ಗೋಕಾಕ:ಬಿಜೆಪಿ ನಗರ ಘಟಕ ಹಾಗೂ ಶ್ರೀರಾಮ ಸೇನೆಯಿಂದ ಸಂತ್ರಸ್ತರಿಗೆ ದಿನಬಳಿಕೆ ವಸ್ತುಗಳ ವಿತರಣೆ
ಬಿಜೆಪಿ ನಗರ ಘಟಕ ಹಾಗೂ ಶ್ರೀರಾಮ ಸೇನೆಯಿಂದ ಸಂತ್ರಸ್ತರಿಗೆ ದಿನಬಳಿಕೆ ವಸ್ತುಗಳ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 27 :
ನೆರೆಹಾವಳಿಯಿಂದ ಹಾನಿಗೊಳಗಾದ ನ್ಯಾಯವಾದಿಗಳ ಕುಟುಂಬಕ್ಕೆ ವಿತರಿಸುವಂತೆ ಬಿಜೆಪಿ ನಗರ ಘಟಕ ಹಾಗೂ ಶ್ರೀರಾಮ ಸೇನೆಯವರು ದಿನಬಳಿಕೆ ವಸ್ತುಗಳನ್ನು ನ್ಯಾಯವಾದಿಗಳ ಸಂಘಕ್ಕೆ ಮಂಗಳವಾರದಂದು ನೀಡಿದರು. ಇದೇ ಸಂದರ್ಭದಲ್ಲಿ ಸಂತೋಷ ನಾಯ್ಕರ 10 ಸಾವಿರ ರೂಗಳ ಸಹಾಯ ಧನದ ಚೇಕನ್ನು ಸಂಘಕ್ಕೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯೂ ಬಿ ಸಿಂಪಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್ ವಿ ದೇಮಶೆಟ್ಟಿ, ಪದಾಧಿಕಾರಿಗಳಾದ ಶಕೀಲ ಧಾರವಾಡಕರ, ಚಿದಾನಂದ ದೇಮಶೆಟ್ಟಿ, ಲಕ್ಕಪ್ಪ ತಾಹಶೀಲದಾರ, ಸಂತೋಷ ಹುಂಡೇಕರ, ಬಸವರಾಜ ಹಿರೇಮಠ, ರಾಜು ಹಿರೇಅಂಬಿಗೇರ, ವಿರೇಂದ್ರ ಏಕ್ಕೇರಿಮಠ, ಜಗದೀಶ, ಸಿ ಡಿ ಹುಕ್ಕೇರಿ, ರಾಜು ಜಾಧವ, ಸುನೀಲ ಮುರ್ಕಿಬಾವಿ ಸೇರಿದಂತೆ ಇತರರು ಇದ್ದರು.