RNI NO. KARKAN/2006/27779|Friday, November 8, 2024
You are here: Home » breaking news » ಘಟಪ್ರಭಾ:ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿ ಕಾರ್ಯಾಗಾರ

ಘಟಪ್ರಭಾ:ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿ ಕಾರ್ಯಾಗಾರ 

ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿ ಕಾರ್ಯಾಗಾರ

 

 
ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಸೆ 21 :

 

 
ಜಿಲ್ಲಾ ಪಂಚಾಯತ ಬೆಳಗಾವಿಯ ಸ್ವಚ್ಛ ಭಾರತ ಮಿಷನ್ ಹಾಗೂ ಧುಪದಾಳ ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿ ಕಾರ್ಯಾಗಾರವು ಸ್ಥಳೀಯ ಎಸ್.ಡಿ.ಟಿ ಕಾಲೇಜಿನ ಆವರಣದಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧುಪದಾಳ ಪಂಚಾಯತಿ ಅಧ್ಯಕ್ಷ ಎಸ್.ಆಯ್. ಬೆನವಾಡೆ ವಹಿಸಿ ಮಾತನಾಡಿ, ಗೋಕಾಕ ತಾಲೂಕಿನ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳನ್ನು ಬೇರೆಯಾಗಿ ವಿಂಗಡಸಿ ರಸಗೋಬ್ಬರ ತಯಾರಿಸುವ ಘಟಕವನ್ನು ಪ್ರಥಮವಾಗಿ ಧುಪದಾಳ ಗ್ರಾಮ ಪಂಚಾಯತಿಗೆ ಮಂಜೂರಾಗಿದ್ದು, ನಮಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳಿಂದ ಗ್ರಾಮವನ್ನು ಹೆಚ್ಚಿನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯಿಂದ ಆಗಮಿಸಿದ್ದ ಜಿಲ್ಲಾ ಸಮಾಲೊಚಕ ಅಧಿಕಾರಿಗಳಾದ ಪರಗೌಡಾ ಪಾಟೀಲ ಹಾಗೂ ಮಂಜು ಪಾಟೀಲ ಸಾಕ್ಷ್ಯ ಚಿತ್ರದೊಂದಿಗೆ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಸುದೀರ ಜೋಡಟ್ಟಿ, ಮಹೇಶ ಪಾಟೀಲ, ಜಿ.ಎಸ್.ರಜಪೂತ, ಜಾಕೀರ ಬಾಡಕರ, ತಾ.ಪಂ. ಸದಸ್ಯರಾದ ಲಗಮನ್ನಾ ನಾಗನ್ನವರ, ಗ್ರಾ.ಪಂ ಸದಸ್ಯರಾದ ಶೇಖರ ರಜಪೂತ, ಕಲ್ಲೋಳ್ಳಿ ಗಾಡಿವಡ್ಡರ, ಬಶೀರ ಬನಜವಾಡ, ಕುಮುದಿನಿ ಶೀವಾಳೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ಕರಿಗಾರ ಸ್ವಾಗತಿಸಿದರು, ಅಭಿವೃದ್ದಿ ಅಧಿಕಾರಿ ವಿಜಯಕುಮಾರ ಮಾಳಿ ವಂದಿಸಿದರು.

Related posts: