ಬೆಳಗಾವಿ:ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಾಲ್ ನಮ್ಮ ಕಡೆ ಇಲ್ಲ : ಅರಣ್ಯ ಸಚಿವ ಸತೀಶ
ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಾಲ್ ನಮ್ಮ ಕಡೆ ಇಲ್ಲ : ಅರಣ್ಯ ಸಚಿವ ಸತೀಶ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಜೂ 16 :
ಗೋಕಾಕ್ ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ ಬಾಲ್ ನಮ್ಮ ಕಡೆ ಇಲ್ಲ, ಅವರ ಕಡೆ ಇದೆ. ಅವರನ್ನೇ ಕೇಳಬೇಕು ಎಂದಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದಲ್ಲಿ ರಮೇಶ್ ಇಲ್ಲದ ಕಾರಣ, ಅವರನ್ನೇ ಕೇಳಿ ಅವರು ಶಾಸಕರಾಗಿ ತಿಳಿದು ಕೊಳ್ಳಬೇಕು. ಕೊಣ್ಣೂರು ಮತ್ತು ಗೋಕಾಕ್ ನಗರ ಸಭೆಯನ್ನು ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು. ರಮೇಶ್ ಜಾರಕಿಹೊಳೀ ರಾಜೀನಾಮೆ ಮಾಡೋದು ಬಿಡೋದು ಅವರಿಗೆ ಗೊತ್ತು, ರಮೇಶ್ ಜಾರಕಿಹೊಳಿಯಿಂದ ಸರ್ಕಾರಕ್ಕೆ ತೊಂದರೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.