RNI NO. KARKAN/2006/27779|Sunday, December 15, 2024
You are here: Home » breaking news » ಗೋಕಾಕ:ನೆರೆ ಹಾವಳಿಯಿಂದ ಹಾನಿಗೊಳಗಾದರೂ ಮಾನವೀಯತೆ ಮೆರೆದ ವ್ಯಾಪಾರಸ್ಥ

ಗೋಕಾಕ:ನೆರೆ ಹಾವಳಿಯಿಂದ ಹಾನಿಗೊಳಗಾದರೂ ಮಾನವೀಯತೆ ಮೆರೆದ ವ್ಯಾಪಾರಸ್ಥ 

ನೆರೆ ಹಾವಳಿಯಿಂದ ಹಾನಿಗೊಳಗಾದರೂ ಮಾನವೀಯತೆ ಮೆರೆದ ವ್ಯಾಪಾರಸ್ಥ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 16 :

 
ನೆರೆ ಹಾವಳಿಯಿಂದ ಹಾನಿಗೊಳಗಾದ ಸುಮಾರು 15 ಲಕ್ಷಕ್ಕೂ ಹೆಚ್ಚು ಬೆಲೆಯ 700ಕ್ಕೂ ಅಧಿಕ ಬತ್ತದ ಚೀಲಗಳನ್ನು ರೈತರ ಜಾನುವಾರುಗಳಿಗೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ,
ಇಲ್ಲಿಯ ವಾಲ್ಮೀಕಿ ವೃತ್ತದ ಎಪಿಎಮ್‍ಸಿ ರಸ್ತೆಯಲ್ಲಿ ಕಳೆದ ಕೆಲದಿನಗಳ ಹಿಂದೆ ಬಂದ ಪ್ರವಾಹದಿಂದ ಚುನಮರಿ ಬಟ್ಟಿಯಲ್ಲಿ ಶೇಖರಿಸಿಟ್ಟ ಬತ್ತದ ಚೀಲಗಳು ನೀರಿನಲ್ಲಿ ತೊಯ್ದು ಹೋಗಿದ್ದವು. ಚುನಮರಿ ಬಟ್ಟಿಯ ಮಾಲಿಕ ಮಾರುತಿ ಗೌಡರ ಅವರು ಬತ್ತದ ಚೀಲಗಳನ್ನು ಒಣಗಿಸಿ ಮರುಬಳಕೆ ಮಾಡಬಹುದಾಗಿತ್ತು. ಆದರೆ ಅದಕ್ಕೆ ಅವರು ಮಹತ್ವವನ್ನು ನೀಡದೇ ಪ್ರವಾಹದಿಂದಾಗಿ ಆಗಿರುವ ಮೇವಿನ ಕೊರತೆಯನ್ನು ಅರಿತು ರೈತರನ್ನು ಕರೆದು ಕಳೆದ 4 ದಿನಗಳಿಂದ ರೈತರ ಜಾನುವಾರುಗಳಿಗೆ ಆಹಾರವಾಗಿ ಉಪಯೋಗಿಸಲು ಉಚಿತವಾಗಿ ವಿತರಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಬಸಪ್ಪ ರಂಕನಕೊಪ್ಪ, ಈರಪ್ಪ ನೇರಲಿ ಸೇರಿದಂತೆ ಅನೇಕ ರೈತರು ಇದ್ದರು.

Related posts: