ಘಟಪ್ರಭಾ:ಕರ್ನಾಟಕ ಯುವ ಸೇನೆಯಿಂದ ಸಾವಯವ ಕೃಷಿ ಕಾರ್ಯಾಗಾರ
ಕರ್ನಾಟಕ ಯುವ ಸೇನೆಯಿಂದ ಸಾವಯವ ಕೃಷಿ ಕಾರ್ಯಾಗಾರ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 30 :
ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಕೃಷಿ ಮಾರ್ಗದರ್ಶಕರಾದ ಪಾಲರಾಜ ವಡರಟ್ಟಿ ಹೇಳಿದರು.
ಅವರು ಸೋಮವಾರದಂದು ಇಲ್ಲಿಯ ಮಲ್ಲಾಪೂರ ಪಿಜಿಯ ಶ್ರೀ ವಿಠ್ಠಲ ಮಂದಿರದಲ್ಲಿ ಕರ್ನಾಟಕ ಯುವ ಸೇನೆ ವತಿಯಿಂದ ಆಯೋಜಿಸಲಾದ ರೈತರಿಗೆ ಕೃಷಿ ತರಬೇತಿ ಮತ್ತು ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯುವ ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಪಣ್ಣಾ ಚೌಕಶಿ ವಹಿಸಿ ಮಾತನಾಡಿ ಕೃಷಿ ಪ್ರದಾನವಾದ ನಮ್ಮ ಭಾರತ ದೇಶವು ಕೃಷಿಯಲ್ಲಿ ಮೂಂಚೂಣಿಯಲ್ಲಿದೆ. ರೈತನೇ ಈ ದೇಶದ ಬೆನ್ನುಲುಬುಯಾಗಿದ್ದಾನೆ. ಆದರೆ ರೈತನು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸರ್ಕಾರ ನೀಡಬೇಕಾದ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ನೂರಾರು ರೈತರು ಭಾಗವಹಿಸಿದ್ದು ಅವರಿಗೆ ಬೆಂಗಳೂರಿನಿಂದ ಆಗಮಿಸಿದ ಕೃಷಿ ಮಾರ್ಗದರ್ಶಕರಾದ ರಾಮು ಮತ್ತು ಸುನೀತಾ ಅವರು ಸಾವಯವ ಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸುಭಾಸ ಹುಕ್ಕೇರಿ,ಕಾಡಪ್ಪ ನಂದಗಾಂವಿ,ಸಂಜೀವ ನಾಯಿಕ,ದುಂಡಪ್ಪ ನಾಯಿಕ, ಮಾರುತಿ ಹುಕ್ಕೇರಿ, ಬಸವರಾಜ ಹತ್ತರವಾಟ ಸೇರಿದಂತೆ ಕರ್ನಾಟಕ ಯುವ ಸೇನೆಯ ಜಿಲ್ಲಾಧ್ಯಕ್ಷ ವೀರಣ್ಣ ಸಂಗಮ್ಮನವರ ಹಾಗೂ ಪದಾಧಿಕಾರಿಗಳಾದ ನಿತೀನ ದೇಶಪಾಂಡೆ, ಶಂಕರ ಮುಗ್ಗನವರ, ಸುಪ್ರೀತ ಜಾಗನೂರ,ಸುರೇಶ ಚಿಗಡೊಳ್ಳಿ,ಉದ್ದಪ್ಪ ಬಟ್ಟಿ, ಅಜೀತ ಕೊಂಗನೊಳ್ಳಿ, ಭೀಮಶಿ ಚೌಕಶಿ, ಪಾಂಡುರಂಗ ಕರಿಗಾರ, ಶಿವಬಸು ವನಕೆ ಸೇರಿದಂತೆ ರೈತರು ಮತ್ತು ಸಂಘಟನೆಯ ಕಾರ್ಯಕರ್ತರು ಇದ್ದರು. ಕಾರ್ಯಕ್ರಮವನ್ನು ವೀರಣ್ಣಾ ಸಂಗಮ್ಮನವರ ಸ್ವಾಗತಿಸಿ,ನಿರೂಪಿಸಿದರು.