RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ದಿ.20 ರಂದು ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆಯ ಉದ್ಘಾಟನೆ ಹಾಗೂ ಕವನ ಸಂಕಲನಗಳ ಲೋಕಾರ್ಪಣೆ

ಗೋಕಾಕ:ದಿ.20 ರಂದು ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆಯ ಉದ್ಘಾಟನೆ ಹಾಗೂ ಕವನ ಸಂಕಲನಗಳ ಲೋಕಾರ್ಪಣೆ 

ದಿ.20 ರಂದು ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆಯ ಉದ್ಘಾಟನೆ ಹಾಗೂ ಕವನ ಸಂಕಲನಗಳ ಲೋಕಾರ್ಪಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಅ 16 :

 

 
ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆಯ ಉದ್ಘಾಟನೆ ಹಾಗೂ ಕವನ ಸಂಕಲನಗಳ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು ದಿ.20 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರೆಗೆ ನಗರದ ಸತೀಶ ಶುಗರ್ಸ್ ಪದವಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಜರುಗಲಿದೆ.
ಮುಂಜಾನೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅನಸೂಯಾ ವಹಿಸಲಿದ್ದು, ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಡಾ|| ಎಮ್.ಜಿ.ಆರ್.ಅರಸ್ ನೆರವೇರಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ ಹಾಗೂ ಸಾಹಿತಿ ಚಂದ್ರಶೇಖರ ಅಕ್ಕಿ ಆಗಮಿಸಲಿದ್ದಾರೆ. ನಂತರ ಈಶ್ವರ ಮಮದಾಪೂರ ಅವರ ರಚಿತ ಕಾವ್ಯಯಾನ ಪುಸ್ತಕವನ್ನು ಮಮದಾಪೂರದ ಚರಮೂರ್ತೇಶ್ವರ ಸ್ವಾಮಿಗಳು, ಮಮದಾಪೂರ ಹನಿಗಳು ಪುಸ್ತಕವನ್ನು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಗಜಾನನ ಮನ್ನಿಕೇರಿ, ಶಮಾ ಜಮಾದಾರ ಅವರ ರಚಿತ ಬಿಂಬ ಪುಸ್ತಕವನ್ನು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಬಿಡುಗಡೆ ಮಾಡಲಿದ್ದು, ಸತೀಶ ಶುಗರ್ಸ್ ಮಹಾವಿದ್ಯಾಲಯದ ಆಡಳಿತಾಧಿಕಾರಿ ಆರ್.ಎಸ್.ಡುಮ್ಮಗೋಳ ಹಾಗೂ ಎನ್‍ಎಸ್‍ಎಫ್ ಕಾರ್ಯದರ್ಶಿ ಎಸ್.ಎ.ರಾಮಗಾನಟ್ಟಿ ಉಪಸ್ಥಿತರಿರುವರು.
ಮಧ್ಯಾಹ್ನ 12 ಗಂಟೆಗೆ ನಡೆಯುವ ಕವನ ಸಂಕಲನಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ|| ಸಿ.ಕೆ.ನಾವಲಗಿ, ಅರಭಾಂವಿ ಮಠದ ಶ್ರೀ ಮಹಾಂತ ಶಿವಯೋಗಿ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೋ. ಸುರೇಶ ಮುದ್ದಾರ, ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೀವರಾಜ ಛತ್ರದ, ತುಮಕೂರಿನ ರತ್ನಮ್ಮ ಬಡವನಹಳ್ಳಿ ಇವರು ಕೃತಿಗಳ ಕುರಿತು ಮಾತನಾಡಲಿದ್ದಾರೆ.
3ಗಂಟೆಗೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಇಲ್ಲಿಯ ಪ್ರೋ ಜಿ.ವಿ.ಮಳಗಿ ಅವರು ವಹಿಸಿಲಿದ್ದು, ನಗರದ ವೈದ್ಯ ಡಾ|| ಶಶಿಕಲಾ ಕಾಮೋಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಅತಿಥಿಗಳಾಗಿ ಇಲ್ಲಿಯ ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾವಂಶಿ, ಬೆಂಗಳೂರಿನ ದಯಾನಂದ ಸಾಗರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|| ನಾಗರಾಜ ಶೆಣೈ, ತುಮಕೂರಿನ ಸ್ನೇಹ ಸಂಗಮ ಬಳಗದ ಚಂದ್ರು ನಿಟ್ಟೂರ, ಬೆಳಗಾವಿ ಸಾಹಿತಿ ಆಶಾ ಯಮಕನಮರಡಿ, ಇಲ್ಲಿಯ ಸತೀಶ ಶುಗರ್ಸ್ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ ಟಿ.ಬಿ.ತಳವಾರ ಆಗಮಿಸಲಿದ್ದು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವೇದಿಕೆಯ ಅಧ್ಯಕ್ಷ ಈಶ್ವರ ಮಮದಾಪೂರ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

Related posts: