RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಸೌರ್ಹಾದಯುತವಾಗಿ ಹಬ್ಬವನ್ನು ಆಚರಿಸಿ : ಐಜಿಪಿ ರಾಘವೇಂದ್ರ ಸುಹಾಸ

ಗೋಕಾಕ:ಸೌರ್ಹಾದಯುತವಾಗಿ ಹಬ್ಬವನ್ನು ಆಚರಿಸಿ : ಐಜಿಪಿ ರಾಘವೇಂದ್ರ ಸುಹಾಸ 

ಗೋಕಾಕ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಐಜಿಪಿ ರಾಘವೇಂದ್ರ ಸುಹಾಸ ಮಾತನಾಡುತ್ತಿರುವದು

ಸೌರ್ಹಾದಯುತವಾಗಿ ಹಬ್ಬವನ್ನು ಆಚರಿಸಿ : ಐಜಿಪಿ ರಾಘವೇಂದ್ರ ಸುಹಾಸ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 31 :

 

 
ಗಣೇಶ ಮತ್ತು ಮೊಹರಂ ಹಬ್ಬಗಳು ಒಂದೆಕಾಲಕ್ಕೆ ಬಂದಿರುವದರಿಂದ ಹಿಂದೂ ಮತ್ತು ಮುಸ್ಲಿಂ ಭಾಂಧವರು ಸೇರಿ ಸೌರ್ಹಾದಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಐಜಿಪಿ ರಾಘವೇಂದ್ರ ಸುಹಾಸ ಹೇಳಿದರು
ಸ್ಥಳೀಯ ತಾಪಂ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರವಾಹದಿಂದ ಹಾನಿಗೆ ಒಳಗಾಗಿದ ಜನರು ಈಗಷ್ಟೇ ಸಾಮಾನ್ಯ ಸ್ಥಿತಿಯತ್ತ ತಲುಪುತ್ತಿದ್ದಾರೆ ಇದರ ಮಧ್ಯ ಗಣೇಶ ಮತ್ತು ಮೊಹರಂ ಹಬ್ಬಗಳು ಬಂದಿವೆ ಯಾರು ಆಡಂಬರದ ಮಾಡದೆ ಸಂತ್ರಸ್ತರನ್ನು ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಆಚರಿಸಿ ನಿಮ್ಮೊಂದಿಗೆ ಇಡೀ ಪೊಲೀಸ ಇಲಾಖೆ ಇದೆ ಎಂದು ಅವರು

ಬೆಳಗಾವಿ ವಲಯದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ 7 ಲಕ್ಷ ಜನರನ್ನು ರಕ್ಷಿಸಲಾಗಿದೆ 16 ಸಾವಿರ ಜನರನ್ನು ಬೋಟ್ ಮೂಲಕ ಹಾಗೂ 350 ಜನರನ್ನು ಹೆಲಿಕಾಪ್ಟರ್ ಮೂಲಕ ತರಲು ಇಲಾಖೆಯಿಂದ ರಕ್ಷಣಾ ಕಾರ್ಯದಲ್ಲಿ ತೊಡಿದವರಿಗೆ ಸಹಕರಿಸಲಾಗಿದೆ .ಹಲವಾರು ಜನರ ಜಾನುವಾರು, ಬೆಳೆ, ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಇವರನ್ನು ಸಂತೈಸಿ ಇವರಲ್ಲಿ ಆತ್ಮಸ್ಥೈರ್ಯ ತುಂಬಲು ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಐಜಿಪಿ ಸುಹಾಸ ಹೇಳಿದರು

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ ಗಣೇಶ್ ಮತ್ತು ಮೊಹರಂ ಹಬ್ಬದ ಅವಧಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿ ಪೊಲೀಸ ಇಲಾಖೆಯೊಂದಿಗೆ ಸಹಕರಿಸಿಬೇಕೆಂದು ಕೋರಿದರು

ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೋಳಪ್ಪಗೋಳ, ಡಿಎಸಪಿ ಡಿ.ಟಿ‌.ಪ್ರಭು,ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಶ್ರೀಧರ ಸತಾರೆ,ಪಿಎಸ್ಐ ಗುರುನಾಥ್ ಚವ್ಹಾಣ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು

Related posts: