ಗೋಕಾಕ:ಪ್ರವಾಹದಲ್ಲಿ ಸಿಲುಕಿದ 16 ಕ್ಕೂ ಹೆಚ್ಚುಜಾನುವಾರುಗಳ ಸುರಕ್ಷಿತ ಸಂರಕ್ಷಣೆ
ಪ್ರವಾಹದಲ್ಲಿ ಸಿಲುಕಿದ 16 ಕ್ಕೂ ಹೆಚ್ಚುಜಾನುವಾರುಗಳ ಸುರಕ್ಷಿತ ಸಂರಕ್ಷಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :
ಸಮೀಪದ ಕೊಣ್ಣೂರ ಪಟ್ಟಣದ ಹೊರವಲಯದಲ್ಲಿರುವ ದಾದನ್ನವರ ಕುಟುಂಬದವರ ಹೊಲದಲ್ಲಿ ಗುಡಿಸಲಿನಲ್ಲಿ ಕಟ್ಟಲಾದ 16 ಕ್ಕೂ ಹೆಚ್ಚು ಜಾನುವಾರಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ಸಲುಕಿದ ಪರೀಣಾಮ ಪಟ್ಟಣದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಎತ್ತು, ಆಕಳು, ಎಮ್ಮೆ ಮತ್ತು ಕುದುರೆ ಸೇರಿದಂತೆ 16 ಕ್ಕೂ ಹೆಚ್ಚು ಜಾನುವಾರಗಳನ್ನು ಗುಡಿಸಲಿನಲ್ಲಿ ಎಂದಿನಂತೆ ಕಟ್ಟಲಾಗಿತ್ತು. ನಿನ್ನೆ ರಾತ್ರಿ ಏಕಾ ಏಕಿ ಘಟಪ್ರಭಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಪ್ರವಾಹದಲ್ಲಿ ಸಿಲುಕಿದ ಜಾನುವಾರುಗಳನ್ನು ರಕ್ಷಿಸಲು ಅಧಿಕಾರಿಗಳು ಹಾಗೂ ಸಾರ್ವಜನಿಕರು ಹರಸಾಹಸ ಪಡಬೇಕಾಯಿತು. ಕೊನೆಯಲ್ಲಿ ಕ್ರೇನದ ಸಹಾಯದಿಂದ ಎಲ್ಲ ಜಾನುವಾರುಗಳನ್ನು ನೀರಿನಿಂದ ಹೊರಗೆ ತೆಗೆದು ಸುರಕ್ಷಿತವಾದ ಸ್ಥಳಗಳಿಗೆ ಸಾಗಿಸಲಾಯಿತು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.