ಗೋಕಾಕ:ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಸ್ವಂತ ಉದ್ಯೋಗಕ್ಕೆ ಅರ್ಜಿ ಆಹ್ವಾನ
ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಸ್ವಂತ ಉದ್ಯೋಗಕ್ಕೆ ಅರ್ಜಿ ಆಹ್ವಾನ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 30 :
ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಸ್ವಂತ ಉದ್ಯೋಗ ಹಮ್ಮಿಕೊಳ್ಳಲು 18 ರಿಂದ 55 ವರ್ಷದ ಮಹಿಳೆಯರಿಗಾಗಿ ಮತ್ತು 18 ರಿಂದ 60 ವಯೋಮಿತಿಯ ಬೀದಿ ಬೀದಿ ವ್ಯಾಪಾರ ಮಾಡುವ ಮಹಿಳೆಯರಿಗೆ ಸಹಾಯಧನ ನೀಡಲು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗಿನಿ ಯೋಜನೆಗೆ ಸಂಬಂಧಿಸಿದಂತೆ ತಾಲೂಕಿನ ಎಸ್‍ಸಿ/ಎಸ್‍ಟಿ, ವಿಕಲಚೇತನ, ವಿಧವೆ, ಅಲ್ಪ ಸಂಖ್ಯಾತ ಹಾಗೂ ಇತರೆ ಮಹಿಳೆಯರು ಸೇರಿದಂತೆ ಒಟ್ಟು 15 ಫಲಾನುಭವಿಗಳಿಗೆ ಬ್ಯಾಂಕ ಸಾಲದ ಮೂಲಕ ಆದಾಯೋತ್ಪನ್ನ ಚಟುವಟಿಕೆಗಳನ್ನು ಪ್ರಾರಂಭಿಸಲು ಅವಕಾಶವಿದೆ. ಸಮೃದ್ದಿ ಯೋಜನೆಯಡಿ 18 ಮಹಿಳೆಯರಿಗೆ ಸಹಾಯಧನ ನೀಡಲಾಗುವುದು ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಕಿರುಸಾಲ, ಬಡ್ಡಿ ರಹಿತ ಸಾಲ. ಗುರಿ-1ಇದ್ದು ಇತರೆ ಸಂಘಗಳಿಗೆ ಮಾತ್ರ ನೀಡಲಾಗುವುದು.
ಆಸಕ್ತ ಮಹಿಳೆಯರು ಉದ್ಯೋಗಿನಿ ಹಾಗೂ ಸಮೃದ್ದಿ ಯೋಜನೆ ಮತ್ತು ಕಿರು ಸಾಲದ ಯೋಜನೆಯ ಪ್ರಯೋಜನ ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ಕಛೇರಿಗೆ ಅಗಸ್ಟ-14 ರೊಳಗೆ ಸಲ್ಲಿಸಬೇಕು. ಉದ್ಯೋಗಿನಿ ಹಾಗೂ ಸಮೃದ್ದಿ ಯೋಜನೆಗಾಗಿ ಅರ್ಜಿಗಳು ಶಿಶು ಅಭಿವೃದ್ದಿ ಯೋಜನೆ ಗೋಕಾಕ ಕಛೇರಿಯಲ್ಲಿ ಉಚಿತವಾಗಿ ಲಭ್ಯ ಇವೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08332-226365 ಮೂಲಕ ಸಂಪರ್ಕಿಸಬೇಕೆಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಲ ಕಾಂಬಳೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.