ಘಟಪ್ರಭಾ:ಅರಭಾವಿ ಗ್ರಾಮ ದೇವತೆ ಶ್ರೀ ಜಗನ್ಮಾಥಾ ದ್ಯಾಮವ್ವಾದೇವಿ ಜಾತ್ರೆ ಸಂಪನ್ನ
ಅರಭಾವಿ ಗ್ರಾಮ ದೇವತೆ ಶ್ರೀ ಜಗನ್ಮಾಥಾ ದ್ಯಾಮವ್ವಾದೇವಿ ಜಾತ್ರೆ ಸಂಪನ್ನ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 6 :
ಜು.1 ರಂದು ಆರಂಭಗೊಂಡ ಅರಭಾವಿ ಗ್ರಾಮ ದೇವತೆ ಶ್ರೀ ಜಗನ್ಮಾಥಾ ದ್ಯಾಮವ್ವಾದೇವಿ ಜಾತ್ರೆ ಶುಕ್ರವಾರ ಸಂಪನ್ನವಾಯಿತು.
ಈ ಜಾತ್ರೆ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಒಟ್ಟು ಐದು ದಿನಗಳವರೆಗೆ ನಡೆಯುತ್ತದೆ. ಜಾತ್ರೆ ನಿಮಿತ್ಯ ಇಡೀ ಅರಭಾವಿ ಬಂಡಾರಮಯವಾಗಿದ್ದು, ಪರಸ್ಪರ ಭಕ್ತರು ಬಂಡಾರ ಎರಚುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಜಾತ್ರೆ ಅಂಗವಾಗಿ ನಿತ್ಯ ಶ್ರೀದೇವಿಯ ಪೂಜೆ, ಉಡಿ ತುಂಬುವುದು ಮತ್ತು ಊರಿನ ಎಲ್ಲ ದೇವತೆಯರÀ ಅಭಿಷೇಕ ಮತ್ತು ಸಕಲ ಭಕ್ತಾದಿಗಳಿಂದ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಐದು ದಿನಗಳಕಾಲ ವಿಜೃಂಭನೆಯಿಂದ ಜರುಗಿದವು.
ಗ್ರಾಮದ ವಿವಿಧ ಓಣಿಗಳಲ್ಲಿ ಶ್ರೀದೇವಿಯ ಮೂರ್ತಿಯ ಮೆರವಣಿಗೆ ಹೊನ್ನಾಟದ ಮೂಕರ ಮಾಡಿದ ಭಕ್ತಾಧಿಗಳು ಶುಕ್ರವಾರ ವೈಭವದೊಂದಿಗೆ ಶ್ರೀದೇವಿ ಮಂದಿರಕ್ಕೆ ಆಗಮನದೊಂದಿಗೆ ಜಾತ್ರೆ ಸಮಾರೋಪಗೊಂಡಿತು.