RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಶಿಕ್ಷಕರು ದೇಶದ ಭವಿಷ್ಯದ ರೂವಾರಿಗಳು : ಬಸವರಾಜ ತರಕಾರ

ಮೂಡಲಗಿ:ಶಿಕ್ಷಕರು ದೇಶದ ಭವಿಷ್ಯದ ರೂವಾರಿಗಳು : ಬಸವರಾಜ ತರಕಾರ 

ಶಿಕ್ಷಕರು ದೇಶದ ಭವಿಷ್ಯದ ರೂವಾರಿಗಳು : ಬಸವರಾಜ ತರಕಾರ

 

 

 

ನಮ್ಮ ಬೆಳಗಾವಿ ಸುದ್ದಿ, ಮೂಡಲಗಿ ಸೆ 17 :

 

 

 

ಶಿಕ್ಷಕರು ದೇಶದ ಭವಿಷ್ಯದ ರೂವಾರಿಗಳಾಗಿದ್ದು, ಮಕ್ಕಳ ಉನ್ನತಿಯಲ್ಲಿ ಶಿಕ್ಷಕರು ಸಂತೋಷಡುವರು’ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ತರಕಾರ ಹೇಳಿದರು.
ಇಲ್ಲಿಯ ಶಿವಬೋಧರಂಗ ಸೊಸೈಟಿಯ ಸಭಾಭವನದಲ್ಲಿ ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದವರು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಶ್ರದ್ಧೆ, ನಿಷ್ಠೆಯಿಂದ ಮಾಡುವ ಶಿಕ್ಷಕರ ಕಾಯಕವನ್ನು ಸಮಾಜವು ಗುರುತಿಸುತ್ತದೆ ಎಂದರು.
ಲಯನ್ಸ್ ಕ್ಲಬ್‍ವು ಸಮಾಜ ಸೇವೆಯೊಂದಿಗೆ ತೆರೆಮೆರೆಯಲ್ಲಿ ಅನುಪಮ ಸೇವೆ ಸಲ್ಲಸುತ್ತಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಸ್ತುತ್ಯ ಕಾರ್ಯಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ತುಕ್ಕಾನಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಮಲಾಕ್ಷಿ ತೋರಗಲ್ಲ ಹಾಗೂ ಮೂಡಲಗಿಯ ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ ಮೋಹಿತೆ ಅವರಿಗೆ ‘ಲಯನ್ಸ್ ಕ್ಲಬ್ ಆದರ್ಶ ಶಿಕ್ಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಪರಿವಾರ ಅದ್ಯಕ್ಷ ಪ್ರಕಾಶ ಬಾಗೇವಾಡಿ ಮಾತನಾಡಿ ಶಿಕ್ಷಕರನ್ನು ಗೌರವಿಸುವ ಕಾರ್ಯವು ಪುಣ್ಯದ ಕೆಲಸವಾಗಿದ್ದು, ಪ್ರತಿ ವರ್ಷವೂ ಲಯನ್ಸ್ ಪರಿವಾರದಿಂದ ತಪ್ಪದೆ ನೆರವೇರಿಸುತ್ತಿರುವೆವು ಎಂದರು.
ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಕಾರ್ಯದರ್ಶಿ ಸೋಮಶೇಖರ ಹಿರೇಮಠ, ಖಜಾಂಚಿ ಶಿವಾನಂದ ಕಿತ್ತೂರ ವೇದಿಕೆಯಲ್ಲಿದ್ದರು.
ಸಂಜಯ ಮೋಕಾಶಿ, ಪುಲಕೇಶಿ ಸೋನವಾಲಕರ, ಡಾ.ಎಸ್.ಎಸ್. ಪಾಟೀಲ, ಅಬ್ದುಲ್ ಬಾಗವಾನ, ಸುರೇಶ ನಾವಿ, ಮಹಾಂತೇಶ ಹೊಸೂರ, ಶ್ರೀಶೈಲ್ ಲೋಕನ್ನವರ, ವೆಂಕಟೇಶ ಪಾಟೀಲ, ಸಂಜಯ ಮಂದ್ರೋಳಿ ಇದ್ದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪರುಶರಾಮ ಕುಲಕರ್ಣಿ ಹಾಡಿದ ಭಾವಗೀತೆಯ ಎಲ್ಲರ ಗಮನಸೆಳೆಯಿತು.
ರಕ್ಷಿತಾ ಗೌಡರ ಪ್ರಾರ್ಥಿಸಿದರು, ಮಲ್ಲಿನಾಥ ಶೆಟ್ಟಿ ಸ್ವಾಗತಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು, ಸೋಮಶೇಖರ ಹಿರೇಮಠ ವಂದಿಸಿದರು.

Related posts: