RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ರಮೇಶ ಜಾರಕಿಹೊಳಿ ಕೋಟೆಯನ್ನು ಧ್ವಂಸಗೊಳಿಸಿ ಕ್ಷೇತ್ರದ ಜನರಿಗೆ ಸಾಮಾಜಿಕ ನ್ಯಾಯ ಕೋಡುತ್ತೇವೆ : ಸತೀಶ ಜಾರಕಿಹೊಳಿ

ಘಟಪ್ರಭಾ:ರಮೇಶ ಜಾರಕಿಹೊಳಿ ಕೋಟೆಯನ್ನು ಧ್ವಂಸಗೊಳಿಸಿ ಕ್ಷೇತ್ರದ ಜನರಿಗೆ ಸಾಮಾಜಿಕ ನ್ಯಾಯ ಕೋಡುತ್ತೇವೆ : ಸತೀಶ ಜಾರಕಿಹೊಳಿ 

ರಮೇಶ ಜಾರಕಿಹೊಳಿ ಕೋಟೆಯನ್ನು ಧ್ವಂಸಗೊಳಿಸಿ ಕ್ಷೇತ್ರದ ಜನರಿಗೆ ಸಾಮಾಜಿಕ ನ್ಯಾಯ ಕೋಡುತ್ತೇವೆ : ಸತೀಶ ಜಾರಕಿಹೊಳಿ

 

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಸೆ 21 :

 

 
ಗೋಕಾಕದಲ್ಲಿ 20 ವರ್ಷಗಳಿಂದ ಜನರಿಗೆ ಆಶ್ರಯವಾಗಲಿ ಎಂದು ಬೆಳೆಸಿದ ಆಲದ ಮರ ಈಗ ಜಾಲಿ ಮರವಾಗಿದೆ. ಹಿಂದೆ ಕಟ್ಟಿದ ಜಾರಕಿಹೊಳಿ ಕೋಟೆ ಇಂದು ಅಂಬಿರಾವ್ ಹಾಗೂ ರಮೇಶ ಜಾರಕಿಹೊಳಿ ಕೋಟೆಯಾಗಿದೆ ಈ ಬಾರಿ ಆ ಕೋಟೆಯನ್ನು ಧ್ವಂಸಗೊಳಿಸಿ ಕ್ಷೇತ್ರದ ಜನರಿಗೆ ಸಾಮಾಜಿಕ ನ್ಯಾಯ ಕೋಡುತ್ತೇವೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರ ಸಂಜೆ ಘಟಪ್ರಭಾದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಗೋಕಾಕ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿಯವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಲು ಮಾಡಲು ಕೇಳಿದ್ದೇವೆ ಆದರೆ ಅಂತಿಮವಾಗಿ ಪಕ್ಷದ ಹೈಕಮಂಡ್ ಪೈನಲ್ ಮಾಡುತ್ತದೆ. ಜಾರಕಿಹೊಳಿ ಕುಟುಂಬದಲ್ಲಿ ರಮೇಶ ಜಾರಕಿಹೊಳಿ ಬೇರೆಯೇ ಆಗಿದ್ದಾರೆ ಅವರು ತಮ್ಮ ಅಳಿಯನ ಸೂಚನೆಯಂತೆ ನಡೆಯುತ್ತಿದ್ದಾರೆ ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಕ್ಷೇತ್ರದಲ್ಲಿ ನಾವು ಹೇಳಿದ ಕೆಲಸ ಒಂದು ಆಗುತ್ತಿಲ್ಲ ಅಲ್ಲಿ ಅಧಿಕಾರಿಗಳು ಅಂಬಿರಾವ್ ಪಾಟೀಲ ಮಾತು ಕೇಳಿ ಕಾರ್ಯನಿರ್ವಹಿಸುತ್ತಿದ್ದಾರೆ. ರಮೇಶ ಜಾರಕಿಹೊಳಿಯವರು ತಮ್ಮ ವಯುಕ್ತಿಕ ಲಾಭಕ್ಕಾಗಿ ಸರಕಾರವನ್ನೆ ಬೀಳಿಸಿದ್ದರಿಂದ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಮುಂದಿನ ದಿನದಲ್ಲಿ ರಮೇಶ ಜಾರಕಿಹೊಳಿಯವರ ಅಂಗಡಿಯನ್ನು ಮುಚ್ಚಿ ಎಲ್ಲರಿಗೂ ನ್ಯಾಯವನ್ನು ಕೊಡುತ್ತೇವೆ.
ಬರುವ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ 10ಕ್ಕು ಹೆಚ್ಚು ಸ್ಥಾನ ಗೆಲ್ಲುತ್ತೆ ಆದರೆ ನಾವು ಬಿಜೆಪಿ ಸರಕಾರಕ್ಕೆ ಯಾವುದೇ ತೊಂದರೆಯನ್ನು ನೀಡುವುದಿಲ್ಲ ಎಂದು ಹೇಳಿದರು.
ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿರುವ ಲಖನ್ ಜಾರಕಿಹೊಳಿ ಮಾತನಾಡಿ ಗೋಕಾಕದಲ್ಲಿ ಈಗ ಜಾರಕಿಹೊಳಿ ಕೋಟೆ ಇಲ್ಲ ಅಂಬಿರಾವ್ ಪಾಟೀಲ ಕೋಟೆ ಆಗಿದೆ. ಅಧಿಕಾರಿಗಳು ಅಂಬಿರಾವ ಅಪ್ಪನೆ ಇಲ್ಲದೆ ಯಾವುದೆ ಕೆಲಸವನ್ನು ಮಾಡುತ್ತಿಲ್ಲ. ಇದನ್ನು ಸರಿ ಪಡಿಸುವದಕ್ಕಾಗಿ ಎಲ್ಲರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಹೇಳಿದರು.
ವೇದಿಕೆಯಲ್ಲಿ ಗೋಕಾಕ ತಾಲೂಕಾ ಗ್ರಾಮೀಣ ಅಧ್ಯಕ್ಷ ಪ್ರಕಾಶ ಡಾಂಗಿ, ಮಾಹಾಲಿಂಗಪ್ಪ ಹಳ್ಳೂರ, ಬಸವಣ್ಣೇಪ್ಪ ಕಂಬಾರ, ಎಸ್.ಎಮ್.ಹಂಚಿನಾಳ ಇದ್ದರು.

Related posts: