RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಬೆಳಗಾವಿ ಜಿಲ್ಲಾ ಸಮ್ಮೇಳನ ಐತಿಹಾಸಿಕ ಸಮಾವೇಶವಾಗಿ ದಾಖಲೆಯಾಗಬೇಕು : ಅರಣ್ಯ ಸಚಿವ ಸತೀಶ

ಗೋಕಾಕ:ಬೆಳಗಾವಿ ಜಿಲ್ಲಾ ಸಮ್ಮೇಳನ ಐತಿಹಾಸಿಕ ಸಮಾವೇಶವಾಗಿ ದಾಖಲೆಯಾಗಬೇಕು : ಅರಣ್ಯ ಸಚಿವ ಸತೀಶ 

ನಗರದ ಕೆಎಲ್‍ಇ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನ ಸ್ವಾಗತ ಸಮಿತಿ ಆಮಂತ್ರಣ ಪತ್ರಿಕೆ ಹಾಗೂ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶ್ರೀಗಳು ಹಾಗೂ ಸಚಿವರು ಜಂಟಿಯಾಗಿ ಬಿಡುಗಡೆಗೊಳಿಸುತ್ತಿರುವುದು.

ಬೆಳಗಾವಿ ಜಿಲ್ಲಾ ಸಮ್ಮೇಳನ ಐತಿಹಾಸಿಕ ಸಮಾವೇಶವಾಗಿ ದಾಖಲೆಯಾಗಬೇಕು : ಅರಣ್ಯ ಸಚಿವ ಸತೀಶ

 

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಜೂ 17 :

 

 
ಬೆಳಗಾವಿ ಹಾಗೂ ಗೋಕಾಕ ನಗರಗಳಿಗೆ ಸಾಹಿತ್ಯಕವಾಗಿ ಶತಮಾನದ ಇತಿಹಾಸವಿದೆ. ಗೋಕಾಕ ನಗರದಲ್ಲಿ ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಸಮ್ಮೇಳನ ಐತಿಹಾಸಿಕ ಸಮಾವೇಶವಾಗಿ ದಾಖಲೆಯಾಗಬೇಕೆಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದರು.
ಕೆಎಲ್‍ಇ ಶಾಲೆಯ ಆವರಣದಲ್ಲಿ ದಿ. 28 ಮತ್ತು 29 ರಂದು ಜರುಗಲಿರುವ ಜಿಲ್ಲಾ ಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೆಳನದ ಆಮಂತ್ರಣ ಪತ್ರಿಕೆ ಹಾಗೂ ಲಾಂಛನವನ್ನು ಸೋಮವಾರದಂದು ಸಂಜೆ ನಗರದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ವೈಜ್ಞಾನಿಕ ಯುಗದಲ್ಲಿ ಸಾಹಿತ್ತ ಹಾಗೂ ಕಲೆ ನಶಿಸಿ ಹೋಗುತ್ತಿದ್ದು ಅದನ್ನು ಇಂಥ ಸಮ್ಮೇಳನಗಳ ಮೂಲಕ ಯುವ ಪೀಳಿಗೆ ಆಕರ್ಷಿಸುವಂತೆ ಮಾಡುವದು ಅವಶ್ಯಕವಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ನಗರದ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಗೋಕಾಕದಲ್ಲಿ ಪ್ರಥಮವಾಗಿ ಜಿಲ್ಲಾ ಸಮ್ಮೇಳನ ನಡೆಯುತ್ತಿದ್ದು ಅದನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಇಡೀ ಜಿಲ್ಲೆಗಷ್ಟೇ ಅಲ್ಲ, ನಾಡಿಗೆ ಮಾದರಿಯಾಗಿ ನಡೆಸಬೇಕು ಎಂದು ಹೇಳಿದರಲ್ಲದೆ ಈ ಕಾರ್ಯದಲ್ಲಿ ಎಲ್ಲರೂ ಒಂದಾಗಿ ಕಾರ್ಯ ಮಾಡಬೇಕೆಂದು ಹೇಳಿದರಲ್ಲದೆ ನಗರದ ಪ್ರತಿಯೊಂದು ವಾರ್ಡನಲ್ಲಿ ಜಾಥಾ ಸಂಘಟಿಸಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಸಿದ್ಧಲಿಂಗ ದಳವಾಯಿ, ಅಶೋಕ ಪೂಜಾರಿ, ಶ್ರೀಮತಿ ಜ್ಯೋತಿ ಬದಾಮಿ ಮಾತನಾಡಿದರು. ಅಧ್ಯಕ್ಷತೆಯನ್ನು ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ ವಹಿಸಿದ್ದರು.
ವೇದಿಕೆ ಮೇಲೆ ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ಪೌರಾಯುಕ್ತ ವಿ.ಎಸ್.ತಡಸಲೂರ, ಜಿ.ಪಂ. ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಸುನಂದಾ ಎಮ್ಮಿ ಇದ್ದರು.
ಜಯಾನಂದ ಮಾದರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ವಂದಿಸಿದರು.

Related posts: