RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಒಂದು ಸಸಿ ನೆಟ್ಟು ಬೆಳಸಬೇಕು : ಬಸವರಾಜ ಹೆಗ್ಗನಾಯಿಕ

ಗೋಕಾಕ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಒಂದು ಸಸಿ ನೆಟ್ಟು ಬೆಳಸಬೇಕು : ಬಸವರಾಜ ಹೆಗ್ಗನಾಯಿಕ 

ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಒಂದು ಸಸಿ ನೆಟ್ಟು ಬೆಳಸಬೇಕು : ಬಸವರಾಜ ಹೆಗ್ಗನಾಯಿಕ

 

ನಮ್ಮ ಬೆಳಗಾವಿ ಇಶ- ವಾರ್ತೆ ,ಗೋಕಾಕ ಅ 26 :

 

ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಒಂದು ಸಸಿ ನೆಟ್ಟು ಬೆಳಸಬೇಕು. ಗೋಕಾಕ ತಾಲೂಕಿನ ರೈತರು ಇಲ್ಲಿಯ ಸಾಮಾಜಿಕ ಅರಣ್ಯ ವಲಯದ ಮೂಲಕ ಕೃಷಿ ಅರಣ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗೋಕಾಕ ತಾಪಂ ಇಒ ಬಸವರಾಜ ಹೆಗ್ಗನಾಯಿಕ ಹೇಳಿದರು.
ಕೃಷಿ ಅರಣ್ಯದ ಉಪಯೋಜನೆಯಡಿಯಲ್ಲಿ ಬೆಳಗಾವಿ ಸಾಮಾಜಿಕ ಅರಣ್ಯ ವಿಭಾಗ, ವಿಜಯಪುರದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಗೋಕಾಕ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಗರದ ತಾಲೂಕಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ಅ.26 ರಂದು ರೈತರಿಗಾಗಿ ಕೃಷಿ ಅರಣ್ಯ ಮತ್ತು ಅರಣ್ಯೀಕರಣ ಕುರಿತು ಆಯೋಜಿಸಿದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿಜಯಪುರದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಬಾಬು ಸಜ್ಜನ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದ ವಿವಿಧ ಯೋಜನೆಗಳ ಮೂಲಕ ರೈತರು ಕೃಷಿ ಅರಣ್ಯ ಮಾಡಲು ಮುಂದಾಗಬೇಕು ಎಂದರು.
ಗೋಕಾಕ ಸಾಮಾಜಿಕ ಅರಣ್ಯ ವಲಂiÀiದ ಅರಣ್ಯಾಧಿಕಾರಿ ಗಿರೀಶ ಸಂಕರಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕೋಡಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೃಷಿ ಅರಣ್ಯದ ಕುರಿತು ಹಲವು ಕಾರ್ಯಾಗಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಗೋಕಾಕ ತಾಲೂಕಿನ ರೈತರು ಕೃಷಿ ಅರಣ್ಯದಿಂದಾಗುವ ಪ್ರಯೋೀಜನಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗೋಕಾಕ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ, ವಿವಿಧ ಹಳ್ಳಿಗಳ ರೈತರು, ಗ್ರಾಮಸ್ಥರು ಇದ್ದರು.

Related posts: