RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವಚ್ಛತೆಗಾಗಿ ಜೆಸಿಬಿ ಹಾಗೂ ಟ್ಯಾಕ್ಟರ್‍ಗಳನ್ನು ನೀಡಿದ ಸತೀಶ ಶುಗರ್ಸ ಕಾರಖಾನೆ

ಗೋಕಾಕ:ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವಚ್ಛತೆಗಾಗಿ ಜೆಸಿಬಿ ಹಾಗೂ ಟ್ಯಾಕ್ಟರ್‍ಗಳನ್ನು ನೀಡಿದ ಸತೀಶ ಶುಗರ್ಸ ಕಾರಖಾನೆ 

ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವಚ್ಛತೆಗಾಗಿ ಜೆಸಿಬಿ ಹಾಗೂ ಟ್ಯಾಕ್ಟರ್‍ಗಳನ್ನು ನೀಡಿದ ಸತೀಶ ಶುಗರ್ಸ ಕಾರಖಾನೆ

 

 

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 15 :

 

 

ಇಲ್ಲಿಯ ಜಲಪ್ರವಾಹದಿಂದ ಹಾನಿಗೊಳದ ಪ್ರದೇಶಗಳಿಗೆ ಸತೀಶ ಶುಗರ್ಸ್ ಲಿ. ವತಿಯಿಂದ ಸ್ವಚತಾ ಕಾರ್ಯಕ್ಕೆ ಟ್ಯಾಕ್ಟರ್ ಹಾಗೂ ಜೆಸಿಬಿಗಳನ್ನು ಹಾಗೂ ಕಾರ್ಮಿಕರನ್ನು ನಿಯೋಜಿಸಲಾಯಿತು.
25 ಟ್ಯಾಕ್ಟರ್‍ಗಳನ್ನು ಹಾಗೂ 5ಜೆಸಿಬಿ ನೂರಾರು ಕಾರ್ಮಿಕರನ್ನು ನಗರದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಳುಹಿಸಲಾಗಿದ್ದು, ನಗರದ ಸ್ವಚ್ಚತೆಗೆ ಹಾಗೂ ಹಾನಿಗೊಳಗಾದ ಮನೆಗಳಲ್ಲಿ ಮಣ್ಣಗಳನ್ನು ತೆಗೆಯಲು ಉಪಯೋಗಿಸಿಕೊಳ್ಳಬೇಕು. ನಗರದ ಎಲ್ಲ ಭಾಗಗಳು ಸಂಪೂರ್ಣವಾಗಿ ಸ್ವಚ್ಚ ಗೊಳ್ಳುವವರೆಗೆ ಈ ಕಾರ್ಯ ನಡೆಯಲಿದೆ ಎಂದು ಕಾರ್ಖಾನೆಯ ಎಮ್.ಡಿ. ಅವರು ಪತ್ರಿಕೆಗೆ ತಿಳಿಸಿದ್ದಾರೆ. ಈ ಕಾರ್ಯದಲ್ಲಿ ಸಂತ್ರಸ್ತರು ತಾಳ್ಮೆಯಿಂದ ಸಹಕರಿಸಿಬೇಕೆಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಮ್‍ಸಿ ನಿರ್ದೇಶಕ ಬಸವರಾಜ ಸಾಯನ್ನವರ, ಶಿವು ಪಾಟೀಲ, ರಿಯಾಜ ಚೌಗಲಾ, ಪೌರಾಯುಕ್ತ ಶಿವಾನಂದ ಹಿರೇಮಠ, ಆರ್.ಎಸ್.ರಂಗಸುಭೆ, ಜಯೇಶ ತಾಂಬೋಳೆ, ಯಲ್ಲಪ್ಪ ಪೂಜೇರಿ, ಕುಮಾರ ಕೋಳಿ, ಚಂದ್ರಕಾಂತ ಈಳಿಗೇರ, ರಮೇಶ ಕಳ್ಳಿಮನಿ ಸೇರಿದಂತೆ ಅನೇಕರು ಇದ್ದರು.

Related posts: