RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮಲಾಮರಡಿ ಗ್ರಾಮದ ನಿರಾಶ್ರಿತ ಕುಟುಂಬ ಒಂದಕ್ಕೆ ಇಲ್ಲಿಯ ವರೆಗೆ ಯಾವುದೇ ಸಹಾಯ ಧನ ದೊರಕಿಲ್ಲ

ಗೋಕಾಕ:ಮಲಾಮರಡಿ ಗ್ರಾಮದ ನಿರಾಶ್ರಿತ ಕುಟುಂಬ ಒಂದಕ್ಕೆ ಇಲ್ಲಿಯ ವರೆಗೆ ಯಾವುದೇ ಸಹಾಯ ಧನ ದೊರಕಿಲ್ಲ 

ಮಲಾಮರಡಿ ಗ್ರಾಮದ ನಿರಾಶ್ರಿತ ಕುಟುಂಬ ಒಂದಕ್ಕೆ ಇಲ್ಲಿಯ ವರೆಗೆ ಯಾವುದೇ ಸಹಾಯ ಧನ ದೊರಕಿಲ್ಲ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 13 :

 

 

ಇತ್ತಿಚೇಗೆ ಜರುಗಿದ ಭಾರಿ ಪ್ರವಾಹ ಹಿನ್ನಲೆ ಮನೆಗಳಿಗೆ ನೀರು ನುಗ್ಗಿ ಮನೆಗಳು ನೀರು ಪಾಲಾಗಿದ್ದು, ತಾಲೂಕಿನ ಗುಜನಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಮಲಾಮರಡಿ ಗ್ರಾಮದ ನಿರಾಶ್ರಿತ ಕುಟುಂಬ ಒಂದಕ್ಕೆ ಇಲ್ಲಿಯ ವರೆಗೆ ಯಾವುದೇ ಸಹಾಯ ಧನ ದೊರಕಿಲ್ಲ ಎಂದು ಈಶ್ವರ ಚನ್ನಬಸಪ್ಪ ಮಾಳಗಿ ಆರೋಪಿಸಿದ್ದಾರೆ.
ಕಳೆದ 15ದಿನಗಳ ಹಿಂದೆ ಗುಜನಾಳ ಗ್ರಾಮ ಪಂಚಾಯತ ನೂಡಲ್ ಅಧಿಕಾರಿಯಾಗಿ ಸುನೀಲ ನಾಯಿಕ ಹಾಗೂ ಸುಪ್ರೀತ ಪಾಟೀಲ ಮಲಾಮರಡಿ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಮಾಡಿದ್ದು, ಆದರೆ ಈವರೆಗೆ ಯಾವುದೇ ಪರಿಹಾರ ಧನ ಸಹಾಯ ಸಿಕ್ಕಿಲ್ಲ. ಅಲ್ಲದೇ ಗ್ರಾಮದ ಎಲ್ಲ ಮನೆಗಳು ಸಂಪೂರ್ಣವಾಗಿ ಅಧಿಕಾರಿಗಳು ಜಿಪಿಎಸ್ ಮಾಡಿದ್ದಾರೆ ಹೀಗಾಗಿ ಆದರೆ ಉರುಳಿ ಬಿದ್ದಿರುವ ಮನೆಯ ಜಿಪಿಎಸ್ ಈ ವರೆಗೆ ಆಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಈಶ್ವರ ಕಿಡಿಕಾರಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ ಗ್ರಾಮದ ಮಲ್ಲವ್ವ ಶಂಕರ ಮುಗಳಿಹಾಳ ಸೇರಿದಂತೆ ಇನ್ನೂ ಹಲವಾರು ಮನೆಗಳು ಬಿದ್ದಿದ್ದು, ನೂಡಲ್ ಅಧಿಕಾರಿಗಳು ಆ ಮನೆಗಳಿಗೆ ಭೇಟಿ ನೀಡಿ ತಕ್ಷಣ ಪರಿಹಾರ ಮತ್ತು ಜಿಪಿಎಸ್ ಕೊಡಿಸುವಲ್ಲಿ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ ಆದರೆ ನಾನು ಪ್ರವಾಹದಲ್ಲಿ ನನ್ನ ಮನೆಯನ್ನು ಕಳೆದುಕೊಂಡರು ಸಹ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ ಎಂದು ಈಶ್ವರ ಆರೋಪಿಸಿದ್ದಾರೆ.
ಈ ಬಗ್ಗೆ ತಾಲೂಕಾಡಳಿತ ಹಾಗೂ ತಾಲೂಕ ಪಂಚಾಯತ ಅಧಿಕಾರಿಗಳು ಗ್ರಾಮದಲ್ಲಿ ಸಂಭವಿಸಿದ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳನ್ನು ಪರಿಶೀಲನೆ ಮಾಡಿ, ಸರಿಯಾದ ವರದಿ ಸಿದ್ಧಪಡಿಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವ ಕಾರ್ಯವಾಗಬೇಕು. ಈ ಹಿಂದೆ ವರದಿ ನೀಡಿರುವ ನೂಡಲ್ ಅಧಿಕಾರಿಗಳ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.

Related posts: