ಗೋಕಾಕ: ಕೃಷ್ಣಜನ್ಮಾಷ್ಟಮಿ ನಿಮಿತ್ಯ ಕೃಷ್ಣನ ವೇಷಧಾರಿಯಾಗಿ ಗಮನ ಸೆಳೆದ ಪುಟ್ಟ ಬಾಲಕ ಪ್ರೀನ್ಸ್ ಶಿಗಿಹೋಳಿ
ಕೃಷ್ಣನ ವೇಷದಲ್ಲಿ ಪುಟ್ಟ ಬಾಲಕ ಪ್ರೀನ್ಸ್ ಪ್ರವಿಣ ಶಿಗಿಹೋಳಿ.
ಕೃಷ್ಣಜನ್ಮಾಷ್ಟಮಿನಿಮಿತ್ಯ ಕೃಷ್ಣನ ವೇಷಧಾರಿಯಾಗಿ ಗಮನ ಸೆಳೆದ ಪುಟ್ಟ ಬಾಲಕ ಪ್ರೀನ್ಸ್ ಶಿಗಿಹೋಳಿ
ನಮ್ಮ ಬೆಳಗಾವಿ ಗೋಕಾಕ ಅ 23 :
ಇಲ್ಲಿಯ ಸುಣಗಾರ ಓಣಿಯ ಕುಮಾರ ಪ್ರೀನ್ಸ್ ಪ್ರವಿಣ ಶಿಗಿಹೋಳಿ ಎಂಬ 9 ತಿಂಗಳ ಪುಟ್ಟ ಬಾಲಕ ಕೃಷ್ಣಜನ್ಮಾಷ್ಠಮಿ ನಿಮಿತ್ತ ಕೃಷ್ಣನ ವೇಷಧಾರಿಯಾಗಿ ಎಲ್ಲರ ಗಮನ ಸೆಳೆದನ್ನು.
ಕೃಷ್ಣಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣಜನ್ಮಾಷ್ಟಮಿ
ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಇದನ್ನು ಆಚರಿಸುತ್ತಾರೆ.
ಗೋಕಾಕಿನಲ್ಲಿ ಕಳೆದ ವಾರದ ಹಿಂದೆ ಬಂದ ನೆರೆ ಹಾವಳಿಯಿಂದ ಈ ಹಬ್ಬವು ಸಹ ಅಷ್ಟೊಂದು ವೈಭದಿಂದ ಆಚರಣೆ ಆಗಲಿಲ್ಲ , ಪುಟ್ಟ ಬಾಲಕರು, ಶಾಲಾ ಮಕ್ಕಳು ಅಲ್ಲಲ್ಲಿ ಕೃಷ್ಣನ ವೇಷಧಾರಿಗಳಾಗಿ ಶಾಲೆಗಳಿಗೆ ತೆರಳಿದ್ದು ಕಂಡು ಬಂದಿತ್ತು.