ಬೆಳಗಾವಿ: ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ : ಕೆಡಿಪಿ ಸಭೆಯಲ್ಲಿ ನಾಡ ವಿರೋಧಿ ಶಾಸಕ ಅರವಿಂದನ ಉದ್ಧಟತನ
ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ : ಕೆಡಿಪಿ ಸಭೆಯಲ್ಲಿ ನಾಡ ವಿರೋಧಿ ಶಾಸಕ ಅರವಿಂದನ ಉದ್ಧಟತನ
ಬೆಳಗಾವಿ ಜು 24: ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಜಿಲ್ಲೆಯ ಖಾನಾಪುರ ಎಂಇಎಸ ಶಾಸಕ ಅರವಿಂದ ಪಾಟೀಲ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಹಾರಾಷ್ಟ್ರಕ್ಕೆ ಸೇರುವುದಾಗಿ ನಾಡ ವಿರೋಧಿ ಹೇಳಿಕೆಯನ್ನು ನೀಡಿ ಕರ್ನಾಟಕವನ್ನು ಅವಮಾನಿಸಿದ್ದಾನೆ
ಗಡಿ ವಿಚಾರದಲ್ಲಿ ನಾವು ಸುಪ್ರೀಂ ಕೋರ್ಟಿಗೆ ಹೋಗಿದ್ದೆವು. ಅಲ್ಲಿ ಫೈನಲ್ ಆಗುತ್ತೆ. ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ ಅನ್ನುವ ಮೂಲಕ ಶಾಸಕ ನಾಡದ್ರೋಹಿ ಹೇಳಿಕೆ ನೀಡಿದ್ದಾರೆ.
ಇನ್ನು ಶಾಸಕ ಅರವಿಂದ್ ಪಾಟೀಲ್‌ಗೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ನಾವು ಮಹಾಜನ ಆಯೋಗದ ವರದಿಯನ್ನು ಒಪ್ಪಿದ್ದೇವೆ. ನೀವೆನೇ ಹೊಸದು ಮಾಡಿದ್ರು ನಾವ್ ಒಪ್ಪಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಕೆಡಿಪಿ ಸಭೆಯಲ್ಲಿ ಖಾನಾಪುರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆಯಾಗುತ್ತಿದ್ದಾಗ, ಖಾನಾಪುರ ಎಂದೆಂದೂ ಕರ್ನಾಟಕದಲ್ಲೇ ಉಳಿಯುವಂತದ್ದು. ಇದಕ್ಕಾಗಿ ಹೋರಾಟ ಮಾಡ್ತೀನಿ ಅಂತ ಹೇಳು. 15 ದಿನದಲ್ಲಿ ಉಸ್ತುವಾರಿ ಸಚಿವರು ಎಲ್ಲವನ್ನೂ ಮಂಜೂರು ಮಾಡಿಸ್ತಾರೆ ಅಂತ ಅಥಣಿ ಶಾಸಕ ಲಕ್ಷ್ಮಣ ಸವದಿ ಸಭೆಯಲ್ಲಿ ಶಾಸಕ ಅರವಿಂದ್ ಪಾಟೀಲ್‌ಗೆ ಹೇಳಿದ್ದಕ್ಕೆ ಅವರು ಈ ಉದ್ಧಟತನ ತೋರಿದ್ದಾರೆ