RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಈಗ ರಮೇಶ ಆಟ ನಡೆಯುವದಿಲ್ಲ : ಸತೀಶ ಜಾರಕಿಹೊಳಿ ವ್ಯಂಗ್ಯ

ಗೋಕಾಕ:ಈಗ ರಮೇಶ ಆಟ ನಡೆಯುವದಿಲ್ಲ : ಸತೀಶ ಜಾರಕಿಹೊಳಿ ವ್ಯಂಗ್ಯ 

ಈಗ ರಮೇಶ ಆಟ ನಡೆಯುವದಿಲ್ಲ : ಸತೀಶ ಜಾರಕಿಹೊಳಿ ವ್ಯಂಗ್ಯ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 28 :

 

ಕಳೆದ 5 ಚುನಾವಣೆಗಳನ್ನು ಲಖನ ಜಾರಕಿಹೊಳಿ ಅವರ ಬೆಂಬಲದಿಂದ ಗೆಲುವನ್ನು ಸಾಧಿಸುತ್ತಾ ಬಂದಿರುವ ರಮೇಶ ಅವರು ಈಗ ಲಖನ ದೂರವಾಗಿದ್ದನ್ನು ಮನಗಂಡು ಬಾಲಚಂದ್ರ ಜಾರಕಿಹೊಳಿ ಅವನ ಬೆನ್ನಹಿಂದೆ ಬಿದ್ದಿದ್ದಾನೆ ಈಗ ಅವರ ಆಟ ನಡೆಯುವದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ರಮೇಶ ಜಾರಕಿಹೊಳಿ ಕುರಿತು ವ್ಯಂಗ್ಯವಾಡಿದರು.
ಸೋಮವಾರದಂದು ನಗರದಲ್ಲಿ ನಮ್ಮ ಬೆಳಗಾವಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಮೇಶ ಅವರ ಹೇಳಿಕೆಗೆ ನಾವು ಮಹತ್ವವನ್ನು ನೀಡುವದಿಲ್ಲ, ನಾವು ಜನರ ಕಷ್ಟ-ನಷ್ಟಗಳಿಗೆ ನೇರವಾಗುತ್ತಾ ಸಾಗಿದ್ದೇವೆ. ನಮ್ಮ ಜನೋಪಯೋಗಿ ಕೆಲಸವನ್ನು ಮುಂದುವರೆಸುತ್ತಾ ಹೋಗುತ್ತೇವೆ. ಅವರೇನು ಪ್ರಭಾವಿ ನಾಯಕರಲ್ಲ ಎಂದು ಪ್ರತಿಕ್ರೀಯಿಸಿದರು.
ನೆರೆ ಬಂದ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸದೇ ತಮ್ಮ ಸ್ಥಾನವನ್ನು ಭದ್ರಗೊಳಿಸಲು ಇಲ್ಲಿಯ ಜನತೆಗೆ ದ್ರೋಹವೆಸಗಿದ್ದಾರೆ. ಅಲ್ಲದೇ ಸ್ವಚ್ಚತೆಗಾಗಿ ಒಂದು ಟ್ರೀಪ್ ಮಣ್ಣನ್ನು ಹೊರೆ ತೆಗೆಯಲು 1200 ರೂಗಳನ್ನು ನಗರ ಸಭೆಯಲ್ಲಿ ಖರ್ಚುನ್ನು ತೋರಿಸುತ್ತಿರುವುದು ಇಲ್ಲಿಯ ಜನತೆಗೆ ಮಾಡುತ್ತಿರುವುದು ದ್ರೋಹವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಕಳೆದ 3 ತಿಂಗಳಿನಿಂದ ಗೋಕಾಕ ಮತಕ್ಷೇತ್ರದಲ್ಲಿ ಸಹೋದರ ಲಖನ ಜೊತೆ ಕ್ಷೇತ್ರದಲ್ಲಿ ಜನತೆಯ ಕಷ್ಟಗಳಿಗೆ ಸ್ಪಂದನೆ ಮಾಡುತ್ತಾ ರಮೇಶ ಹಾಗೂ ಅವರ ಅಳಿಯ ಅಂಬಿರಾವ ಅವರು ಮಾಡಿರುವ ಬೃಷ್ಟಾಚಾರವನ್ನು ಹೊರಗೆಡುತ್ತಿರುವುದರಿಂದ ರಮೇಶ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದ್ದು ಅಲ್ಲಿಯವರೆಗೆ ಕಾಯೋಣ ಎಂದು ಹೇಳಿದರು.

Related posts: