RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಪ್ರವಾಹ ಹಿನ್ನೆಲೆ : ನಗರದ ಹಲವು ಕಡೆ ಸತೀಶ ಶುಗರ್ಸ ಲಿ. ವತಿಯಿಂದ ಸ್ವಚ್ಛತಾ ಕಾರ್ಯ

ಗೋಕಾಕ:ಪ್ರವಾಹ ಹಿನ್ನೆಲೆ : ನಗರದ ಹಲವು ಕಡೆ ಸತೀಶ ಶುಗರ್ಸ ಲಿ. ವತಿಯಿಂದ ಸ್ವಚ್ಛತಾ ಕಾರ್ಯ 

ಪ್ರವಾಹ ಹಿನ್ನೆಲೆ : ನಗರದ ಹಲವು ಕಡೆ ಸತೀಶ ಶುಗರ್ಸ ಲಿ. ವತಿಯಿಂದ ಸ್ವಚ್ಛತಾ ಕಾರ್ಯ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :

ವಾಲ್ಮೀಕಿ ವೃತ್ತದಲ್ಲಿ ಸತೀಶ ಶುಗರ್ಸ ನ ಸಿಬ್ಬಂದಿಗಳು ಸ್ವಚತಾ ಕಾರ್ಯದಲ್ಲಿ ತೊಡಗಿರುವದು

 

 

ಕಳೆದ ಐದಾರು ದಿನಗಳಿಂದ ಸುರಿಯ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಿಸಿದ್ದ, ಗೋಕಾಕ ನಗರದ ಭಾಗಶಃ ಪ್ರದೇಶಗಳು ಜಲಾವೃತ್ತಗೊಂಡು ನದಿಯಲ್ಲಿಯ ಹರಿವಿನಿಂದ ಸಾಕಷ್ಟು ಪ್ರಮಾಣದ ಕಸ, ಕಡ್ಡಿ , ಕಂಟೀ, ಸೇರಿದಂತೆ ಹಲವು ಬಗೆಯ ತ್ಯಾಜ್ಯ ವಸ್ತುಗಳಿಂದ ಗೊಬ್ಬೆಂದು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ಇದನ್ನು ಸ್ವಚ್ಛಗೊಳಿಸುವ ಕಾರ್ಯ ನರಗಸಭೆಯಿಂದ ಭಯದಿಂದ ಸಾಗಿದರು ಸಹ ನಗರಸಭೆ ಸಿಬ್ಬಂದಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಸತೀಶ ಶುಗರ್ಸ ಲಿ.ಹುಣಶ್ಯಾಳ ಪಿ.ಜಿ ಸಿಬ್ಬಂದಿಗಳಿಂದ ಸೋಮವಾರದಂದು ನಗರದ ವಾಲ್ಮೀಕಿ ವೃತ್ತ, ಬ್ಯಾಳಿಕಾಟಾ ,ಎಪಿಎಂಸಿ ರಸ್ತೆ ಸೇರಿದಂತೆ ಹಲವು ಕಡೆಗಳ ಪ್ರದೇಶಗಳನ್ನು ಸತೀಶ ಶುಗರ್ಸನ ಸುಮಾರು 40 ಕ್ಕೂ ಹೆಚ್ಚು ಸಿಬ್ಬಂದಿಗಳು ಸ್ವಚ್ಛಗೊಳಿಸುವ ಸೇವಾ ಕಾರ್ಯವನ್ನು ಮಾಡಿದರು.

 

 

Related posts: