗಣ್ಣವರ, ಮಲ್ಲು ಸಂಪಗಾರ, ಕೆಂಪಣ್ಣಾ ಕಡಕೋಳ, ಮಹಾದೇವ ಮಕ್ಕಳಗೇರಿ, ನಿಜಾಂ ನಧಾಪ, ಹನೀಪಸಾಬ ಸನದಿ, ಮಲ್ಲಪ್ಪಾ ತಲೆಪ್ಪಗೊಳ, ಅಮೀರಖಾನ್ ಜಗದಾಳೆ, ರವಿ ನಾಂವಿ, ಮುತ್ತೆಪ್ಪಾ ಘೋಡಗೇರಿ, ದುರ್ಗಪ್ಪಾ ಗಾಡಿವಡ್ಡರ, ಸಂತು ಮದಿಹಳ್ಳಿ, ಹಣುಮಂತ ಅಮ್ಮಣಗಿ, ಯಲ್ಲಪ್ಪಾ ಧರ್ಮಟ್ಟಿ, ಈರಣ್ಣಾ ನರಸನ್ನವರ, ಶೋಭಾ ಉಪ್ಪಾರ, ನಿಂಗವ್ವಾ ಧರ್ಮಟ್ಟಿ, ಲಕ್ಷ್ಮೀ ಬಿ.ಕೆ., ಲಕ್ಕವ್ವಾ ಯನಕೆ, ರಾಜು ಬಂಡಿವಡ್ಡರ, ರಮೇಶ ಬಂಡಿವಡ್ಡರ, ಸುರೇಶ ಬಂಡಿವಡ್ಡರ, ಅಜರುದ್ದಿನ ಚೌಧರಿ, ಮಸ್ತಾನ ಚೌಧರಿ, ಅವ್ವಕ್ಕಾ ಬಿ.ಕೆ. ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: