ಗೋಕಾಕ:ಉಪಚುನಾವಣೆ : ಗೋಕಾಕ ಕ್ಷೇತ್ರದಲ್ಲಿ ಗೆದ್ದು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡುವೆ : ಲಖನ್ ಜಾರಕಿಹೊಳಿ
ಉಪಚುನಾವಣೆ : ಗೋಕಾಕ ಕ್ಷೇತ್ರದಲ್ಲಿ ಗೆದ್ದು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡುವೆ : ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ನ 13 :
ಗೋಕಾಕ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ ಪಕ್ಷದಿಂದ ಸ್ಪರ್ಧಿಸಿ ಜಯ ಗಳಿಸಿ ಗೋಕಾಕ ಕ್ಷೇತ್ರವನ್ನು ಕಾಂಗ್ರೆಸ ಮುಖಂಡ ಸಿದ್ಧರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡುವದಾಗಿ ಯುವ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
ಅವರು ಅನರ್ಹ ಶಾಸಕರ ಬಗ್ಗೆ ಸುಪ್ರೀಮ ಕೋರ್ಟ ತೀರ್ಪಿನ ನಂತರ ತಮ್ಮ ಕಾರ್ಯಾಲಯದಲ್ಲಿ ಪತ್ರರ್ತರ ಜೊತೆ ಮಾತನಾಡುತ್ತಿದ್ದರು.
ತಮಗೆ ಕಾಂಗ್ರೆಸ ತಿಕೀಟು ಸಿಗುವದು ನಿಶ್ಚಿತ. ಶಾಸಕ ಸತೀಶ ಜಾರಕಿಹೊಳಿ ಅವರು ಬಂದ ನಂತರ ಇನ್ನೆರಡು ದಿನಗಳಲ್ಲಿ ನಾಮಪತ್ರವನ್ನು ಸಲ್ಲಿಸಲಾಗುವದು ಎಂದು ತಿಳಿಸಿದ ಅವರು ಇತ್ತೀಚೆಗೆ ಕ್ಷೇತ್ರದಲ್ಲಿ ಸಹೋದರರ ಮಧ್ಯೆ ‘ಮ್ಯಾಚ್ ಫಿಕ್ಸಂಗ್’ ನಡೆದಿದೆ ಎಂಬ ವದಂತಿಯನ್ನು ಸಂಪೂರ್ಣವಾಗಿ ಅಲ್ಲಗೆಳೆದರು. ಇನ್ನುವರೆಗೆ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಅವರ ಭೃಷ್ಟಾಚಾರದ ಬಗ್ಗೆ ಮಾತನಾಡಿದ್ದೇವೆ. ಇನ್ನು ಮಾವ-ಅಳಿಯನ ಭೃಷ್ಟಾಚಾರವನ್ನು ಹೊರಹೆಳೆಯಕಾಗುವದು. ಅದಕ್ಕಾಗಿ ಕ್ಷೇತ್ರದ ಜನತೆ ಕಿವಿಗೊಡಬಾರದು ಎಂದು ಕೇಳಿಕೊಂಡರು.
ಅಶೋಕ ಪೂಜಾರಿ ಕಾಂಗ್ರೆಸ ಮುಖಂಡರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರ ಕಡೆಗೆ ಪತ್ರಕರ್ತರು ಗಮನ ಸೆಳೆದಾಗ ಚುನಾವಣೆ ಬಂದಾಗ ಮುಖಂಡರನ್ನು ಭೇಟಿಯಾಗುವದು ಸಹಜ. ಕಳೆದ ಐದು ಚುನಾವಣೆಗಳಲ್ಲಿ ಕಾಂಗ್ರೆಸ ಪಕ್ಷವನ್ನು ಕ್ಷೇತ್ರದಲ್ಲಿ ಗೆಲ್ಲಿಸಿದ್ದೇವೆ. ಅಶೋಕ ಪೂಜಾರಿ ಮೂರು ಬಾರಿ ಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಕಾಕ ಮತಕ್ಷೇತ್ರದ ಕಾಂಗ್ರೆಸ ತಿಕೀಟು ನನಗೆ ದೊರೆಯುವದು ಖಚಿತ ಎಂದು ತಿಳಿಸಿದರು.
ಸುಪ್ರೀಮ ಕೋರ್ಟ ತೀರ್ಪಿನ ನಂತರ ನಗರದಲ್ಲಿ ಪಟಾಕ್ಷಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದರ ಬಗ್ಗೆ ಲಖನ್ ಜಾರಕಿಹೊಳಿ ಅವರನ್ನು ಪ್ರಶ್ನಿಸಿದಾಗ ಪಟಾಕ್ಷಿ ಸಿಡಿಸುವವರು ಮಾತ್ರ ಅವರ ಜೊತೆಗೆ ಇದ್ದಾರೆ. ನಮ್ಮ ಜೊತೆ ಕ್ಷೇತ್ರದ ಜನತೆ ಇದೆ. ಈಗಾಗಲೆ ಕ್ಷೇತ್ರದಾದ್ಯಂತ ನಾಲ್ಕು ಸುತ್ತು ಪ್ರಚಾರ ನಡೆಸಲಾಗಿದೆ. ಜನರ ನಾಡಿಮಿಡಿತ ನಮಗೆ ಗೊತ್ತಿದೆ ಎಂದರು.
ಗೋಕಾಕ ಮತಕ್ಷೇತ್ರದ ಮತದಾರರ ಮನೋಭಾವನೆ ಜಾರಕಿಹೊಳಿ ಸಹೋದರರಿಗೆ ಮಾತ್ರ ಗೊತ್ತು. ರಮೇಶ ಜಾರಕೆಲಿ ಮಾಡುವ ತಂತ್ರಗಾರಿಕೆ ನಮಗೆಲ್ಲ ತಿಳಿದಿದೆ. ಅದಕ್ಕೆ ಪ್ರತಿತಂತ್ರ ಹೇಗೆ ಮಾಡಬೇಕು ಎನ್ನುವದು ನಮಗೆ ಗೊತ್ತು ಎಂದು ಲಖನ್ ಜಾರಕಿಹೊಳಿ ತಿಳಿಸಿದರು.
ಚುನಾವಣೆ ಪ್ರಚಾರ ಸಮಯದಲ್ಲಿ ಕಾಂಗ್ರೆಸ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಾ. ಜಿ. ಪರಮೇಶ್ವರ, ದಿನೇಶ ಗುಂಡೂರಾವ್, ಡಿ.ಕೆ. ಶಿವಕುಮಾರ ಅವರು ಆಗಮಿಸಲಿದ್ದಾರೆಂದು ಲಖನ್ ಜಾರಕಿಹೊಳಿ ಹೇಳಿದರು.