ಗೋಕಾಕ:ಪ್ರವಾಹ ಮರೆತು, ಗೋಕಾಕನಲ್ಲಿ ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು
ಪ್ರವಾಹ ಮರೆತು, ಗೋಕಾಕನಲ್ಲಿ ಅದ್ಧೂರಿ ಮೊಹರಂ ಆಚರಣೆ : ಭಾವೈಕ್ಯತೆ ಮರೆದ ಭಕ್ತಾದಿಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 10 :
ಕಳೆದ ತಿಂಗಳಷ್ಟೆ ಮಹಾ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಗೋಕಾಕ ಜನತೆ ಎಲ್ಲವನ್ನು ಮರೆತು ಮೊಹರಂ ಹಬ್ಬವನ್ನು ಆಚರಿಸಿದರು
ಮೊಹರಂ ಹಬ್ಬದ ಹತ್ತನೇಯ ದಿನವಾದ ಮಂಗಳವಾರದಂದು ನಗರದ ಹಳೆ ದನಗಳ ಪೇಠೆಯಲ್ಲಿ ಮೊಹರಂ ಪಂಜಾಗಳ ಮುಲಾಕಾತ ನಡೆಯಿತು.ಮುಲಾಕಾತ ನೋಡಲು ಹಿಂದು ಮುಸ್ಲಿಂ ಬಾಂಧವರು ಸೇರುವುದರ ಮೂಲಕ ಭಾವೈಕ್ಯತೆ ಮರೆದರು
ನಗರದ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಲಾದ ಪಂಜಾ ಗಳು ಮೊಹರಂ ಕಡೆಯ ದಿನದಂದು ಹಳೆ ದನಗಳ ಪೇಠೆಯಲ್ಲಿ ಸೇರಿ ಮುಲಾಕಾತ ನಡೆಯುತ್ತದೆ ಪಂಜಾಗಳ ಮಿಲನ ಆಗುತ್ತಿದ್ದಂತೆಯೇ ಹಸನ್ ಹುಸ್ಸೇನ್ ಕೀ ದೋಸ್ತರೋ ದ್ದೀನ್ ಎಂದು ಜಯಘೋಷ ಕೂಗುವ ಮೂಲಕ ಭಕ್ತಿಯ ಮಹಾಪೂರವನ್ನೇ ಭಕ್ತರು ಹರಿಸಿದರು
ಇಂದು ರಾತ್ರಿ 8 ಘಂಟೆಗೆ ನಗರದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ತಾಬೂತು (ದೇವರು) ಗಳ ವಿಸರ್ಜನೆ ಕಾರ್ಯಕ್ರಮ ನಡೆಯಿತು