RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕರವೇ ಪ್ರತಿಭಟನೆ

ಘಟಪ್ರಭಾ:ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕರವೇ ಪ್ರತಿಭಟನೆ 

ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ದುರಾಡಳಿತ ನಡೆಸುತ್ತಿರುವ ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಿ ಕಾರಣ ವಿಲ್ಲದೆ ತೆಗೆದು ಹಾಕಿರುವ ಗುತ್ತಿಗೆ ನೌಕರನನ್ನು ಮರಳಿ ಕೆಲಸಕ್ಕೆ ಸೇರಿಸುವಂತೆ ಆಗ್ರಹಿಸಿ ಧರಣಿ ನಡೆಯಿಸುತ್ತಿರುವದು

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕರವೇ ಪ್ರತಿಭಟನೆ

 

 

 

ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಅ 18 :

 

 

 
ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ದುರಾಡಳಿತ ನಡೆಸುತ್ತಿರುವ ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಿ ಕಾರಣ ವಿಲ್ಲದೆ ತೆಗೆದು ಹಾಕಿರುವ ಗುತ್ತಿಗೆ ನೌಕರನನ್ನು ಮರಳಿ ಕೆಲಸಕ್ಕೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿದರು

ಬುಧವಾರದಂದು ತಾಲೂಕಿನ ಅರಬಾಂವಿ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಸೇರಿದಂತೆ ಕಾರ್ಯಕರ್ತರು ಮಹಾವಿದ್ಯಾಲಯದ ಡೀನ್ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ‌ಸೂಮಾರು ಅರ್ಧಗಂಟೆಗೂ ಹೆಚ್ಚು ಕಾಲ ಧರಣಿ ನಡೆಯಿಸಿ ಉಪ ಕುಲಸಚಿವ ಪಿ.ಬಿ ದೇಸೂರ ಮುಖಾಂತರ ರಾಜ್ಯಪಾಲರಿಗೆ ಮತ್ತು ಕುಲಸಚಿವರಿಗೆ ಪ್ರತ್ಯೇಕ ಮನವಿ ಅರ್ಪಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಬಸವರಾಜ ಖಾನಪ್ಪನವರ ಕಳೆದ ಹಲವಾರು ತಿಂಗಳುಗಳಿಂದ ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಮತ್ತು ದುರಾಡಳಿತದಿಂದ ಈ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇಲ್ಲಿ ಆಡಳಿತ ನಡೆಸುವ ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿಯವರು ಮಹಾವಿದ್ಯಾಲಯದ ಆಡಳಿತ ವೈಖರಿಯನ್ನು ಸಂಪೂರ್ಣ ಹಾಳುಗೆಡವಿದ್ದಾರೆ.ಇದರ ಕುರಿತು 5 ತಿಂಗಳ ಹಿಂದೆ ಕುಲಪತಿಗಳಿಗೆ ಮನವಿ ಅರ್ಪಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಇದರಿಂದ ಇಲ್ಲಿ ಕಾರ್ಯನಿರ್ವಹಿಸುವವರು ಎಲ್ಲರೂ ಸಹ ಅವರೇ ಎಂದು ಸಾಬೀತು ಆಗುತ್ತದೆ.
ಪ್ರಸ್ತುತ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಎಂ.ಸಿ ಪಾಟೀಲ ಅವರು ಈ ಮೊದಲು ಸಹಾಯಕ ಹಣಕಾಸು ನಿಯಂತ್ರಣ ಅಧಿಕಾರಿಯಾಗಿದ್ದ ಸಮಯದಲ್ಲಿ ರಿವ್ಯಾಲಿಂಗ ಬಜೆಟ್ ಸೇರಿದಂತೆ ಮಹಾವಿದ್ಯಾಲಯದ ಕೆಲಸಗಳಿಗೆ ಖರ್ಚುಮಾಡಲು ಬಂದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಇಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ ನೌಕರರಿಗೆ ಹೆಚ್ಚುವರಿ ಯಾಗಿದೆ ಎಂದು ಹೇಳಿ ಯಾವುದೇ ಬಲವಾದ ಕಾರಣ ಮತ್ತು ನೋಟಿಸ ನೀಡಿದ ಕೆಲಸದಿಂದ ತೆಗೆದು ಹಾಕಿದ್ದಾರೆ . ಇದರಿಂದ ಗುತ್ತಿಗೆ ನೌಕರರು ಕಂಗಾಲಾಗಿದ್ದಾರೆ . ತಮಗೆ ಬೇಕಾದವರ , ತಮ್ಮ ಅವ್ಯವಹಾರಗಳಿಗೆ ಸಾಥ್ ನೀಡುವ ಸಿಬ್ಬಂದಿಗಳಿಗೆ ಇಲ್ಲಿಯೇ ಉಳಿಸಿಕೊಂಡು ಉಳಿದವರಿಗೆ ಬೇರೆ ಕಡೆ ವರ್ಗಮಾಡುತ್ತಿದ್ದಾರೆ .
ಇನ್ನು ಡೀನ ಅವರು ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ , ಕಾರ್ಯಾಲಯದ ಸಿಬ್ಬಂದಿಗಳಿಗೆ ಮಹಾವಿದ್ಯಾಲಯದ ವಾಹನ ಚಾಲಕರು , ಸುದ್ದಿ ವಾಹಕರು ಸೇರಿದಂತೆ ಇನ್ನೀತರ ಸಿಬ್ಬಂದಿಗಳೊಂದಿಗೆ ಮನಬಂದಂತೆ ವರ್ತಿಸಿ ಸರ್ವಾಧಿಕಾರಿ ದೋರಣೆಯನ್ನು ತೋರುತ್ತಿದ್ದಾರೆ ವಾಹನ ಚಾಲಕರಿಗೆ ,ಇತರೆ ಸಿಬ್ಬಂದಿಗಳಿಗೆ ಅವರು ಮಾಡುವ ಕಾರ್ಯಗಳನ್ನು ಅದಲು ಬದಲು ಮಾಡಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ . ಕಳೆದ ಕೆಲವು ತಿಂಗಳುಗಳ ಹಿಂದೆ ವಿದ್ಯಾರ್ಥಿ ಯೊಬ್ಬರು ಹಾಸ್ಟೆಲನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಕೆಲದಿನಗಳ ಹಿಂದೆ ಇಲ್ಲಿಯ ಮಹಾವಿದ್ಯಾಲಯದ ಪ್ರೇಮ ಪ್ರಕರಣ ಬೆಳಕಿಗೆ ಬಂದು ಮಹಾವಿದ್ಯಾಲಯದ ಆವರಣದಲ್ಲಿ ನಾಟಕವೇ ನಡೆದು ಹೋಗಿದೆ ಇವುಗಳನ್ನು ನಿರ್ವಹಿಸುವಲ್ಲಿ ಡೀನ್ ಅವರು ಸಂಪೂರ್ಣ ವಿಫಲವಾಗಿದ್ದಾರೆ. ಬಹು ಮುಖ್ಯವಾಗಿ ಮೊದಲು ಸಹಾಯಕ ಹಣಕಾಸು ನಿಯಂತ್ರಣ ಅಧಿಕಾರಿಯಾಗಿದ್ದ ಎಂ.ಸಿ.ಪಾಟೀಲ ಅವರು ಈಗ ಸಹಾಯಕ ಆಡಳಿತ ಅಧಿಕಾರಿ ಅಂತಾ ಕಾರ್ಯನಿರ್ವಹಿಸುತ್ತಿದ್ದರೂ ಸಹ ವೇತನ ಮಾತ್ರ ಉಪ ಕುಲಸಚಿವರ ಹೇಡ್ ನಲ್ಲಿ ಪಡೆಯುತ್ತಿದ್ದಾರೆ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿರುವ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರು ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸಿ ವಿನಾಕಾರಣ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ತಗೆದುಹಾಕಿ , ಬೇರೆ ಕಡೆ ವರ್ಗಾವಣೆ ಮಾಡಿ ಅನ್ಯಾಯವೆಸಗುತ್ತಿರುವದನ್ನು ತಡೆದು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸುವಂತೆ ವಿನಂತಿಸಿದ್ದಾರಲ್ಲದೆ ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಡೀನ್ ಅವರ ಮನೆ ಎದುರು ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ದುರಾಡಳಿತ ನಡೆಸುತ್ತಿರುವ ಡೀನ್ ಮತ್ತು ಸಹಾಯಕ ಆಡಳಿತ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಮನವಿ ಅರ್ಪಿಸುತ್ತಿರುವ ಕರವೇ ಕಾರ್ಯಕರ್ತರು

 

ಮನವಿ ಸ್ವೀಕರಿಸಿ ಮಾತನಾಡಿದ ಉಪ ಕುಲಸಚಿವ ಪಿ.ಬಿ.ದೇಸೂರ ಅವರು ಎಲ್ಲ ವಿಷಯವನ್ನು ಉನ್ನತಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಎಲ್ಲವನ್ನೂ ಸರಿಪಡಿಸಿ ಕೆಲಸದಿಂದ ತೆಗೆದವರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೋಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದೆಂದು ಭರವಸೆ ನೀಡಿದರು

ಪ್ರತಿಭಟನೆಯಲ್ಲಿ ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ರೆಹಮಾನ ಮೊಕಾಶಿ , ಹನೀಪ ಸನದಿ , ರಮೇಶ ಕಮತಿ , ಮಲ್ಲು ಸಂಪಗಾರ , ಅಶೋಕ ಬಂಡಿವಡ್ಡರ , ಯಾಸೀನ ಮುಲ್ಲಾ , ದುರ್ಗಪ್ಪಾ ಬಂಡಿವಡ್ಡರ , ಲಕ್ಷ್ಮಣ ಬಂಡಿವಡ್ಡರ , ರಾಜು ಮುತ್ತೇನವರ , ಕೆಂಪಣ್ಣಾ ಕಡಕೋಳ , ಕಿರಣ ಕೊಳವಿ , ದುಂಡಪ್ಪಾ ಮೆಳವಂಕಿ , ರಾಮ ಸಣ್ಣಲಗಮನವರ , ದುಂಡಪ್ಪಾ ಬಬಲಿ , ಶೆಟ್ಟೆಪ್ಪಾ ಗಾಡಿವಡ್ಡರ , ಬಸು ಗಾಡಿವಡ್ಡರ , ರಮೇಶ ಖಾನಪ್ಪನವರ , ಕಿರಣ ತೊಗರಿ , ರವಿ ನಾವಿ , ಅಜಿತ ಮಲ್ಲಾಪುರೆ , ಸಂತೋಷ ಬಡೇಸ ಸುನೀಲ ಬೆಳಮಡ್ಡಿ , ಅಬ್ಬು ಮುಜಾವರ, ರಾಮ ಕೊಂಗನೊಳ್ಳಿ , ಪರಶುರಾಮ ಸಣ್ಣವಗೋಳ , ಪರಶುರಾಮ ರಾಮಪೂರೆ , ಬಸು ಅಕ್ಕತಂಗೇರಹಾಳ , ರಾಜು ಬಂಡಿವಡ್ಡರ , ಶಂಕರ ಗಾಡಿವಡ್ಡರ , ವಿಠ್ಠಲ ಬಂಡಿವಡ್ಡರ , ಸಂತೋಷ ಬಂಡಿವಡ್ಡರ , ಸಿದ್ದರಾಮ ಬಂಡಿವಡ್ಡರ , ಸುರೇಶ ಬಂಡಿವಡ್ಡರ , ನಾಗೇಂದ್ರ ಬಂಡಿವಡ್ಡರ , ಹಣಮಂತ ಬಂಡಿವಡ್ಡರ , ಹಣಮಂತ ಕಮತಿ , ರಾಮ ಕಮತಿ , ಯಶವಂತ ಗ್ಯಾನಪ್ಪನವರ , ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: