ಗೋಕಾಕ:ಪ್ರವಾಹ ಭೀತಿ ಹಿನ್ನೆಲೆ : ನದಿ ತೀರದ ಜಲಾವೃತಗೊಂಡ ಓಣಿಗಳಿಗೆ ಎ.ಸಿ ಶಿವಾನಂದ ಭಜಂತ್ರಿ ಭೇಟಿ ಪರಿಶೀಲನೆ
ಪ್ರವಾಹ ಭೀತಿ ಹಿನ್ನೆಲೆ : ನದಿ ತೀರದ ಜಲಾವೃತಗೊಂಡ ಓಣಿಗಳಿಗೆ ಎ.ಸಿ ಶಿವಾನಂದ ಭಜಂತ್ರಿ ಭೇಟಿ ಪರಿಶೀಲನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :
ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಹಿಡಕಲ್ ಜಲಾಶಯದ ಒಳಹರಿವು ಹೆಚ್ಚಾಗಿ ನಗರದ ಉಪ್ಪಾರ ಓಣಿ, ಬೊಜಗಾರ ಓಣಿ,ಕುಂಬಾರ ಓಣಿ, ಅನಾರ ಮೋಹಲ್ಲಾ (ದಾಳಂಬ್ರಿ ತೋಟ) , ಕಿಲ್ಲಾ , ಬಣಗಾರ ಓಣಿ, ಢೋರ ಓಣಿ, ಕಲಾಲ ಓಣಿ ಸೇರಿದಂತೆ ಜಲಾವೃತ ಗೊಂಡ ಪ್ರದೇಶಗಳಿಗೆ ಸೋಮವಾರದಂದು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಭೇಟಿ ನೀಡಿ ಪರಿಶೀಲಿಸಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದಲ್ಲಿ ಈಗಾಗಲೇ ಏಳು ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಸುರಕ್ಷಿತವಾಗಿ ಅಲ್ಲಿ ಜಲಾವೃತಗೊಂಡ ಪ್ರದೇಶದ ಸಾರ್ವಜನಿಕರನ್ನು ಸುರಕ್ಷಿತವಾಗಿ ಅಲ್ಲಿಗೆ ಸ್ಥಳಾಂತರಿಸಿ ಅವರಿಗೆ ಊಟ , ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಂಗಳವಾರ ಮಧ್ಯಾಹ್ನವು ಸಹ 50 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚಿನ ಪ್ರಮಾಣದ ನೀರನ್ನು ಘಟಪ್ರಭಾ ನದಿಗೆ ಬಿಟ್ಟಿರುವುದರಿಂದ ನದಿ ತೀರದ ಗ್ರಾಮಗಳು ಹಾಗೂ ಗೋಕಾಕ ನಗರದ ನದಿ ತೀರದ ಓಣಿಗಳಲ್ಲಿ ಸಾರ್ವಜನಿಕರು ಜಾಗೃಕತೆಯಿಂದ ಇರಬೇಕೆಂದು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ವಿನಂತಿಸಿದ್ದಾರೆ
ಹಿದೆಂದು ಕಾಣದ ಪ್ರವಾಹ ದಿಂದ ಗೋಕಾಕಿನ ಜನತೆ ತತ್ತರಿಸಿದ್ದು ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಮತ್ತು ಮಾರ್ಕಂಡೇಯ (ಚಿಕ್ಕೋಳಿ) ಸೇತುವೆಗಳು ಸಂಪೂರ್ಣ ಜಲಾವೃತಗೊಂಡ ಪರಿಣಾಮ ಸಂಚಾರ ಬಂದ ಆಗಿ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ವ್ಹಿ.ಎಸ್.ತಡಸಲೂರ, ಗಜಾಕೋಶ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದು ಪ್ರವಾಹ ಪರಿಸ್ಥಿಯನ್ನು ಅವಲೋಕಿಸಿದರು .