RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಭಾವೈಕೆತೆಗೆ ಸಾಕ್ಷೀಯಾದ ನೆರೆ ಸಂತ್ರಸ್ತರ ದೀಪಾವಳಿ

ಗೋಕಾಕ:ಭಾವೈಕೆತೆಗೆ ಸಾಕ್ಷೀಯಾದ ನೆರೆ ಸಂತ್ರಸ್ತರ ದೀಪಾವಳಿ 

ಭಾವೈಕೆತೆಗೆ ಸಾಕ್ಷೀಯಾದ ನೆರೆ ಸಂತ್ರಸ್ತರ ದೀಪಾವಳಿ

 
ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ಅ 28 :

 
ಕಳೆದ ಮೂರು ತಿಂಗಳ ಹಿಂದೆ ಬಂದ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ಕಂಗಾಲಾಗಿರುವ ನೆರೆ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸುವ ಮುಖೇನ ಇಲ್ಲಿಯ ಯುವಕರು ಭಾವೈಕೆತೆಗೆ ಸಾಕ್ಷೀಯಾಗಿದ್ದಾರೆ

ರವಿವಾರದಂದು ದೇಶವೆಲ್ಲ ದೀಪಾವಳಿ ಆಚರಣೆಯಲ್ಲಿರುವಾಗ ಇಲ್ಲಿಯ ನೆರೆ ಸಂತ್ರಸ್ತರು ದಿಕ್ಕು ತೋಚದೆ ಕುಳಿತ್ತಿರುವಾಗ ಸ್ಥಳೀಯ ಮೋಮಿನ ಗಲ್ಲಿಯ ಮುಸ್ಲಿಂ ಸಮಾಜದ ಯುವಕರು ನೆರೆ ಸಂತ್ರಸ್ತರ ಶೆಡಗಳಿಗೆ ತೆರಳಿ, ದೀಪಾವಳಿ ವಿಶೇಷ ಪೂಜೆಯ ವ್ಯವಸ್ಥೆ ಮಾಡಿ ಅವರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಜಾತಿ, ಧರ್ಮ ಯಾವುದೇ ಇಲ್ಲ ನಾವೆಲ್ಲರೂ ಒಂದೆ ಎಂಬ ಸಂದೇಶವನ್ನು ಸಾರಿ ಹೇಳಿದ್ದಾರೆ

ಜುಬೇರ ಮಿರ್ಜಾಬಾಯಿ ನೇತೃತ್ವದ ಯುವಕರ ತಂಡ ನಿರಾಶ್ರಿತರಿಗೆ ಹಾಕಲಾಗಿರುವ ಶೆಡಗಳಿಗೆ ತೆರಳಿ ಸುಮಾರು 300 ಜನ ನಿರಾಶ್ರಿತರಿಗೆ ಮಹಾಲಕ್ಷ್ಮಿ ಪೂಜೆಯ ವ್ಯವಸ್ಥೆ, ದೀಪಗಳ ವ್ಯವಸ್ಥೆ, ಪಟಾಕಿ ಮತ್ತು ರುಚಿಕರವಾದ ಊಟದ ವ್ಯವಸ್ಥೆಯನ್ನು ಮಾಡಿ ಸಂತ್ರಸ್ತರೊಂದಿಗೆ ಊಟ ಮಾಡಿ ಅವರ ದುಖ ವರೆಸುವ ಪ್ರಾಮಾಣಿಕ ಪ್ರಯತ್ನಮಾಡಿದ್ದಾರೆ.

ಪಟಾಕಿ ಸಿಡಿಸಿ ಸಂಭ್ರಮಿಸಿದ ಮಕ್ಕಳು : ತಾತ್ಕಾಲಿಕ ಶೆಡಗಳಲ್ಲಿ ನಗರದ ಮೋಮಿನ ಗಲ್ಲಿಯಲ್ಲಿರುವ ಯುವಕರು ದೀಪಾವಳಿ ಹಬ್ಬದ ವ್ಯವಸ್ಥೆ ಮಾಡಿದ್ದರಿಂದ ಇಲ್ಲಿಯ ಜನರು ಸಾಮೂಹಿಕ ಪೂಜೆಯಲ್ಲಿ ತೊಡಗಿದರೆ ಮಕ್ಕಳು ಪುಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು

ಮೊನ್ನೆಯಷ್ಟೇ ಶಾಸಕ ಸತೀಶ ಜಾರಕಿಹೊಳಿ ಅವರು ನಿರಾಶ್ರಿತರ ಶೆಡಗಳಿಗೆ ವಿದ್ಯುತ್ ದೀಪ ಮತ್ತು ಬಾಗಿಲುಗಳ ವ್ಯವಸ್ಥೆ ಮಾಡಿ ಕೊಟ್ಟಿದ್ದು ಇಲ್ಲಿ ಉಲ್ಲೇಖನೀಯ
ಒಟ್ಟಾರೆ ನೆರೆಯಿಂದ ತತ್ತರಿಸಿ ಕಂಗಾಲಾಗಿದ್ದ ನೆರೆ ಸಂತ್ರಸ್ತರಿಗೆ ಇಲ್ಲಿಯ ಮುಸ್ಲಿಂ ಯುವಕರು ಮಾಡಿದ ಹಬ್ಬದ ವ್ಯವಸ್ಥೆ ಭಾವೈಕೆತೆಯ ಪ್ರತೀಕವಾಗಿದ್ದಂತು ಮರೆಯುವಂತಿಲ್ಲ
ಈ ಸಂದರ್ಭದಲ್ಲಿ ಜುಬೇರ ಮಿರ್ಜಾಬಾಯಿ, ರಿಯಾಜ ಚೌಗಲಾ, ಅಮೀರಖಾನ , ಆಜಾದ ಸನದಿ, ನಿಯಾಜ ಸನದಿ, ರಮೇಶ ಮೇಲ್ಮಟ್ಟಿ, ಶ್ರೀಕಾಂತ್ ತಹಶೀಲ್ದಾರ್ ಸೇರಿದಂತೆ ಇತರರು ಇದ್ದರು

Related posts:

ಗೋಕಾಕ:ಕುಲಗೋಡ ಕಾಲುವೆ ಭಾಗದ ರೈತರಿಗೆ ನೀರು ತಲುಪಿಸಲು ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಮಾಜಿ ಸಚಿವ …

ಗೋಕಾಕ:ನೆರೆ ಪೀಡಿತ ಪ್ರದೇಶಗಳ ಸರ್ವೆ ಕಾರ್ಯ ಮುಗಿದ ನಂತರ ಪುನರ್ವಸತಿ ಬಗ್ಗೆ ತಿರ್ಮಾನ : ಮಾಜಿ ರಾಜ್ಯಸಭಾ ಸದಸ್ಯ ಮೌಲಾನ…

ಗೋಕಾಕ:ಪದವಿಪೂರ್ವ ಮಹಾವಿದ್ಯಾಲಯದ ವಿವಿಧ ಕ್ರೀಡೆಗಳಲ್ಲಿ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಮಹಾವಿದ್ಯಾಲಯದ ಸಾಧನೆ