RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಗೋಕಾಕ ಜಿಲ್ಲೆಯಾದಿದ್ದರೆ ಉಗ್ರ ಸ್ವರೂಪದ ಹೋರಾಟ : ಸರಕಾರಕ್ಕೆ ಮುರಘರಾಜೇಂದ್ರ ಶ್ರೀಗಳ ಎಚ್ಚರಿಕೆ

ಗೋಕಾಕ:ಗೋಕಾಕ ಜಿಲ್ಲೆಯಾದಿದ್ದರೆ ಉಗ್ರ ಸ್ವರೂಪದ ಹೋರಾಟ : ಸರಕಾರಕ್ಕೆ ಮುರಘರಾಜೇಂದ್ರ ಶ್ರೀಗಳ ಎಚ್ಚರಿಕೆ 

ಗೋಕಾಕ ಜಿಲ್ಲೆಯಾದಿದ್ದರೆ ಉಗ್ರ ಸ್ವರೂಪದ ಹೋರಾಟ : ಸರಕಾರಕ್ಕೆ ಮುರಘರಾಜೇಂದ್ರ ಶ್ರೀಗಳ ಎಚ್ಚರಿಕೆ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 2:

 

 
ಗೋಕಾಕ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಸರಕಾರವನ್ನೆ ಬದಲಿಸಬಲ್ಲರು ಎಂಬ ಸಂದೇಶವನ್ನು ದೇಶಕ್ಕೆ ನೀಡಿದ್ದು,ಗೋಕಾಕನಿಂದಲೇ ಸರಕಾರ ರಚನೆಯಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಗೋಕಾಕನ್ನು ನೂತನ ಜಿಲ್ಲೆಯನ್ನಾಗಿ ಮಾಡುವಂತೆ ಚಾಲನಾ ಸಮಿತಿಯ ಅಧ್ಯಕ್ಷರಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಸರಕಾರವನ್ನು ಒತ್ತಾಯಿಸಿದರು

ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ನೂತನ ಜಿಲ್ಲೆಗಾಗಿ ಆಗ್ರಹಿಸಿ ನಡೆಸಿದ ಪ್ರತಿಭಟನೆಯ ನೇತೃತ್ವವ ವಹಿಸಿ ಮಾತನಾಡಿದ ಅವರು ಹುಂಡೇಕರ,ಗದ್ದಿಗೌಡರ ಆಯೋಗಗಳು ಗೋಕಾಕ ಜಿಲ್ಲೆಯನ್ನಾಗಲು ವರದಿ ನೀಡಿದರು ಸರಕಾರ ಅದನ್ನು ಅನುಷ್ಠಾನ ಗೋಳಿಸುತ್ತಿಲ್ಲ ತಕ್ಷಣ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಜಾರಕಿಹೊಳಿ ಸಹೋದದರು ಜಿಲ್ಲೆಯನ್ನಾಗಿ ಮಾಡಲು ಸರಕಾರದ ಮೇಲೆ ಒತ್ತಡ ಹೇರುವಂತೆ ನಾವೆಲ್ಲರೂ ಅವರನ್ನು ಆಗ್ರಹಿಸೋಣ ಎಂದ ಅವರು ಗೋಕಾಕ ಜಿಲ್ಲಾ ಘೋಷಣೆ ಯಾಗುವವರೆಗೂ ನಿರಂತರ ಹೋರಾಟ ನಡೆಸಲಾಗುವದೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು
ಇದ್ದಕೂ ಮೊದಲು ನಗರದ ಶೂನ್ಯ ಸಂಪಾದನ ಮಠದಲ್ಲಿ ಸಭೆ ಸೇರಿದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಮುಖಂಡರುಗಳು ಜಿಲ್ಲಾ ಹೋರಾಟವನ್ನು ತೀವ್ರಗೋಳಿಸುವ ನಿರ್ಧಾರ ಕೈಗೊಂಡರು ಸಭೆಯಲ್ಲಿ ಕೆಲವರು ಬರುವ ಉಪ ಚುನಾವಣೆಯನ್ನು ಬಹಿಷ್ಕರಿಸುವ ಸಲಹೆಯನ್ನು ನೀಡಿದ್ದು ಕೇಳಿ ಬಂತು ನಂತರ ನಗರದ ಪ್ರಮುಖ ಬೀದಿಗಳಲ್ಲಿ ಜಿಲ್ಲೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಯಿಸಿ ಟಾಯರಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡೆಸಿದರು
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘಟನೆಗಳ ಅಧ್ಯಕ್ಷ ಯು.ಬಿ.ಶಿಂಪಿ, ಮುಖಂಡರುಗಳಾದ ಬಸಗೌಡ ಪಾಟೀಲ (ನಾಗನೂರ) ಬಸಗೌಡ ಪಾಟೀಲ (ಕಲ್ಲೋಳಿ) , ಡಾ. ರಾಜೇಂದ್ರ ಸಣಕ್ಕಿ, ಎಸ್.ಎ.ಕೋತವಾಲ, ಸಿದ್ದಲಿಂಗ ದಳವಾಯಿ, ಅಶೋಕ ಪಾಟೀಲ , ನಾರಾಯಣ ಶರಣರು, ಎಂ.ಆರ್.ಭೋವಿ, ಬಸವರಾಜ ಖಾನಪ್ಪನವರ, ಸಿ.ಡಿ.ಹುಕ್ಕೇರಿ, ಅಡಿವೆಪ್ಪ ಕಿತ್ತೂರ,ಶಂಕರ ಬಿಲಕುಂದಿ, ಕಿರಣ ಢಮಾಮಗರ,ಶಿವು ಪಾಟೀಲ,ಅಮೃತ ದಪ್ಪಿನವರ, ಆನಂದ ಗೋಟಡಕಿ ಸೇರಿದಂತೆ ಅನೇಕರು ಇದ್ದರು

Related posts: