RNI NO. KARKAN/2006/27779|Sunday, October 20, 2024
You are here: Home » breaking news » ಗೋಕಾಕ:ಅನರ್ಹತೆ ಉಪಚುನಾವಣೆಗೆ ಅಡ್ಡಿಯಾಗುವದಿಲ್ಲ , ಇಂದೇ ಚುನಾವಣೆ ಬಂದರೆ ಎದುರಿಸಲು ಸಿದ್ದ : ರಮೇಶ ಜಾರಕಿಹೊಳಿ

ಗೋಕಾಕ:ಅನರ್ಹತೆ ಉಪಚುನಾವಣೆಗೆ ಅಡ್ಡಿಯಾಗುವದಿಲ್ಲ , ಇಂದೇ ಚುನಾವಣೆ ಬಂದರೆ ಎದುರಿಸಲು ಸಿದ್ದ : ರಮೇಶ ಜಾರಕಿಹೊಳಿ 

ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಮೇಶ ಜಾರಕಿಹೋಳಿ

ಅನರ್ಹತೆ ಉಪಚುನಾವಣೆಗೆ ಅಡ್ಡಿಯಾಗುವದಿಲ್ಲ , ಇಂದೇ ಚುನಾವಣೆ ಬಂದರೆ ಎದುರಿಸಲು ಸಿದ್ದ : ರಮೇಶ ಜಾರಕಿಹೊಳಿ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 7 :

 

 

ಶಾಸಕ ಸ್ಥಾನದ ಅನರ್ಹತೆ ಉಪಚುನಾವಣೆಗೆ ಅಡ್ಡಿಯಾಗುವದಿಲ್ಲ, ಇಂದೇ ಚುನಾವಣೆ ಘೋಷಣೆಯಾದರೂ ಚುನಾವಣೆಯನ್ನು ಎದುರಿಸಲು ಸಿದ್ದ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದ ಮುಂದೆ ರಮೇಶ ಜಾರಕಿಹೊಳಿ ಅಭಿಮಾನಿ ಬಳಗ ಆಯೋಜಿಸಿದ್ದ ಸಂಕಲ್ಪ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಉಪಚುನಾವಣೆಗೂ ಹಾಗೂ ಅನರ್ಹತೆಗೂ ಯಾವುದೇ ಸಂಬಂಧವಿಲ್ಲ, ಕಾನೂನಿನಲ್ಲಿ ಚುನಾವಣೆಯ ಸ್ಪರ್ಧೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಲು ಅವಕಾಶವಿದ್ದು ಯಾವುದೇ ಗೊಂದಲಗಳಿಗೆ ಕಿವಿಗೊಡದೇ ಧೈರ್ಯದಿಂದ ಚುನಾವಣೆಯನ್ನು ಎದರಿಸಲು ಸಿದ್ದರಾಗಬೇಕೆಂದು ಅಭಿಮಾನಿಗಳಿಗೆ ಕರೆ ನೀಡಿದರು.
ಇನ್ನೂ ಕೇವಲ 15 ದಿನಗಳಲ್ಲಿ ಗೋಕಾಕ ಮತಕ್ಷೇತ್ರದ ಜನತೆಗೆ ಸಿಹಿ ಸುದ್ದಿ ಸಿಗಲಿದೆ. ಅನರ್ಹತೆಯನ್ನು ಪಶ್ನಿಸಿ ಸುಪ್ರೀಂ ಕೋರ್ಟನಲ್ಲಿ ದಾವೆ ಹೂಡಿರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿಯ ಎಲ್ಲ ಜನರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಅದಕ್ಕಾಗಿ ನಾನು ಕ್ಷಮೆಯನ್ನು ಕೋರುತ್ತೇನೆ. ಈಗಾಗಲೇ ನೆರೆ ಸಂತ್ರಸ್ತರಿಗೆ 10 ಸಾವಿರ ರೂಗಳ ಪರಿಹಾರಧನ ಚೆಕ್‍ನ್ನು ನೀಡಲಾಗುತ್ತಿದ್ದು, ನಿರಾಶ್ರೀತರ ಮನೆ ಹಾಗೂ ಹಾನಿಗಳನ್ನು ತುಂಬಲು ನಾನು ಶತಸಿದ್ದನಾಗಿದ್ದು ಈ ವೇದಿಕೆ ಮೇಲೆ ಪ್ರಮಾಣಿಕರಿಸುತ್ತೇನೆ ನಿಮ್ಮೊಂದಿಗೆ ಸದಾ ನಾನಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ಕೆಲವರು ತಮ್ಮ ರಾಜಕೀಯ ಬೇಳೆಗಳನ್ನು ಬೇಯಿಸಿಕೊಳ್ಳಲು ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ, ನಾನು ಪ್ರಾಮಾಣಿಕನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ, ಕ್ಷೇತ್ರದ ಜನತೆಯ ಅದರಲ್ಲೂ ನೆರೆಯಿಂದ ಹಾನಿಗೊಳಗಾದ ಜನರ ವಿಶ್ವಾಸ ನನ್ನ ಮೇಲಿದೆ ಎಂದು ತಿಳಿಸಿದರು.
20 ಶಾಸಕರು ನಂಬಿಕೆಗೆ ದ್ರೋಹ ಬಗೆಯಲಾರೆ:

ಕಾಂಗ್ರೇಸ್ ಪಕ್ಷವನ್ನು ಬೆಳಗಾವಿ ಜಿಲ್ಲೆಯಲ್ಲಿ ಬೂತಮಟ್ಟದಲ್ಲಿ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದ ನನಗೆ ಕಾಂಗ್ರೇಸ್ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಗೋಕಾಕ ಹಾಗೂ ಅಥಣಿ ಮತಕ್ಷೇತ್ರದ ಜನತೆ ನೀಡಿದ ಭರವಸೆಯನ್ನು ಈಡೇರಿಸಲು ಸಮೀಶ್ರ ಸರ್ಕಾರದ ವೈಪಲ್ಯ ಹಾಗೂ ಕಾಂಗ್ರೇಸ್ ಪಕ್ಷದಿಂದ ನನಗೆ ಅನ್ಯಾಯದ ಹಿನ್ನಲೆಯಲ್ಲಿ ರಾಜಿನಾಮೆಯನ್ನು ನೀಡಿದ್ದು ನನ್ನೊಂದಿಗೆ 20 ಜನ ಶಾಸಕರು ಕೈ ಜೋಡಿಸಿದ್ದಾರೆ ಅವರಿಗೆ ನಾನು ಯಾವುದೇ ರೀತಿಯ ಅನ್ಯಾಯವಾಗಲು ಬಿಡುವದಿಲ್ಲ ಎಂದು ಹೇಳಿದರು.
ಆಪರೇಷನ್ ಕಮಲ:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನು ಕಾರಣನಲ್ಲ, ಮೂಲ ಕಾರಣಿಕರ್ತರು ಮಾಜಿ ಸಚಿವರಾರ ಸತೀಶ ಜಾರಕಿಹೊಳಿ ಹಾಗೂ ಎಮ್.ಬಿ.ಪಾಟೀಲ ಅವರು ಅವರು ನಮ್ಮೊಂದಿಗೆ ಇದ್ದು ಅಧಿಕಾರ ಆಸೆಗೆ ನಮ್ಮನ್ನು ಬಿಟ್ಟು ಹೋಗಿ ಮಂತ್ರಿ ಆದರು. ನನ್ನೊಂದಿಗೆ ಗುರುತಿಸಿಕೊಂಡ ಶಾಸಕರು 7 ಜನ ಮಂತ್ರಿ ಆದರೂ 14 ಜನ ನಿಗಮ ಮಂಡಳಿಯ ಅಧ್ಯಕ್ಷರಾದರು. ಆದರೆ ನಾನು ಒಬ್ಬರಿಗೆ ಮಾತು ಕೊಟ್ಟಂತೆ ನಡೆದುಕೊಂಡಿದ್ದೇನೆ. ಅಧಿಕಾರದ ಆಸೆಗೆ ಮರಳಾಗಿಲ್ಲ, ನನ್ನ ಮೇಲೆ ಗೂಬೆ ಕ್ರೂಡಿಸಲು ಬರುವುದಾರರೆ ನಾನು ಆಣೆ ಮಾಡಲು ಸಿದ್ದ. ಯಾವುದೇ ಆಪರೇಷನ ಆಮಿಷಕ್ಕೆ ಒಳಗಾಗಿಲ್ಲ ಅಲ್ಲದೇ ಇನ್ನೂ 10 ರಿಂದ 15ಜನ ಶಾಸಕರು ನಮ್ಮೊಂದಿಗೆ ಇದ್ದಾರೆಂದು ಸೃಷ್ಟಪಡಿಸಿದರು.
ಬುದ್ದ-ಬಸವ-ಅಂಬೇಡ್ಕರ ಹೆಸರಿನಲ್ಲಿ ಮೋಸ:

ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬುದ್ದ-ಬಸವ-ಅಂಬೇಡ್ಕರ ಹಾಗೂ ಮೂಡನಂಬಿಕೆಯ ಹೆಸರಿನಲ್ಲಿ ಜನತೆಯನ್ನು ಮರಳು ಮಾಡುತ್ತಿದ್ದಾರೆ. ನಾನು ನನ್ನ ಜನತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಯಾವುದೇ ವ್ಯವಹಾರಗಳಲ್ಲಿ ಜನತೆಗೆ ಮೋಸ ಮಾಡಿಲ್ಲ, ಎಸ್‍ಸಿ-ಎಸ್‍ಟಿ ಜನತೆಗೆ ಸೇರಿದ ಸಾವಿರಾರು ಎಕರೆ ಜಮೀನನ್ನು ಹೊಡೆದವರು ಯಾರು ಎಂಬುದು ಇಲ್ಲಿಯ ಜನತೆಗೆ ಗೊತ್ತಿದೆ. ನಾನು 1 ಗುಂಟೆಯಷ್ಷು ಕೂಡಾ ಕಬಳಿಸಿದ್ದನ್ನು ಸಾಬಿತು ಪಡಿಸಿದರೇ ನಾನು ಸಾಯಲು ಸಿದ್ದ ಎಂದು ಹೇಳಿದರು.

Related posts: