RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜನರ ದಿಕ್ಕು ತಪ್ಪಸುತ್ತಿದ್ದಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜನರ ದಿಕ್ಕು ತಪ್ಪಸುತ್ತಿದ್ದಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ 

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜನರ ದಿಕ್ಕು ತಪ್ಪಸುತ್ತಿದ್ದಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ

 

 
ಕೆಎಂಎಫ್ ರಾಜ್ಯಾಧ್ಯಕ್ಷ ಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಕೆ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 29 :

 

 

 
ಪ್ರವಾಹ ಪೀಡಿತ ಜನರಿಗಾಗಿ ಬೆಂಗಳೂರಿನಲ್ಲಿ ಭಿಕ್ಷೆ ಬೆಡುತ್ತೆನೆಂದು ಹೇಳಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜನರ ದಿಕ್ಕು ತಪ್ಪಸುತ್ತಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು

ಗುರುವಾರದಂದು ನಗರದ ತಾ.ಪಂ ಕಛೇರಿಯಲ್ಲಿ ಕರೆದಿದ್ದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೋಳಲು ಬಂದ ಸಂದರ್ಭದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು

ಪ್ರವಾಹದಿಂದ ಹಾನಿಗೆ ಒಳಗಾದ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗೆ ಗೋಕಾಕ ಮತ್ತು ಮೂಡಲಗಿ ತಾಲೂಕಿಗೆ ಸರಕಾರ ಈಗಾಗಲೇ 10 ಕೋಟಿ ರೂ ಬಿಡುಗಡೆ ಮಾಡಿದೆ. 10 ಸಾವಿರ ರೂ ಗಳ ತಾತ್ಕಾಲಿಕ ಪರಿಹಾರ ಧನವನ್ನು ಸಹ ಎರೆಡು ತಾಲೂಕಿನಲ್ಲಿ ವಿತರಣೆ ಮಾಡಲಾಗುತ್ತಿದೆ ಆದರೂ ಸಹ ಶಾಸಕಿ ಯಾವ ಉದ್ದೇಶದಿಂದ ಈ ರೀತಿ ಹೇಳಿದ್ದಾರೆ ಗೋತ್ತಿಲ್ಲ ಒಬ್ಬ ಜವಾಬ್ದಾರಿಯುತ್ತ ಸ್ಥಾನದಲ್ಲಿದ್ದುಕೊಂಡು ಜನರ ದಿಕ್ಕು ತಪ್ಪಸಲಿಕ್ಕೆ ಈ ರೀತಿ ಮಾತನಾಡುವದು ಸರಿಯಲ್ಲ .ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳಲ್ಲಿ ಕೆಲಸ ಮಾಡುವಷ್ಷು ಶಕ್ತಿ ದೇವರು ನಮಗೆ ಕೊಟ್ಟದ್ದಾನೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಗ್ರಾಮೀಣ ಭಾಗದ ಜನರ ಕಣ್ಣನೊರೆಸಲಿ ಎಂದು ಶಾಸಕರು ಯಾರು ಯಾರ ಹತ್ತಿರನ್ನು ಭೀಕ್ಷೆ ಬೇಡುವ ಅವಶ್ಯಕತೆ ಇಲ್ಲ ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿ ಬಿಜೆಪಿ ಸರಕಾರ ಇದೆ ಎರೆಡು ಸರಕಾರಗಳು ಕೂಡಿ ಸಂತ್ರಸ್ತರ ಬದುಕನ್ನು ಕಟ್ಟಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಶಾಸಕರು ಹೇಳಿದರು .

ಉಮೇಶ ಕತ್ತಿ ಅವರಿಗೆ ಮಂತ್ರಿ ಮಾಡಲು ಶ್ರಮ: ಶಾಸಕ ಉಮೇಶ ಕತ್ತಿ ಅವರು ನಮ್ಮ ಜಿಲ್ಲೆಯ ಹಿರಿಯ ಶಾಸಕರು ಅವರಿಗೆ ಮಂತ್ರಿಸ್ಥಾನ ಕೋಡಬೇಕಾಗಿತ್ತು ಆದರೆ ಅದು ಈಗ ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಪಕ್ಷ ಅವರನ್ನು ಮಂತ್ರಿ ಸ್ಥಾನ ನೀಡುತ್ತದೆ . ನಾನು ವೈಯಕ್ತಿಕವಾಗಿ ಅವರ ಸಲುವಾಗಿ ಫೈಟ್ ಮಾಡಿ ಮಂತ್ರಿಸ್ಥಾನ ಕೋಡಿಸಲು ಪ್ರಯತ್ನಿಸುತ್ತೇನೆ ಅವರ ಬೆನ್ನಿಗೆ ನಿಂತು ಎಲ್ಲ ಸಹಾಯ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಕೋರ್ಟ್ ವಿಚಾರ ಮುಗಿದ ನಂತರ ನಿರ್ಧಾರ: ಅರ್ನಹ ಶಾಸಕರ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಅರ್ನಹ ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇರುದರಿಂದ ಏನು ಮಾತನಾಡಲು ಬರುವದಿಲ್ಲ ನ್ಯಾಯಾಲಯದ ನಿರ್ಧಾರ ಹೊರಬಿದ್ದ ನಂತರ ಅವರು ಬಿಜೆಪಿ ಸೆರುವದ್ದಾದರೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೋಳುತ್ತದೆ

ಶನಿವಾರ ನಾಮಪತ್ರ ಸಲ್ಲಿಕೆ : ಕೆಎಂಎಫ್ ರಾಜ್ಯಾಧ್ಯಕ್ಷನ ಸ್ಥಾನದ ಆಕಾಂಕ್ಷಿಯಾಗಿದ್ದು ಶನನಿವಾರದಂದು ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಾಮಪತ್ರ ಸಲ್ಲಿಸುತ್ತೇನೆ. ಒಟ್ಟು 16 ಜನ ನಿರ್ದೇಶಕರ ಪೈಕಿ ಅಧಿಕಾರಿಗಳು ಸೇರಿಕೊಂಡು 12 ಜನ ನಿರ್ದೇಶಕರು ನನ್ನ ಪರವಾಗಿದ್ದಾರೆ ಅವಿರೋಧ ಆಯ್ಕೆಯಾಗುವ ವಿಶ್ವಾಸವಿದೆ ಚುನಾವಣೆ ನಡೆದರೂ ಸಹ ಅದನ್ನು ಎದುರಿಸುತ್ತೇನೆ

ಸಚಿವಗೀರಿ ಮುಂದುವರೆಯುತ್ತದೆ : ರಾಜ್ಯದಲ್ಲಿ ಯಾವುದೇ ಸರಕಾರ ವಿದ್ದರೂ ಜಾರಕಿಹೊಳಿ ಕುಟುಂಬದಿಂದ ಒಬ್ಬರು ಸಚಿವರಾಗಿ ಇರುತ್ತಿದ್ದರು ಆದರೆ ಈಗ ಅದು ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಆ ಪರಂಪರೆಯನ್ನು ದೇವರು ಮುಂದುವರೆಸುತ್ತಾನೆ. ನಮ್ಮ ಕುಟುಂಬದಿಂದ ಯಾರಾದರೂ ಒಬ್ಬರು ಸಚಿವರಾಗುತ್ತೇವೆ

ಸಂತ್ರಸ್ತರಿಗೆ ಹೆಚ್ಚಿನ ಅನುದಾನಕ್ಕೆ ಒತ್ತಾಯ : ತಮ್ಮ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೋತ್ತಿ ಜಿಲ್ಲೆಯ ಎಲ್ಲ ಶಾಸಕರು ಸೇರಿಕೊಂಡು ಪ್ರವಾಹದಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಸರಕಾರದಿಂದ ಹೆಚ್ಚಿನ ಅನುದಾನವನ್ನು ಕೊಡಿಸಿ ಅವರ ಬದುಕನ್ನು ಕಟ್ಟಲು ಪ್ರಯತ್ನಿಸಬೇಕಾಗಿದೆ ಆ ನಿಟ್ಟಿನಲ್ಲಿ ಎಲ್ಲ ಶಾಸಕರು ಮುಂದಾಗಬೇಕೆಂದು ಶಾಸಕ ಬಾಲಚಂದ್ರ ಮನವಿ ಮಾಡಿದರು

Related posts: