RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:ರಾಜ್ಯೋತ್ಸವ ನಿಮಿತ್ಯ ಕಬಡ್ಡಿ ಪಂದ್ಯಾವಳಿ: ತಳಕಟ್ನಾಳ ಕಬಡ್ಡಿ ತಂಡ ಪ್ರಥಮ

ಘಟಪ್ರಭಾ:ರಾಜ್ಯೋತ್ಸವ ನಿಮಿತ್ಯ ಕಬಡ್ಡಿ ಪಂದ್ಯಾವಳಿ: ತಳಕಟ್ನಾಳ ಕಬಡ್ಡಿ ತಂಡ ಪ್ರಥಮ 

ರಾಜ್ಯೋತ್ಸವ ನಿಮಿತ್ಯ ಕಬಡ್ಡಿ ಪಂದ್ಯಾವಳಿ: ತಳಕಟ್ನಾಳ ಕಬಡ್ಡಿ ತಂಡ ಪ್ರಥಮ

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ನ 10 :

 
ಸಮೀಪದ ಶಿಂದಿಕುರಬೇಟ ಗ್ರಾಮದ ಜೈ ಹನುಮಾನ ಕಲ್ಚರಲ್ ಆಂಡ್ ಸ್ಪೂಟ್ಸ್ ð ಕ್ಲಬ(ರಿ) ಶಿಂದಿಕುರಬೇಟ ಹಾಗೂ ಕನಾಟಕ ರಕ್ಷಣಾ ವೇದಿಕೆ ಗಜ ಸೇನೆ, ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯನ್ ಬೆಳಗಾವಿ ಇವುಗಳ ಸಂಯುಕ್ತಾಶ್ರಯಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ೫೫ ಕೆಜಿ.ಹೊನಲು ಬೆಳಕಿನ (ಮ್ಯಾಟ ಮೇಲೆ)ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಗೋಕಾಕ ತಾಲೂಕಿನ ತಳಕಟ್ನಾಳ ಕಬಡ್ಡಿ ತಂಡ ರೂ.೧೦೦೦೦/- ನಗದು, ಹಾಗೂ ೫ಪೂಟ ಢಾಲ, ದ್ವಿತೀಯ ಸ್ಥಾನ ಲೇಬರ್ ಕ್ಯಾಂಪ ಕಬಡ್ಡಿ ತಂಡ ಹಿಡಕಲ್ ಡ್ಯಾಂ ರೂ. ೭೦೦೦/- ನಗದು ಮತ್ತು ೩ಫೂಟ ಢಾಲ, ತೃತೀಯ ಸ್ಥಾನ ಗೋಕಾಕ ತಾಲೂಕಿನ ಬಡಿಗವಾಡ ಕಬಡ್ಡಿ ತಂಡ ರೂ. ೫೦೦೦/- ನಗದು ಮತ್ತು ಢಾಲ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ರಾಜು ನಿಲಜಗಿ, ಮಾರ್ಕಂಡೇಶ್ವರ ಮಹಿಮಗೋಳ, ಮೆಹಬೂಬ ಮುಲ್ಲಾ, ಭೀಮಶಿ ಗಾಡಿವಡ್ಡರ, ಮಹೇಶ ಮನವಡೆ ಸೇರಿದಂತೆ ಇತರರು ಇದ್ದರು.

Related posts: