RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ರಮೇಶ ಜಾರಕಿಹೊಳಿ ಅವರೊಂದಿಗೆ ಮಾತನಾಡುವ ಪ್ರಶ್ನೆಯೇ ಇಲ್ಲ, ಇನ್ನೇನಿದ್ದರೂ ಚುನಾವಣೆ ತಯಾರಿ : ಲಖನ್ ಜಾರಕಿಹೊಳಿ

ಗೋಕಾಕ:ರಮೇಶ ಜಾರಕಿಹೊಳಿ ಅವರೊಂದಿಗೆ ಮಾತನಾಡುವ ಪ್ರಶ್ನೆಯೇ ಇಲ್ಲ, ಇನ್ನೇನಿದ್ದರೂ ಚುನಾವಣೆ ತಯಾರಿ : ಲಖನ್ ಜಾರಕಿಹೊಳಿ 

ರಮೇಶ ಜಾರಕಿಹೊಳಿ ಅವರೊಂದಿಗೆ ಮಾತನಾಡುವ ಪ್ರಶ್ನೆಯೇ ಇಲ್ಲ, ಇನ್ನೇನಿದ್ದರೂ ಚುನಾವಣೆ ತಯಾರಿ : ಲಖನ್ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ-ವಾರ್ತೆ , ಗೋಕಾಕ ಸೆ 26:

 

 

 

ರಮೇಶ ಜಾರಕಿಹೊಳಿ ಜೊತೆ ಮಾತನಾಡುವ ಪ್ರಶ್ನೇಯೆ ಇಲ್ಲ ಇನ್ನೂ ಏನೆ ಇದ್ದರೂ ಚುನಾವಣೆ ತಯಾರಿ ಮಾತ್ರ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ ಜಾರಕಿಹೊಳಿ ಹೇಳಿದರು. 
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಆವರು ಕಳೆದ 2 ದಶಕಗಳಿಂದ ರಮೇಶ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸಿದ್ದೇನೆ ಅಲಿಬಾಬಾ ಚಾಲೀಸ್ ಚೋರ್ ತಂಡದಿಂದ ಗೋಕಾಕ ಜನರ ಮುಕ್ತಿಗಾಗಿ ಸ್ಪರ್ಧೆ ಅನಿವಾರ್ಯವಾಗಿದೆ. ಗೋಕಾಕದಲ್ಲಿ ಅಂಬಿರಾವ ಮತ್ತು ತಂಡದ ಭ್ರಷ್ಟಾಚಾರ ಹೆಚ್ಚಾಗಿದೆ ಗೋಕಾಕ ನಗರದ 5 ನಗರಸಭೆ ಸದಸ್ಯರು ಮತ್ತು ಆಂಕಲಗಿಯ ಮೂರು ಜನರೊಂದಿಗೆ ಕೂಡಿಕೊಂಡು ಕ್ಷೇತ್ರದ ಜನರನ್ನು ಲೂಟಿ ಹೊಡೆದಿದ್ದಾರೆ.
ಅಲಿಬಾಬಾ ಚಾಲೀಸ್ ಚೋರ್ ತಂಡದಂತಿರುವ ಈ ತಂಡವನ್ನು ಕ್ಷೇತ್ರದಿಂದ ಕಳೆಸಲು ಈ ಹೋರಾಟಮಾಡಿ ಜನರನ್ನು ಇವರ ದುರಾಡಳಿತದಿಂದ ರಕ್ಷಿಸಬೇಕಾಗಿದೆ ಎಂದರಲ್ಲದೆ ದಿ.30 ರಂದು ನಾಮಪತ್ರ ಸಲ್ಲಿಸುವುದಾಗಿಯೂ ಅವರು ತಿಳಿಸಿದರು. 

Related posts: