ಘಟಪ್ರಭಾ:ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೋಳ್ಳಿ : ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಸಲಹೆ
ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೋಳ್ಳಿ : ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಸಲಹೆ
ಘಟಪ್ರಭಾ ಜು 26: ಸ್ಥಳೀಯ ಜನತಾ ಪ್ಲಾಟನಲ್ಲಿರುವ ಸರಕಾರಿ ಉರ್ದು ಹಿ.ಪ್ರಾ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣಾ ಕಾರ್ಯಕ್ರಮಕ್ಕೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಉಸ್ತಾದ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕನಾಗಿ ಹೊರಹೊಮ್ಮಬೇಕೆಂದು ಹೇಳಿದರು.
ಒಟ್ಟು 204 ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಿಲಾಯಿತು. ಪ.ಪಂ ಸದಸ್ಯ ಸಲೀಮ ಕಬ್ಬೂರ, ವಿಕ್ರಮ ದಳವಾಯಿ, ಎಸ್.ಡಿ.ಎಂ.ಸಿ ಸದಸ್ಯ ಮುಸ್ತಾಕ ಸೌದಾಗರ, ಹಿರಿಯರಾದ ಜಾವೇದ ಕಬ್ಬೂರ, ರಶೀದ ಮೋಮಿನ, ಶಿಕ್ಷಕರಾದ ಎಸ್.ಎಂ.ಖಾನಜಾದೆ, ಡಿ.ಜೆ.ಕಲಾರಕೊಪ್ಪ, ಡಿ.ಕೆ.ಜಮಾದಾರ, ಎಸ್.ಎಂ.ಬಾಗಸಿರಾಜ, ಎಸ್.ಡಿ.ಬಾಗವಾಲೆ, ಎಂ.ಎ.ಸಿದ್ಧಿಕ್ಕಿ, ಆರ್.ಝಡ್.ಮಕಾನದಾರ ಉಪಸ್ಥಿತರಿದ್ದರು.