ಗೋಕಾಕ:ಭ್ರಷ್ಟಾಚಾರದ ನಿರ್ಮಾಣವೇ ಗೋಕಾಕ ಕ್ಷೇತ್ರದ ಸಾಧನೆ : ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅಶೋಕ ಆರೋಪ
ಭ್ರಷ್ಟಾಚಾರದ ನಿರ್ಮಾಣವೇ ಗೋಕಾಕ ಕ್ಷೇತ್ರದ ಸಾಧನೆ : ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅಶೋಕ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 18 :
ಭ್ರಷ್ಟಾಚಾರದ ದೊಡ್ಡ ಪ್ರಮಾಣದ ನಿರ್ಮಾಣವೇ ಗೋಕಾಕ ಕ್ಷೇತ್ರದ ಸಾಧನೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು
ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಸೋಮವಾರದಂದು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಪೂಜಾರಿ ಯಾವ ವ್ಯವಸ್ಥೆ ವಿರುದ್ಧ ನಾವು ಹೋರಾಟ ಮಾಡುತ್ತಾ ಬಂದಿದ್ದೇನೋ ಅವರೇ ಬಿಜೆಪಿಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದಾಗ ನಾನು ಅನಿವಾರ್ಯವಾಗಿ ಜೆಡಿಎಸ್ ನಿಂದ ಸ್ವರ್ಧಿಸಬೇಕಾಯಿತು. ಬಿಜೆಪಿ ಪಕ್ಷದ ವರಿಷ್ಠರು ನನ್ನ ಮೇಲಿಟ್ಟ ಅಭಿಮಾನಕ್ಕೆ ನಾನು ಋಣಿಯಾಗಿದ್ದು ನನ್ನ ಹೋರಾಟ ವ್ಯವಸ್ಥೆಯ ವಿರುದ್ದವಾಗಿದ್ದು ಈ ಹೋರಾಟ ನಿರಂತರವಾಗಿ ನಡೆಯಲಿದೆ. ನನ್ನ ಗೆಲುವು ಮತದಾರರ ಗೆಲ್ಲುವಾಗಿದ್ದು , ಮತದಾರರು ಈ ಬಾರಿ ನನ್ನ ಕೈ ಹಿಡಿಯಲ್ಲಿದ್ದಾರೆ ಎಂದು ಅಶೋಕ ಪೂಜಾರಿ ಹೇಳಿದರು
ಅರಬಾವಿ ಮತಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ ಚನ್ನಪ್ಪ ವಗ್ಗನವರ, ಜೆಡಿಎಸ್ ಮುಖಂಡ ಭೀಮಶಿ ಗಡಾದ ಅಶೋಕ ಪೂಜಾರಿಗೆ ಸಾಥ್ ನೀಡಿದರು