RNI NO. KARKAN/2006/27779|Sunday, February 16, 2025
You are here: Home » breaking news » ಗೋಕಾಕ:ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಿ : ಸರಕಾರಕ್ಕೆ ಮಾಜಿ ಸಚಿವ ರೇವಣ್ಣ ಆಗ್ರಹ

ಗೋಕಾಕ:ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಿ : ಸರಕಾರಕ್ಕೆ ಮಾಜಿ ಸಚಿವ ರೇವಣ್ಣ ಆಗ್ರಹ 

ಗೋಕಾದಲ್ಲಿ ಸಂತ್ರಸ್ತರ ಅಹವಾಲನ್ನು ಆಲಿಸುತ್ತಿರುವ ಮಾಜಿ ಸಚಿವ ರೇವಣ್ಣ

ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಿ : ಸರಕಾರಕ್ಕೆ ಮಾಜಿ ಸಚಿವ ರೇವಣ್ಣ ಆಗ್ರಹ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :

 

 

ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸರಕಾರಕ್ಕೆ ಆಗ್ರಹಿಸಿದರು

ಬುಧವಾರದಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡುತ್ತಾ ಸಂತ್ರಸ್ತರಿಗೆ ತಾತ್ಕಾಲಿಕ ಶೇಡಗಳನ್ನು ನಿರ್ಮಿಸಿ ಅಲ್ಲಿ ಅವರಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ತುರ್ತು ಪರಿಹಾರ ನೀಡಿ ಬೇಗನೆ ಮನೆಗಳನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಸೂಚಿಸಿದರು .

ಎಲ್ಲವನ್ನೂ ಕಳೆದುಕೊಂಡ ನಮಗೆ ಸರಕಾರ ಘೋಷಿಸಿದ ಪರಿಹಾರ ಸಾಕಾಗುವದಲ್ಲ ಹೆಚ್ಚಿನ ಪರಿಹಾರ ಕೋಡಿಸುವಂತೆ ಎಚ್.ಡಿ.ರೇವಣ್ಣ ಅವರನ್ನು ಸಂತ್ರಸ್ತರು ಆಗ್ರಹಿಸಿದರು. ಇದಕ್ಕೆ ಸ್ವಂದಿಸಿದ ಅವರು ಈ ಕುರಿತು ಸರಕಾರಕ್ಕೆ ಒತ್ತಾಯಿಸುವದಾಗಿ ಭರವಸೆ ನೀಡಿದರು .
ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರೆಡಿ , ಜೆಡೀ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ,ಜೆಡಿಎಸ್ ತಾಲೂಟಾಧ್ಯಕ್ಷ ಎಲ್.ಬಿ.ಹೂಳ್ಳೆರ ಸೇರಿದಂತೆ ಅನೇಕರು ಇದ್ದರು.

Related posts: