ಗೋಕಾಕ:ಜಮಾತೆ ಉಲ್ಲಮಾಹೆ ಹಿಂದ್ ನ ಕಾರ್ಯ ಸರ್ವರಿಗೂ ಮಾದರಿ : ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ
ಜಮಾತೆ ಉಲ್ಲಮಾಹೆ ಹಿಂದ್ ನ ಕಾರ್ಯ ಸರ್ವರಿಗೂ ಮಾದರಿ : ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :
ಜಾತಿ ,ಧರ್ಮ ಬದಿಗೋತ್ತಿ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಿರುವ ಜಮಾತೆ ಉಲ್ಲಮಾಹೆ ಹಿಂದ್ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ ಹೇಳಿದರು
ಮಂಗಳವಾರದಂದು ನಗರದ ಕುಂಬಾರ ಓಣಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜಮಾತೆ ಉಲ್ಲಮಾಹೆ ಹಿಂದ್ ತಾಲೂಕಾ ಘಟಕದಿಂದ ಗೋಕಾಕಿನ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆರೆ ಪ್ರವಾಹದಿಂದ ಹಾನಿಗೊಳಗಾಗಿ ಸಂಕಷ್ಟದ ಪರಿಸ್ಥಿಯನ್ನು ಎದುರಿಸುತ್ತಿರುವ ಗೋಕಾಕಿನ ಜನತೆಗೆ ರಾಜ್ಯದ ಹಲವು ಸಂಘಟನೆಗಳು ನೆರವು ನೀಡಿ ಎಲ್ಲವನ್ನು ಕಳೆದುಕೊಂಡ ನಿರಾಶ್ರಿತರಾದವರ ಬದುಕನ್ನು ಕಟ್ಟಲು ಶ್ರಮಿಸುತ್ತಿರುವದು ನಿಜವಾಗಲು ಹೆಮ್ಮೆಯ ಸಂಗತಿ ಅದರಲ್ಲಿ ಜಮಾತೆ ಉಲ್ಲಮಾಹೆ ಹಿಂದ್ ಸಂಘಟನೆ ದೂರದ ಹಿರೆಯೂರಿನಿಂದ ಬಂದು ನಿರಾಶ್ರಿತರಿಗೆ ನೆರವಾಗಿರುವದು ಶ್ಲಾಘನೀಯವಾಗಿದೆ ಎಂದು ಅಡಿವೆಪ್ಪ ಕಿತ್ತೂರ ಹೇಳಿದರು
ನಂತರ ನೆರ ಪ್ರವಾಹಕ್ಕೆ ಒಳಗಾದ ನಗರದ ಉಪ್ಪಾರ ಓಣಿ ಮತ್ತು ಕುಂಬಾರ ಓಣಿಗಳಿಗೆ ಹಿರಿಯೂರಿನ ಜಮಾತೆ ಉಲ್ಲಮಾಹೆ ಹಿಂದ್ ಸಂಘಟನೆಯಿಂದ ಪ್ರತಿ ಮನೆಮನೆಗಳಿಗೆ ತೆರಳಿ ಅಕ್ಕಿ,ಎಣ್ಣೆ, ಗೋಧಿ, ಬಕೆಟ್, ಜಂಬು, ಸಾಬೂನು, ಬಾಚನಿಕೆ ಸೇರಿದಂತೆ ಪ್ರತಿಯೊಂದು ಕುಟುಂಬ ಸದಸ್ಯರಿಗೆ ತಲಾ 4 ಸಾವಿರ ರು ಗಳ ಅಗತ್ಯ ವಸ್ತುಗಳ ಕೀಟ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರವಾಹಕ್ಕೆ ಒಳಗಾದ ಪ್ರದೇಶಗಳನ್ನು ವೀಕ್ಷಸಲು ಬಂದಿದ್ದ ಮಾಜಿ ಸಚಿವರಾದ ಎಂ.ಬಿ.ಪಾಟೀಲ ಮತ್ತು ಸತೀಶ ಜಾರಕಿಹೊಳಿ ಅವರು ಜಮಾತೆ ಉಲ್ಲಮಾಹೆ ಹಿಂದ್ ನ ಕಾರ್ಯವನ್ನು ಪ್ರಶಂಸಿಸಿದರು
ಈ ಸಂದರ್ಭದಲ್ಲಿ ಜಮಾತೆ ಉಲ್ಲಮಾಹೆ ಹಿಂದ್ ನ ಹಿರಿಯೂರಿನ ತಾಲೂಕಾಧ್ಯಕ್ಷ ಮೌಲಾನಾ ಅಬ್ಬದುಲ್ಲಾ , ಸದಾಶಿವ ಗುದಗಗೋಳ, ಮಲ್ಲಿಕ ಪೈಲವಾನ, ಲಿಂಗಪ್ಪ ಗೋಸಬಾಳ,ಗಣಪತಿ ತಹಶೀಲ್ದಾರ, ನಾಗಪ್ಪ ಹುಳ್ಳಿ, ವಿಠಲ ಪೂಜೇರಿ, ಮೌಲಾನಾ ಬಶೀರುಲ್ಲ ಹಕ್ಕ , ಮುಸ್ತಾಕ ಖಂಡಾಯತ, ಇಲಾಹಿ ಖೈರದಿ, ಹಾಫೀಜ ಯೂನೂಸ, ಜಾವೇದ ಗೋಕಾಕ, ರಿಯಾಜ ಚಟ್ನಿ,ಅಬ್ಬುಸಮೀ ತೆರದಾಳ, ಶೇರಖಾನ ಫನಿಬಂಧ,ಅಕ್ಬರ ಜಮಾದಾರ,ಜಾಕೀರ ಕುಡಚಿಕರ ಸೇರಿದಂತೆ ಇತರರು ಇದ್ದರು.