RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಬೆಂಬಲಿಗರ ಸಭೆಯ ನಂತರ ಚುನಾವಣೆ ಸ್ವರ್ಧಿಸುವ ನಿರ್ಧಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಗೋಕಾಕ:ಬೆಂಬಲಿಗರ ಸಭೆಯ ನಂತರ ಚುನಾವಣೆ ಸ್ವರ್ಧಿಸುವ ನಿರ್ಧಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ 

ಬೆಂಬಲಿಗರ ಸಭೆಯ ನಂತರ ಚುನಾವಣೆ ಸ್ವರ್ಧಿಸುವ ನಿರ್ಧಾರ : ಬಿಜೆಪಿ ಮುಖಂಡ ಅಶೋಕ ಪೂಜಾರಿ

 

 
ನಮ್ಮ ಬೆಳಗಾವಿ ಇ – ವಾಾರ್ತೆ ,   ಗೋಕಾಕ ನ 13 :

 

 

ಇದೇ ಶನಿವಾರದಂದು ಕರೆದಿರುವ ಬೆಂಬಲಿಗರ ಸಭೆಯ ನಂತರ ಚುನಾವಣೆಗೆ ಸ್ವರ್ಧಿಸುವ ಬಗ್ಗೆ ನಿರ್ಧಾರ ಕೈಗೋಳ್ಳಲಾಗುವದು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು

ಬುಧವಾರದಂದು ಸುಪ್ರೀಂಕೋರ್ಟ್ ತೀರ್ಪಿನ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಪ್ರೀಂಕೋರ್ಟ್ ತೀರ್ಪು ಮಾನ್ಯ ಸ್ಪೀಕರ್ ಅವರ ಪರಮಾಧಿಕಾರವನ್ನು ಎತ್ತಿ ಹಿಡಿದಿದೆ ಮತ್ತು ಇದು ನಿರೀಕ್ಷಿತ ಕೂಡಾ ಆಗಿದ್ದರಿಂದ ಇದರಲ್ಲಿ ಅಚ್ಚರಿಯ ಅಂಶಗಳೆನ್ನಿಲ್ಲ ಎಂದು ಅಶೋಕ ಪೂಜಾರಿ ಹೇಳಿದರು

ಈಗಾಗಲೇ ಪಕ್ಷದ ವರಿಷ್ಠರು ಮತ್ತು ನನ್ನ ಹಿತೈಷಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ ಆದರೆ ಸಾರ್ವತ್ರಿಕ ಸಭೆಯ ನಂತರವಷ್ಟೇ ನನ್ನ ನಿಲುವನ್ನು ಪ್ರಕಟಿಸಲಾಗುವದೆಂದು ಬಿಜೆಪಿ ಮುಖಂಡ ಅಶೋಕ ಹೇಳಿದರು

Related posts: