ಗೋಕಾಕ:ಹಿರಿಯ ಜಾನಪದ ಸಾಹಿತಿ ಲಕ್ಷ್ಮಣ ಸಿದ್ದಪ್ಪ ಪಟಾತ ಅವರಿಗೆ ಸನ್ಮಾನ
ಹಿರಿಯ ಜಾನಪದ ಸಾಹಿತಿ ಲಕ್ಷ್ಮಣ ಸಿದ್ದಪ್ಪ ಪಟಾತ ಅವರಿಗೆ ಸನ್ಮಾನ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 :
ತಾಲೂಕಿನ ಮಮದಾಪೂರ ಗ್ರಾಮದ ಹಿರಿಯ ಜಾನಪದ ಸಾಹಿತಿ ಲಕ್ಷ್ಮಣ ಸಿದ್ದಪ್ಪ ಪಟಾತ ಅವರಿಗೆ ಹಾಲುಮತ ಜನಾಂಗದ ಕಲೆ ಹಾಗೂ ಸಾಹಿತ್ಯ ಜನಪದ ಸಂಶೋಧನೆಗೆ ಚನ್ಯೈ (ಮದ್ರಾಸ್) ಇಂಟರನ್ಯಾಶನಲ್ ಗ್ಲೋಬಲ್ ಪೀಸ್ ಇನಿವರ್ಸಿಟಿಯವರಿಂದ ಗೌರವಡಾಕ್ಟರೇಟ್ ಪ್ರಧಾನ ಮಾಡಿದ ಹಿನ್ನಲೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಹಾಗೂ ಮಮದಾಪೂರ ಗ್ರಾಮಸ್ಥರ ವತಿಯಿಂದ ಇತ್ತಿಚೇಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಸಿದ್ದಪ್ಪ ಕಮತ, ಡಿಎಸ್‍ಎಸ್ ರಾಜ್ಯ ಉಪಾಧ್ಯಕ್ಷ ವೀರಭದ್ರ ಮೈಲನ್ನವರ, ಎಲ್ ಆರ್ ವಗ್ಗನ್ನವರ, ಈರಪ್ಪ ಕಿತ್ತೂರ, ಕೆಂಪಣ್ಣ ಮೈಲನ್ನರ, ಭೀರಣ್ಣ ಮೈಲನ್ನವರ, ಸುರೇಶ ಸನದಿ ಸೇರಿದಂತೆ ಗ್ರಾಮದ ಹಿರಿಯರು ಅನೇಕರು ಇದ್ದರು.