ಗೋಕಾಕ:ಬಂಡೆಕಲ್ಲು ತೆರುವು ಕಾರ್ಯಚರಣೆ ಸತೀಶ ಜಾರಕಿಹೊಳಿ ಸಾಥ್: ಗೋಕಾಕದಲ್ಲಿ ಬಂಡೆಕಲ್ಲು ಕುಸಿತ , ಎನ್ ಡಿ ಆರ್ ಎಫ್ ತಂಡ ಭೇಟಿ ಪರಿಶೀಲನೆ
ಬಂಡೆಕಲ್ಲು ತೆರುವು ಕಾರ್ಯಚರಣೆ ಸತೀಶ ಜಾರಕಿಹೊಳಿ ಸಾಥ್: ಗೋಕಾಕದಲ್ಲಿ ಬಂಡೆಕಲ್ಲು ಕುಸಿತ , ಎನ್ ಡಿ ಆರ್ ಎಫ್ ತಂಡ ಭೇಟಿ ಪರಿಶೀಲನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 22 :
ಕಳೆದ ಮೂರನಾಲ್ಕು ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಮಲ್ಲಿಕಾರ್ಜುನ/ಮಲ್ಲಿಕಜಾನ ಗುಡ್ಡದ ಮೇಲಿನ ಬಂಡೆಕಲ್ಲು ಕುಸಿದ ಸ್ಥಳಕ್ಕೆ ಮಂಗಳವಾರದಂದು ಎನ್ ಡಿ ಆರ್ ಎಫ್ 5 ಪುಣೆ ತಂಡದ ಮುಖ್ಯಸ್ಥ ಬಿ. ಎಸ್ ಪ್ರಸಾದರಾವ್ ಮತ್ತು ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಡೆಕಲ್ಲು ತೆರುವಿಗೆ ಶಾಸಕ ಸತೀಶ ಜಾರಕಿಹೊಳಿ ತಮ್ಮ ತಂಡದಿಂದ ಎಲ್ಲ ಸಲಕರಣೆಗಳನ್ನು ಒದಗಿಸಿ ಸಾಥ್ ನೀಡಿದ್ದಾರೆ .
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ಸತತ ಸುರಿದ ಮಳೆಯಿಂದ ಅತ್ಯಂತ ಹಳೆಯ ಬಂಡೆಕಲ್ಲು ಐದು ಅಡಿ ಕುಸಿದಿದ್ದೆ, ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ ಆದಷ್ಟು ಬೇಗ ಎನ್ ಡಿ ಆರ್ ಎಫ್ ತಂಡ, ಇಳಕಲ್ ಮತ್ತು ರಾಜಸ್ಥಾನ ದಿಂದ ಬಂದಿರುವ ಬಂಡೆಕಲ್ಲು ತೆರವು ನುರಿತ ತಂಡದ ಕಾರ್ಯಚರಣೆಯಿಂದ ಕುಸಿದಿರುವ ಬಂಡೆಕಲ್ಲನ್ನು ಸುರಕ್ಷಿತವಾಗಿ ತೆರವು ಗೋಳಿಸಲಾಗುವದು ಎಂದ ತಹಶೀಲ್ದಾರ್ ಅವರು ಇಡಿಯಾಗಿ ಗುಡ್ಡವನ್ನು ಪರಿಶೀಲಿಸಿ ಅಂತಹ ಬಂಡೆಕಲ್ಲುಗಳನ್ನು ಪರಿಶೀಲಿಸಿ ಮುಂಜಾಗೃತ ಕ್ರಮ ಕೈಗೋಳ್ಳಲಾಗುವದು ಬಂಡೆಕಲ್ಲು ತೆರುವಿಗೆ ಎನ್ ಡಿ ಆರ್ ಎಫ್ ನ 24 ಜನರ ತಂಡ ಮತ್ತು ಇಲಕಲ್ , ರಾಜಸ್ಥಾನ 12 ತಂಡ ಗೋಕಾಕ ನಗರಕ್ಕೆ ಬಂದು ಬಂಡೆಕಲ್ಲು ಸ್ಥಳದ ಪರಿಶೀಲನೆ ನಡೆಸಿದೆ. ಮಧ್ಯಾಹ್ನ ಸುಮಾರು 3 ಘಂಟೆಯೊಳಗೆ ಬಂಡೆ ತೆರವುಗೊಳಿಸಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡ ನಂತರ ತಾಂತ್ರಿಕ ತಂಡದವರ ನಿರ್ದೇಶನದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುವದು ಮಳೆ ನಿಂತರ ಒಂದು ದಿನದಲ್ಲಿ ಈ ಕಾರ್ಯಚರಣೆ ಮುಗಿಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಬಂಡೆತೆರವು ಕಾರ್ಯಚರಣೆಗೆ ಸತೀಶ ಜಾರಕಿಹೊಳಿ ಸಾಥ್: ಸತತ ಸುರಿಯುತ್ತಿರುವ ಮಳೆಯಿಂದ ನಗರದ ಗುಡ್ಡದ ಮೇಲೆ ಸರಿದ ಬಂಡೆಕಲ್ಲು ತೆರವುವಿಗೆ ಶಾಸಕ ಸತೀಶ ಜಾರಕಿಹೊಳಿ ಅವರು ಮುಂದಾಗಿದ್ದು, ತಮ್ಮ ಗ್ರ್ಯಾನೆಟ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಳಕಲ್, ತಮಿಳುನಾಡು ಮತ್ತು ರಾಜಸ್ಥಾನ ಬಂಡೆತೆರವು ಗೋಳಿಸುವ ನುರಿತ ತಂಡವನ್ನು ಸ್ಥಳಕ್ಕೆ ಕಳುಹಿಸಿ ಅದಕ್ಕೆ ಬೇಕಾಗುವ ಎಲ್ಲ ಸಲಕರಣೆಗಳನ್ನು ನೀಡಿ ಬಂಡೆಕಲ್ಲು ತೆರುವಿಗೆ ತಾಲೂಕಾಡಳಿತಕ್ಕೆ ಸಾಥ್ ನೀಡಿದ್ದಾರೆ
ಈ ಸಂದರ್ಭದಲ್ಲಿ ಸರ್ಕಲ್ ಶಿವಾನಂದ ಹಿರೇಮಠ, ನಗರಸಭೆ ಪ್ರಭಾರಿ ಪೌರಾಯುಕ್ತ ವಿ.ಎಸ್.ತಡಸಲೂರ, ಗ್ರಾಮ ಲೆಕ್ಕಾಧಿಕಾರಿ ಡಿ.ಎಸ್.ದೇಸಾಯಿ,ಸಹಾಯಕ ಅಭಿಯಂತರರಾದ ಎ.ಎಸ್ ರಜಪೂತ, ವಿನೋದ ಪಾಟೀಲ, ಆರೀಪ ಪೀರಜಾದೆ, ಬಸವರಾಜ ದೇಶನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು