RNI NO. KARKAN/2006/27779|Thursday, March 13, 2025
You are here: Home » breaking news » ಚಿಕ್ಕೋಡಿ:ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಥಣಿಯಿಂದ ಸ್ಪರ್ಧಿಸಲು ಯಾವೊಬ್ಬ ಗಂಡಸು ಇಲ್ಲ : ಶಾಸಕ ಕಾಗೆ ವ್ಯಂಗ್ಯ

ಚಿಕ್ಕೋಡಿ:ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಥಣಿಯಿಂದ ಸ್ಪರ್ಧಿಸಲು ಯಾವೊಬ್ಬ ಗಂಡಸು ಇಲ್ಲ : ಶಾಸಕ ಕಾಗೆ ವ್ಯಂಗ್ಯ 

ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಥಣಿಯಿಂದ ಸ್ಪರ್ಧಿಸಲು ಯಾವೊಬ್ಬ ಗಂಡಸು ಇಲ್ಲ : ಶಾಸಕ ಕಾಗೆ ವ್ಯಂಗ್ಯ
ಚಿಕ್ಕೋಡಿ ಜು 23: ಬೆಳಗಾವಿ ಜಿಲ್ಲಾ ಕಾಂಗ್ರೆಸನಲ್ಲಿ ಆಥಣಿಯಿಂದ ಸ್ವರ್ಧಿಸಲು ಯಾರೋಬ್ಬ ಗಂಡಸನು ಇಲ್ಲಾ ವೆಂದು ಕಾಗವಾಡ ಶಾಸಕ ರಾಜು ಕಾಗೆ ವ್ಯಂಗ್ಯವಾಡಿದ್ದಾರೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್‌ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ರಾಜುಕಾಗೆ ಕೆಲವು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿ ಹೋಳಿ ಅವರು, ಸಿದ್ದರಾಮಯ್ಯನವರು ಅಥಣಿ ಕ್ಷೇತ್ರದಿಂದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ರಾಯಬಾಗ ಕ್ಷೇತ್ರದಿಂದ ಸ್ಪರ್ಧಿಸುವಂತೆ  ಮನವಿ ಮಾಡಿದ್ದನ್ನು ನೆನೆದು ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಥಣಿಯಿಂದ ಸ್ಪರ್ಧಿಸಲು ಯಾವೊಬ್ಬ ಗಂಡಸು ಇಲ್ಲವೆ ಎಂದು ಲೇವಡಿ ಮಾಡಿದರು. 

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಹೆಚ್ಚು ಸ್ಥಾನ ಪಡೆಯಲಿದೆ ಎಂದರು. ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಮೋದಿ ಅವರು ಗ್ರಾಮೀಣ ಪ್ರದೇಶದ ಜನರಿಗೆ ಗ್ಯಾಸ್‌ ನೀಡುವ ಯೋಜನೆ ಜಾರಿಗೆ ತಂದಿದ್ದಾರೆ ಎಂದರು. 

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್‌ ವಿತರಣೆ ಕಾರ್ಯಕ್ರಮಕ್ಕೆ ಸಂಸದ ಪ್ರಹ್ಲಾದ್‌ ಜೋಶಿ ಚಾಲನೆ ನೀಡಿದರು.

Related posts: