RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿ : ಹಣಮಂತ ನಿರಾಣಿ

ಗೋಕಾಕ:ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿ : ಹಣಮಂತ ನಿರಾಣಿ 

ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿ : ಹಣಮಂತ ನಿರಾಣಿ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 30 :

 

 

ಅಧಿಕಾರಕ್ಕಾಗಿ ಆಸೆಯನ್ನು ಪಡದೆ, ಸಂತೋಷದಿಂದ ಅಧಿಕಾರ ಹಸ್ತಾಂತರ ಮಾಡಿ ನಿಸ್ವಾರ್ಥದಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಇಲ್ಲಿಯ ರೋಟರಿ ಸಂಸ್ಥೆಯ ಸದಸ್ಯರ ಕಾರ್ಯ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ರೋಟರಿ ಸಂಸ್ಥೆಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಹಾಗೂ ಸುವರ್ಣ ಮಹೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅಧಿಕಾರಕ್ಕಾಗಿ ಹಾತೋರೆಯದೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಂಸ್ಥೆ ದೇಶಕ್ಕೆ ತನ್ನದೇಯಾದ ಕೊಡುಗೆಯನ್ನು ನೀಡಿದೆ. ರಕ್ತ ಭಂಡಾರ, ಮುಕ್ತಿ ವಾಹನ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಇಲ್ಲಿಯ ರೋಟರಿ ಸಂಸ್ಥೆಯ ಗಣನೀಯವಾದ ಸೇವೆಯನ್ನು ಮಾಡುತ್ತಾ ಸುವರ್ಣ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಸಂಸ್ಥೆಯಿಂದ ಇನ್ನೂ ಹೆಚ್ಚಿನ ಕಾರ್ಯಗಳು ಸಮಾಜಕ್ಕೆ ದೊರೆಯಲಿ ಎಂದು ಹಾರೈಸಿದರು.
ಇಂದು ತಂತ್ರಜ್ಞಾನ ಮುಂದುವರೆದಿದ್ದರು ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ, ಅದನ್ನು ದಾನಿಗಳಿಂದಲೇ ಪಡೆಯಬೇಕಾಗಿದ್ದು, ರಕ್ತದಾನ ಮಾಡಲು ಎಲ್ಲರೂ ಮುಂದಾಗಬೇಕು. ಅರಣ್ಯಗಳನ್ನು ಉಳಿಸಿ ಬೆಳೆಸಿವುದರಿಂದ ಪ್ರಕೃತಿಯ ವಿಕೋಪಗಳನ್ನು ತಡೆಯಬಹುದಾಗಿದ್ದು, ಪರಿಸರ ರಕ್ಷಣೆಗೆ ಸಂಸ್ಥೆಗಳು ಮುಂಚೂಣಿಯಲ್ಲಿರಬೇಕು ಎಂದು ಸಲಹೆ ನೀಡಿದರು.
ನೀರಿನ ಹಿತವಾಗಿ ಬಳಕೆ ಮಾಡಿ ಅಂತರ-ಜಲವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿ ಮುಂಬರುವ ಜಲಕ್ಷಾಮವನ್ನು ತಡೆಯಬೇಕು. ಕಾಳಿ ನದಿಯನ್ನು ಘಟಪ್ರಭೆ ಹಾಗೂ ಮಲಪ್ರಭೆ ನದಿಗೆ ಜೋಡಣೆ ಮಾಡುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದು ಅದನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಅಧಿಕಾರ ಹಸ್ತಾಂತರ ಅಧಿಕಾರಿಯಾಗಿ ಆಗಮಿಸಿದ್ದ ನಿಕಟಪೂರ್ವ ಪ್ರಾಂತಪಾಲ ಬ್ರೇಜಿಲ್ ಡಿಸೋಜಾ ಮಾತನಾಡಿ, ರೋಟರಿ ಸಂಸ್ಥೆ 8ನೂರು ಮಿಲಿಯನ್ ಡಾಲರ್ ಹಣವನ್ನು ಪ್ರತಿವರ್ಷ ಜಗತ್ತಿನಾದ್ಯಾಂತ ಸಮಾಜಮುಖಿ ಕಾರ್ಯಗಳಿಗೆ ವೆಚ್ಚ ಮಾಡುತ್ತಿದೆ. ಪೋಲಿಯೋ ನಿರ್ಮೂಲನಗೆ ಮುಂದಾಳತ್ವ ವಹಿಸಿ ಪೋಲಿಯೋ ಮುಕ್ತವಾಗುವ ಹಂತಕ್ಕೆ ತಲುಪಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಸೋಮಶೇಖರ ಮಗದುಮ್ಮ, ಉಪಾಧ್ಯಕ್ಷರಾಗಿ ಪುಂಡಲೀಕ ವಣ್ಣೂರ, ಕಾರ್ಯದರ್ಶಿಯಾಗಿ ಡಾ|| ಉದಯ ಆಜರೆ, ಸಹಕಾರ್ಯದರ್ಶಿಯಾಗಿ ಗಣೇಶ ವರದಾಯಿ, ಖಜಾಂಚಿಯಾಗಿ ಪ್ರಸಾದ ಸೊಲ್ಲಾಪೂರಮಠ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಸಮಾರಂಭದ ಸಾನಿಧ್ಯವನ್ನು ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆ ಮೇಲೆ ಸಹಾಯಕ ಪ್ರಾಂತಪಾಲ ವೀರದವಳ ಉಪಾಧ್ಯೆ, ನಿಕಟಪೂರ್ವ ರೋಟರಿ ಅಧ್ಯಕ್ಷ ದಿಲೀಪ ಮೆಳವಂಕಿ ಹಾಗೂ ವಿಶ್ವನಾಥ ಕಡಕೋಳ, ಲಾರೆನ್ ಡಿಸೋಜಾ, ನಮಿತಾ ಆಜರೆ, ಗಿರೀಜಾ ಮುನವಳ್ಳಿಮಠ ಇದ್ದರು. ಸತೀಶ ನಾಡಗೌಡ ಸ್ವಾಗತಿಸಿದರು, ಸತೀಶ ಬೆಳಗಾವಿ ನಿರೂಪಿಸಿದರು, ಜಗದೀಶ ಚುನಮರಿ ವಂದಿಸಿದರು.

Related posts: