RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ನೆರೆ ಪೀಡಿತ ಪ್ರದೇಶಗಳ ಸರ್ವೆ ಕಾರ್ಯ ಮುಗಿದ ನಂತರ ಪುನರ್ವಸತಿ ಬಗ್ಗೆ ತಿರ್ಮಾನ : ಮಾಜಿ ರಾಜ್ಯಸಭಾ ಸದಸ್ಯ ಮೌಲಾನ ಮಹಮೂದ ಮದನಿ

ಗೋಕಾಕ:ನೆರೆ ಪೀಡಿತ ಪ್ರದೇಶಗಳ ಸರ್ವೆ ಕಾರ್ಯ ಮುಗಿದ ನಂತರ ಪುನರ್ವಸತಿ ಬಗ್ಗೆ ತಿರ್ಮಾನ : ಮಾಜಿ ರಾಜ್ಯಸಭಾ ಸದಸ್ಯ ಮೌಲಾನ ಮಹಮೂದ ಮದನಿ 

ನೆರೆ ಪೀಡಿತ ಪ್ರದೇಶಗಳ ಸರ್ವೆ ಕಾರ್ಯ ಮುಗಿದ ನಂತರ ಪುನರ್ವಸತಿ ಬಗ್ಗೆ ತಿರ್ಮಾನ : ಮಾಜಿ ರಾಜ್ಯಸಭಾ ಸದಸ್ಯ ಮೌಲಾನ ಮಹಮೂದ ಮದನಿ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 17 :

 

 

 

ಪ್ರವಾಹದಿಂದ ಪೀಡಿತ ಪ್ರದೇಶಗಳ ಸರ್ವೆ ಕಾರ್ಯ ಮುಗಿದ ನಂತರ ಅವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ತಿರ್ಮಾನ ಕೈಗೋಳ್ಳಲಾಗುವದು ಎಂದು ಮಾಜಿ ರಾಜ್ಯಸಭಾ ಸದಸ್ಯ ಜಮಾತೆ -ಉಲ್ಲಮಾಹೆ ಹಿಂದ್ ನ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನ ಮಹಮೂದ ಮದನಿ ಹೇಳಿದರು

ಶನಿವಾರದಂದು ಗೋಕಾಕ ನಗರದ ಪ್ರವಾಹ ಪೀಡಿತ ಪ್ರದೇಶಗಳ ವಿಕ್ಷಣೆ ನಡೆಯಿಸಿ, ಜಾಮೀಯಾ ಮಸೀದಿಯಲ್ಲಿ ನೆರೆ ಸಂತ್ರಸ್ತರಿಗೆ ರೇಷನ್ ವಿತರಿಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು

ಮಹಾ ಪ್ರವಾಹದಿಂದ ಗೋಕಾಕ ಸೇರಿದಂತೆ ಕರ್ನಾಟಕದ ಬಹುಭಾಗ ಗಂಭೀರ ಹಾನಿಗೆ ಒಳಗಾಗಿದ್ದು , ಸಾವಿರಾರು ಕುಟುಂಬಗಳ ನಿರಾಶ್ರಿತರವಾಗಿವೆ ಹಾನಿಗೋಳಗಾದ ಎಲ್ಲ ಪ್ರದೇಶಗಳಲ್ಲಿ ಜಮಾತೆ -ಉಲ್ಲಮಾಹೆ ಹಿಂದ್ ನ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಪದಾಧಿಕಾರಿಗಳಿಂದ ಸರ್ವೆ ಕಾರ್ಯ ನಡೆಸಲಾಗುತ್ತಿದೆ . ಎಷ್ಟು ಮನೆಡಳು ಬಿದ್ದಿವೆ , ಎಷ್ಟೇಷ್ಟು ಹಾನಿಯಾಗಿದೆ, ಏನೇನು ಹಾನಿಯಾಗಿದೆ ಎಂಬುದರ ಸಂಪೂರ್ಣ ಸರ್ವೆ ಕಾರ್ಯ ಮುಗಿದ ತಕ್ಷಣ ಮನೆ,ವ್ಯಾಪಾರ ಕಳೆದುಕೊಂಡು ನಿರಾಶ್ರಿತರಾದವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವದರ ಜೊತೆಗೆ ಅವರಿಗೆ ವ್ಯಾಪಾರ ಮತ್ತು ಪುನರ್ವಸತಿ ಕಲ್ಪಿಸುವ ಬಗ್ಗೆ ತಿರ್ಮಾನಿಸಲಾಗುವದು.

ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಈ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಲು ತಿಳಿಸಲಾಗಿದೆ ಆದಷ್ಟು ಬೇಗ ಅವರು ತಮ್ಮ ಕಾರ್ಯವನ್ನು ಆರಂಭಿಸಲಿದ್ದಾರೆ ಎಂದ ಮಾಜಿ ಸಂಸದ ಮೌಲಾನಾ ಮಹಮೂದ ಮದನಿ ಗೋಕಾಕ ಸೇರಿದಂತೆ ರಾಜ್ಯದಾದ್ಯಂತ ನಿರಾಶ್ರಿತರಾದರವ ಪರವಾಗಿ ಇಡಿ ದೇಶವೆ ನಿಂತಿದೆ ಯಾರು ಅಂಜದೆ ಧೈರ್ಯದಿಂದ ಇದ್ದು ಸಹಾಯ ನೀಡುವವರಿಗೆ ಸಹರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಇಲ್ಲಿಯ ಜಾಮೀಯ ಮಸೀದಿಯಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಸಕಲ ಮನುಕುಲದ ಉದ್ಧಾರಕ್ಕಾಗಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಜಮಾತ್ ಉಲ್ಲಮಾಹೆ ಹಿಂದ್ ನ ರಾಜ್ಯಾಧ್ಯಕ್ಷ ಹಾಫೀಜ ಜಾವೇದ ಸಿದ್ದಿಕಿ, ಮುಫ್ತಿ ಶಂಸೋದ್ದಿನ, ಬೆಳಗಾವಿಯ ಜಿಲ್ಲಾಧ್ಯಕ್ಷ ಮೌಲಾನ ಸಲೀಮ ನಧವಿ, ಮೌಲಾನಾ ಆರೀಫ, ಮೌಲಾನಾ ಬಶೀರ್ ಅಮಲಜರಿ,ಮಹಮ್ಮದ್ ಯೂನೂಸ,ಹಾಫೀಜ ಜಮಶೆದ,ಮೌಲಾನಾ ಅಬ್ಬದುಲ್ಲಾ ಕೊಣ್ಣೂರು, ಮೌಲಾನಾ ವಜೀದುಲ್ಲಾ ಕೌಜಲಗಿ, ಮೌಲಾನಾ ಅಬ್ಬುಬಕ್ಕರ ಮೂಡಲಗಿ, ಅಮೀರಸಾಬ ಹಾಜಿ ಕುತುಬುದ್ದೀನ ಬಸ್ಸಾಪೂರ,ಎಚ್.ಡಿ.ಮುಲ್ಲಾ, ಇಸ್ಮಾಯಿಲ್ ಗೋಕಾಕ,ಜಾವೇದ ಗೋಕಾಕ, ಇಲಾಹಿ ಖೈರದಿ,ಜಾಕೀರ ಕುಡಚಿಕರ ಸೇರಿದಂತೆ ಇತರರು ಇದ್ದರು .

Related posts: