ಮೂಡಲಗಿ:ಉಪ್ಪಾರ ಅಭಿವೃದ್ದಿ ನಿಗಮಕ್ಕೆ ಸದಸ್ಯರಾಗಿ ಸುಭಾಸ ಪೂಜೇರಿ ಆಯ್ಕೆ
ಉಪ್ಪಾರ ಅಭಿವೃದ್ದಿ ನಿಗಮಕ್ಕೆ ಸದಸ್ಯರಾಗಿ ಸುಭಾಸ ಪೂಜೇರಿ ಆಯ್ಕೆ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 26 :
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಇವರು ಉಪ್ಪಾರ ಅಭಿವೃದ್ದಿ ನಿಗಮಕ್ಕೆ ಸದಸ್ಯರನ್ನಾಗಿ ಸುಭಾಸ ಪೂಜೇರಿಯವರನ್ನು ಇತ್ತಿಚಿಗೆ ಆಯ್ಕೆಮಾಡಿ ಆದೇಶ ಹೊರಡಿಸಿರುತ್ತಾರೆ.
ಉಪ್ಪಾರ ಅಭಿವೃದ್ದಿ ನಿಗಮಕ್ಕೆ ನಡೆದ ಅಧ್ಯಕ್ಷ-ಸದಸ್ಯರ ನೇಮಕದಲ್ಲಿ ಸುಭಾಸ ಪೂಜೇರಿಯವರು ಉಪ್ಪಾರ ಸಮಾಜದ ಯುವ ಮುಖಂಡರಾಗಿ ಸಮಾಜದ ಸೇವೆ ಮಾಡಿದ್ದು ಮತ್ತು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲೆಯ ಯುವ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು ಇವರ ಸಮಾಜ ಸೇವೆಯನ್ನು ಗುರುತಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೇಮಕ ಮಾಡಿರುತ್ತಾರೆ.
ಆಯ್ಕೆ ಮಾಡಿದ ಜೆಡಿಎಸ್ ಪಕ್ಷದ ರಾಷ್ಟೀಯ ಅಧ್ಯಕ್ಷ ದೇವೆಗೌಡರವರಿಗೆ, ಕುಮಾರ ಸ್ವಾಮಿಯವರಿಗೆ, ಸುಭಾಸ ಪೂಜೇರಿಯವರಿಗೆ ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾದ ಗೌರವಾದ್ಯಕ್ಷ ಹೊನ್ನಪ್ಪ ಬಂಡಿ, ರಾಜ್ಯಧ್ಯಾಕ್ಷ ವಿಷ್ಣು ಲಾತೂರ, ಕಿಶೋರ ಉಪ್ಪಾರ, ಅರುಣ ಸವತಿಕಾಯಿ, ಎ.ವಿ ಲೋಕೆಶಪ್ಪ ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.