RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸಂತ್ರಸ್ತರ ಜೊತೆಯಲ್ಲಿ ಬಕ್ರೀದ್ ಹಬ್ಬ ಆಚರಣೆ : ಮಾನವೀಯತೆ ಮೆರೆದ ಮುಖಂಡರು

ಗೋಕಾಕ:ಸಂತ್ರಸ್ತರ ಜೊತೆಯಲ್ಲಿ ಬಕ್ರೀದ್ ಹಬ್ಬ ಆಚರಣೆ : ಮಾನವೀಯತೆ ಮೆರೆದ ಮುಖಂಡರು 

ನೂರಾನಿ ಮಸೀದಿಯಲ್ಲಿ ಊಟ ಬಡಿಸುತ್ತಿರುವ ಎಚ್. ಡಿ.ಮುಲ್ಲಾ ಮತ್ತು ನೂರಾನಿ ಮಸೀದಿ ಮುಖಂಡರು

ಸಂತ್ರಸ್ತರ ಜೊತೆಯಲ್ಲಿ ಬಕ್ರೀದ್ ಹಬ್ಬ ಆಚರಣೆ : ಮಾನವೀಯತೆ ಮೆರೆದ ಮುಖಂಡರು

 

 

 

 

ನಗರದ ಫಾತಿಮಾ ಹೈಸ್ಕೂಲ್ ನಲ್ಲಿ ಈದ್ ಊಟ ಬಡಿಸುತ್ತಿರುವ ಸ್ವಯಂ ಸೇವಕರು

 

 

 

ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಗೋಕಾಕನ ಹೊಸಪೇಟೆ ಓಣಿಯ ನೂರಾನಿ ಮಸೀದಿಯಲ್ಲಿ ಆಶ್ರಯ ಪಡೆದ ಸುಮಾರು 300 ಕ್ಕೂ ಹೆಚ್ಚು ನಿರಾಶ್ರಿತರು ಜಾತಿ ಧರ್ಮ ಮರೆತು ಇಂದು ಈದುಲ್ ಅಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಿದರು .

ಘಟಪ್ರಭಾ ನದಿ ಪ್ರವಾಹ ಹಿನ್ನೆಲೆಯಲ್ಲಿ ಎಲ್ಲವು ಕಳೆದುಕೊಂಡ ಗೋಕಾಕಿನ ಜನತೆ ನಿರಾಶ್ರಿತರಾಗಿದ್ದಾರೆ. ನೂರಾರು ಜನರ ಮನೆಗಳು ನೆಲಸಮವಾಗಿ ಹಬ್ಬವನ್ನು ಆಚರಿಸದ ಧಾರುಣ ಸ್ಥಿತಿಯಲ್ಲಿ ಇದ್ದ ನೂರಾರು ಕುಟುಂಬಗಳೊಂದಿಗೆ ಜಾತಿ,ಬೇಧ ಮರೆತು ಇಂದಿಲ್ಲಿ ಈದ್ ಸಂಭ್ರಮವನ್ನು ಸರಳವಾಗಿ ಆಚರಿಸಿದರು.

ನೂರಾನಿ ಮಸೀದಿ, ಫಾತಿಮಾ ಹೈಸ್ಕೂಲ್, ಲಕ್ಕಡ ಗಲ್ಲಿ, ಮಸೀದಿ ಸೇರಿದಂತೆ ನಗರದ ಇತರ ಕಡೆಗಳಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಎಲ್ಲರೂ ಭಾವೈಕತೆಯಿಂದ ಈದ್ ಆಚರಿಸಿದರು.
ನಗರದ ನಿವೃತ್ತ ಸರಕಾರಿ ನೌಕರ , ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಎಚ್.ಡಿ.ಮುಲ್ಲಾ ಮತ್ತು ನೂರಾನಿ ಮಸೀದಿನ ಮುಖಂಡರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಆಸೀಫ್ ಮುಲ್ಲಾ, ಮುಸ್ತಾಕ ಖಂಡಾಯತ, ಸಾದಿಕ ಮೋಮಿನ, ರಫೀಕ ಮುಲ್ಲಾ, ರಪೀಕ ಬಾಳಪ್ರವೇಶ, ಅಬ್ಬು ಮುಜಾವರ, ಇರ್ಷಾದ್ ಬಾಳಪ್ರವೇಶ, ಮದಾರ ಜಕಾತಿ ಇತರರು ಇದ್ದರು.

Related posts: