RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸತೀಶ ಮತ್ತು ಲಖನಗೆ ಬಿಗ್ ಶಾಕ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಚುನಾಯಿತ ಸದಸ್ಯರಿಂದ ಬಿಜೆಪಿ ಬೆಂಬಲ ?

ಗೋಕಾಕ:ಸತೀಶ ಮತ್ತು ಲಖನಗೆ ಬಿಗ್ ಶಾಕ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಚುನಾಯಿತ ಸದಸ್ಯರಿಂದ ಬಿಜೆಪಿ ಬೆಂಬಲ ? 

ಸತೀಶ ಮತ್ತು ಲಖನಗೆ ಬಿಗ್ ಶಾಕ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಚುನಾಯಿತ ಸದಸ್ಯರಿಂದ ಬಿಜೆಪಿ ಬೆಂಬಲ ?
ನಮ್ಮ ಬೆಳಗಾವಿ ಇ – ವಾರ್ತೆ ,ವಿಶೇಷ  ಗೋಕಾಕ ನ 2 :


ಉಪ ಚುನಾವಣೆಯ ರಂಗು ಗೋಕಾಕ ಮತಕ್ಷೇತ್ರದಲ್ಲಿ ದಿನೆ ದಿನೆ ಕಾವು ಪಡೆದುಕೋಳ್ಳುತ್ತಿದ್ದೆ. ಕಳೆದ ಮೂರು ತಿಂಗಳಿನಿಂದ ಲಖನ್ ಜೊತೆ ಕೂಡಿ ಗೋಕಾಕ ಮತಕ್ಷೇತ್ರವೆಲ್ಲ ತಿರುಗಾಡಿ ರಮೇಶ ಜಾರಕಿಹೊಳಿ ಅವರ ವಿರುದ್ದ ಬಹಿರಂಗವಾಗಿ ತೊಡೆತಟ್ಟಿದ್ದ ಸಹೋದರರಿಗೆ ರಮೇಶ ಜಾರಕಿಹೊಳಿ ಬೆಂಬಲಿತ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಬಿಗ್ ಶಾಕ ನೀಡಿದ್ದಾರೆ

ಶನಿವಾರದಂದು ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಸೇರಿದ ರಮೇಶ ಜಾರಕಿಹೊಳಿ ಬೆಂಬಲಿತ ಗೋಕಾಕ ನಗರಸಭೆಯ 20, ಕೋಣ್ಣೂರ ಪುರಸಭೆಯ 23 ಮತ್ತು ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ್ ನ 18 ಸದಸ್ಯರು ತಂಡಗಳಾಗಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಸಂಸದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಭೇಟಿಯಾಗಲು ತೆರಳಿದ್ದಾರೆ. ಬಿಜೆಪಿಗೆ ಬೆಂಬಲ ಸೂಚಿಸುವ ಈ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಅಲ್ಲಿಂದ ಮೈಸೂರು ಅಥವಾ ಗೋವಾ ಪ್ರವಾಸ ಕೈಕೋಳ್ಳಲಿದ್ದಾರೆ ಎಂದು ತಿಳಿದು ಬಂದಿದೆ

ಸತೀಶ ಲೆಕ್ಕಾಚಾರ ತಲೆಕೆಳಗೆ : ಮಾಜಿ ಸಚಿವ ರಮೆಶ ಜಾರಕಿಹೊಳಿ ಅನರ್ಹಗೊಂಡ ದಿನದಿಂದ ಇಲ್ಲಿಯವರೆಗೆ ಕಿರಿಯ ಸಹೋದರ ಲಖನ್ ಅವರೊಂದಿಗೆ ಕ್ಷೇತ್ರವೆಲ್ಲ ಸಂಚರಿಸಿ ರಮೇಶ ಜಾರಕಿಹೊಳಿ ಮತ್ತು ಅಳಿಯ ಅಂಬಿರಾವ್ ಪಾಟೀಲ ವಿರುದ್ಧ ಬಹಿರಂಗವಾಗಿಗೆ ರಣಕಹಳೆ ಊದಿ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಲೆಕ್ಕಾಚಾರ ಹಾಕಿದ್ದ ಸಹೋದರರಿಗೆ ಈ ಚುನಾಯಿತ ಜನ ಪ್ರತಿನಿದಿ ನಡೆಯಿಂದ ಇರುಸು ಮುರುಸು ಉಂಟಾಗಿದೆ

ಲಖನ ಗುಂಪಿನಿಂದ ಹಾರಿದ ಸದಸ್ಯರು : ಇಲ್ಲಿಯವರೆಗೆ ಯುವ ಮುಖಂಡ ಲಖನ್ ಜಾರಕಿಹೊಳಿ ಅವರ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಲ ನಗರಸಭೆ ,ಪುರಸಭೆ ಮತ್ತು ಪಟ್ಟಣ ಪಂಚಾಯಿತಿನ ಸದಸ್ಯರು ಏಕಾಏಕಿಯಾಗಿ ರಮೇಶ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡು ಪ್ರವಾಸಕ್ಕೆ ಹಾರಿದ್ದು ಇರ್ವ ಸಹೋದರರಿಗೆ ಸದಸ್ಯರ ಈ ನಿಲುವು ತೆಲೆ ನೋವಾಗಿ ಪರಿಣಮಿಸಿದೆ

ಪ್ರಚಾರಕ್ಕೆ ಹಾಜರ : ಎಲ್ಲರ ಲೆಕ್ಕಚಾರ ತೆಲೆಕೆಳಗೆ ಮಾಡಿ ಮೈಸೂರು ಪ್ರವಾಸಕ್ಕೆ ಹಾರಿರುವ ರಮೇಶ ಜಾರಕಿಹೊಳಿ ಬೆಂಬಲಿತ ಗೋಕಾಕ ನಗರಸಭೆ ,ಕೋಣ್ಣೂರ ಪುರಸಭೆ ಮತ್ತು ಪಿ.ಜಿ.ಮಲ್ಲಾಪೂರ ಪಟ್ಟಣ ಪಂಚಾಯಿತಿಯ ಒಟ್ಟು 60 ಜನ ಸದಸ್ಯರು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗಿ ರಮೇಶ ಜಾರಕಿಹೊಳಿ ಅವರ ಅಭ್ಯರ್ಥಿ ಎಂದು ಘೋಷಣೆ ಯಾಗುವವರೆಗೆ ಪ್ರವಾಸದಲ್ಲಿದ್ದು ನಾಮಪತ್ರ ಸಲ್ಲಿಸುವ ಎರೆಡು ದಿನ ಮುಂಚೆ ನಗರಕ್ಕೆ ವಾಪಸ ಆಗಲ್ಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ

ಕಾಂಗ್ರೆಸನಲ್ಲಿಯೇ ಭಿನ್ನಾಭಿಪ್ರಾಯ : ಉಪ ಚುನಾವಣೆ ಟಿಕೆಟ್ ವಿಚಾರವಾಗಿ ಜಿಲ್ಲೆಯ ಕೈ ನಾಯಕರು ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೋಡಬಾರದು ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ ಅವರಿಗೆ ಖುದ್ದು ಭೇಟಿಯಾಗಿ ಮನವಿ ಮಾಡಿದ್ದಾರೆ‌. ಇದನ್ನು ಗಂಭೀರವಾಗಿ ಪರಗಣಿಸಿರುವ ರಾಜ್ಯ ಮಟ್ಟದ ಕೈ ನಾಯಕರು ಉಪ ಚುನಾವಣೆ ವಿಚಾರವಾಗಿ ಗೋಕಾಕ ಕ್ಷೇತ್ರವನ್ನು ಬಿಟ್ಟು ಮೊದಲ ತನ್ನ ಮೊದಲ ಪಟ್ಟಿ ಬಿಡುಗಡೆ ಗೋಳಿಸಿರುವದು ಸಹ ಸತೀಶ ಜಾರಕಿಹೊಳಿ ಅವರಿಗೆ ಮುಜುಗರವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ

ಒಟ್ಟಾರೆ ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಗೋಕಾಕದಲ್ಲಿ ರಾಜಕೀಯ ನಡೆಗಳನ್ನು ಗರಿಗದರುತ್ತಿದ್ದು , ಮತದಾರರನ್ನು ಗೊಂದಲಕ್ಕೆ ಇಡು ಮಾಡುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ

ಕಳೆದ ಮೂರು ತಿಂಗಳಿನಿಂದ ಸತೀಶ ಜಾರಕಿಹೊಳಿ ಅವರು ಎಲ್ಲ ಪಂಚಾಯಿತಿಗಳಿಗೆ ಭೇಟಿನೀಡಿ ರಮೇಶ ಜಾರಕಿಹೊಳಿ ಮತ್ತು ಅವರ ಅಳಿಯ ಮಾಡಿದ ಹಗರಣಗಳನ್ನು ಹೊರ ತಗೆಯುತ್ತಿರುವದರಿಂದ ದೃತಿಗೆಟ್ಟು ಈ ರೀತಿ ಗೇಮ್ ಮಾಡಿ ಜನರ ಮೇಡಂ ಡೈರ್ವಟ ಮಾಡುವ ಕಾರ್ಯ ಇದ್ದಾಗಿದ್ದು , ಇವರ ಆಟ ನಡೆಯುದಿಲ್ಲ ಸದಸ್ಯರಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದಾರೆ ಅದರಲ್ಲಿ ನಾವು ಆರಿಸಿತಂದ ಸದಸ್ಯರು ಇದ್ದಾರೆ ಅವರ ನಿಲುವು ನಮ್ಮ ಪರವಾಗಿಯೆ ಇರಲಿದೆ . ಚುನಾಯಿತ ಎಲ್ಲಿ ಹೋದರೆ ಏನಾಗದು ಅವರು ಮತದಾರರನ್ನು ಕರೆದುಕೊಂಡು ಹೋಗಿಲ್ಲ ಮತದಾರರು ಇಲ್ಲೇ ಇದ್ದಾರೆ ಅವರಿಂದ ಬೇಸತ್ತಿದ್ದಾರೆ .
– ಲಖನ ಜಾರಕಿಹೊಳಿ ಯುವ ಮುಖಂಡ

Related posts: