ಗೋಕಾಕ:ಆರೋಪ ಸಾಬಿತಾದರೇ ನಾನು ರಾಜಕೀಯ ನಿವೃತ್ತಿ ಹೊಂದಲು ಸಿದ್ದ : ನೆರೆ ಸಂತ್ರಸ್ಥರಿಗೆ ನೆರವಾದ ಎಲ್ಲರನ್ನು ಅಭಿನಂದಿಸಿದ ನಗರಸಭೆ ಸದಸ್ಯ ಕೋತವಾಲ
ಆರೋಪ ಸಾಬಿತಾದರೇ ನಾನು ರಾಜಕೀಯ ನಿವೃತ್ತಿ ಹೊಂದಲು ಸಿದ್ದ : ನೆರೆ ಸಂತ್ರಸ್ಥರಿಗೆ ನೆರವಾದ ಎಲ್ಲರನ್ನು ಅಭಿನಂದಿಸಿದ ನಗರಸಭೆ ಸದಸ್ಯ ಕೋತವಾಲ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 7 :
ನೆರೆಯಿಂದ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಲು ನಾನೆ ಕಾರಣವೆಂದು ಹೇಳುತ್ತಿರುವ ಮಾಜಿ ಸತೀಶ ಸತೀಶ ಜಾರಕಿಹೊಳಿ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಹಿರಿಯ ನಗರಸಭೆ ಸದಸ್ಯ ಎಸ್.ಎ.ಕೋತವಾಲ ಹೇಳಿದರು
ಶನಿವಾರದಂದು ನಗರದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದ ಮುಂದೆ ರಮೇಶ ಜಾರಕಿಹೊಳಿ ಅಭಿಮಾನಿ ಬಳಗ ಆಯೋಜಿಸಿದ್ದ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು ನಗರಸಭೆಯಿಂದ ಇಲ್ಲಿಯ ವರೆಗೆ ಯಾಗುದೆ ಅವ್ಯವಹಾರ ನಡೆದಿಲ್ಲ , ಎಲ್ಲ ಕೆಲಸಗಳು ಕಾನೂನಿನ ಚೌಕಟ್ಟಿನಲ್ಲಿ ಅಳಿದು – ತೂಗಿ ನಿರ್ವಹಿಸಲಾಗಿದ್ದರೂ ಸಹ ನಮ್ಮ ಮೇಲೆ ಆರೋಪ ಮಾಡುತ್ತಿರುವದು ಸರಿಯಲ್ಲ ಎಂದು ಹೇಳಿದರು
ಕಳೆದ 40 ವರ್ಷದಿಂದ ಜಾರಕಿಹೊಳಿ ಕುಟುಂಬಕ್ಕೆ ನಿಷ್ಠೆಯಿಂದ ಬೆಂಬಲಕ್ಕೆ ನಿಂತು ಪ್ರತಿಯೊಂದು ಆಗು ಹೋಗುಗಳಿಗೆ ಜವಾಬ್ದಾರಿಯಿಂದ ನೆರವಾಗಿದ್ದೇವೆ ಅದನ್ನು ಪರಿಗಣಿಸದೆ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ನಮ್ಮ ಮೇಲೆ ಮಾಡುತ್ತಿರುವ ಆರೋಪ ಸಾಬಿತಾದರೇ ನಾನು ರಾಜಕೀಯ ನಿವೃತ್ತಿಯನ್ನು ಹೊಂದಲು ಸಿದ್ದವಿರುವುದಾಗಿ ಪುನರ್ರುಚ್ಚಿಸಿದರು
ನೆರೆ ಹಾವಳಿಯಿಂದ ಗೋಕಾಕ ನಗರದಲ್ಲಿ ಭಾರಿ ಹಾನಿಯಾಗಿದ್ದು, ಹಾನಿಗೆ ಒಳಗಾದ ಪ್ರದೇಶಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆದು ಮಾಜಿ ಸಚಿವರು ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರವಾಹ ಬಂದ ತಕ್ಷಣ ಕ್ಷೇತ್ರಕ್ಕೆ ಬಂದು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿಯಾಗಿ ನೆರೆ ಸಂತ್ರಸ್ತರಿಗೆ ಅಭಯ ಹಸ್ತ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಮತ್ತು ಅಧಿಕಾರಿಗಳು ನೆರೆ ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಿದರು ಸಹ ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದೆ ಹಿಂತಹ ಸಂದರ್ಭಗಳನ್ನು ರಾಜಕೀಯವಾಗಿ ಬಹಸಿಕೋಳ್ಳುವದು ಸರಿಯಲ್ಲ ಎಂದ ಕೋತವಾಲ ಪ್ರವಾಹ ಬಂದ ಸಂದರ್ಭದಲ್ಲಿ ಜಾತಿ,ಭೇದ ಭಾವನೆಗಳನ್ನು ಮರೆತು ಎಲ್ಲರು ಅಂದಾಗಿ ನೆರೆ ಸಂತ್ರಸ್ತರ ನೆರೆವಿಗೆ ಧಾವಿಸಿ ಬಂದಿದ್ದು ಶ್ಲಾಘನೀಯವಾಗಿದೆ . ಪ್ರವಾಹ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ತಮ್ಮ ಜವಾಬ್ದಾರಿಗಳನ್ನು ಸತೀಶ ಶುಗರ್ಸ ಲಿಮಿಟೆಡ್ ಯನ್ನು ಮೋದಲು ಮಾಡಿಕೊಂಡು ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ , ಮುಖಂಡರುಗಳಿಗೆ ಮತ್ತು ದೂರು ದೂರದಿಂದ ಬಂದು ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು