RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಜೆಡಿಎಸ್-ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ರಮೇಶ ಜಾರಕಿಹೊಳಿ ಅವರನ್ನು ದಾಖಲೆ ಮತಗಳಿಂದ ಆಯ್ಕೆ ಮಾಡಿ : ಜೆ. ಅರುಣಕುಮಾರ

ಗೋಕಾಕ:ಜೆಡಿಎಸ್-ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ರಮೇಶ ಜಾರಕಿಹೊಳಿ ಅವರನ್ನು ದಾಖಲೆ ಮತಗಳಿಂದ ಆಯ್ಕೆ ಮಾಡಿ : ಜೆ. ಅರುಣಕುಮಾರ 

ಜೆಡಿಎಸ್-ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ರಮೇಶ ಜಾರಕಿಹೊಳಿ ಅವರನ್ನು ದಾಖಲೆ ಮತಗಳಿಂದ ಆಯ್ಕೆ ಮಾಡಿ : ಜೆ. ಅರುಣಕುಮಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 21 :
ರಾಜ್ಯದಲ್ಲಿ ಸ್ಥಿರ ಹಾಗೂ ಪಾರದರ್ಶಕ ಆಡಳಿತ ನಡೆಸಲು ಬಿಜೆಪಿ ಸರ್ಕಾರ ರಚನೆಗೆ ಪದತ್ಯಾಗ ಮಾಡಿರುವ ರಮೇಶ ಜಾರಕಿಹೊಳಿ ಅವರನ್ನು ಅನರ್ಹರೆಂದು ಮೂದಲಿಸುತ್ತಿರುವವರಿಗೆ ತಕ್ಕ ಪಾಠ ಕಲಿಸಲು, ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿAದ ಗೆಲ್ಲಿಸುವ ಮೂಲಕ ಜೆಡಿಎಸ್-ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಉತ್ತರ ನೀಡುವಂತೆ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೆ. ಅರುಣಕುಮಾರ ಅವರು ಹೇಳಿದರು.
ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರ ಸಂಘಟನಾ ಪಡೆ ಮತ್ತು ಬಿಜೆಪಿ ಕಾರ್ಯಕರ್ತರ ಪಡೆಗಳು ಕೂಡಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಲು ಕಾರ್ಯಕರ್ತರಿಗೆ ಸಲಹೆ ಮಾಡಿದರು.
ಕಳೆದ ೨೦ ವರ್ಷಗಳಿಂದ ತಮ್ಮದೇಯಾದ ಕಾರ್ಯಪಡೆಯನ್ನು ಹೊಂದಿರುವ ರಮೇಶ ಅವರು ತಮ್ಮ ಸ್ವಾಭಿಮಾನದಿಂದ ಇಡೀ ರಾಜ್ಯದ ಮನ ಗೆದ್ದಿದ್ದಾರೆ. ಕಟ್ಟಾ ಕಾಂಗ್ರೇಸ್ಸಿಗರಾಗಿದ್ದ ಅವರು, ಮೈತ್ರಿ ಸರ್ಕಾರದ ಭ್ರಷ್ಠ ಆಡಳಿತಕ್ಕೆ ಬೇಸತ್ತು ಬಿ.ಎಸ್. ಯಡಿಯೂರಪ್ಪ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಲಿಕ್ಕೆ ಜೊತೆಗೆ ರಾಜ್ಯದಲ್ಲಿ ಅಸ್ಥಿರತೆಯನ್ನು ಹೋಗಲಾಡಿಸಲು ಬಿಜೆಪಿ ಸರ್ಕಾರ ರಚನೆಗೆ ಮೂಲ ಕಾರಣೀಕರ್ತರಾಗಿದ್ದಾರೆ. ಪ್ರತಿ ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಅಸಾಧ್ಯವಾಗದ ರೀತಿಯಲ್ಲಿ ಅವರನ್ನು ಗೆಲ್ಲಿಸುವ ಮೂಲಕ ಗೋಕಾಕ ಮತಕ್ಷೇತ್ರದಲ್ಲಿ ಬಿಜೆಪಿ ಶಾಶ್ವತ ಅಧಿಕಾರ ಹಿಡಿಯಲು ಭದ್ರ ಬುನಾದಿ ಹಾಕುವಂತೆ ಕಾರ್ಯಕರ್ತರಿಗೆ ಹೇಳಿದರು.
ಇಡೀ ರಾಜ್ಯವೇ ಗೋಕಾಕದತ್ತ ಕೇಂದ್ರೀಕೃತವಾಗಿದೆ. ಈ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸೋಣ. ರಮೇಶ ಜಾರಕಿಹೊಳಿ ಅವರ ವೈಯಕ್ತಿಕ ಪ್ರಭಾವ ಮತ್ತು ಕೇಂದ್ರ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಕ್ಷೇತ್ರದಲ್ಲಿರುವ ಎಲ್ಲ ೨.೪೨ ಲಕ್ಷ ಮತದಾರರನ್ನು ಸಂಪರ್ಕ ಸಾಧಿಸಿ ಅವರನ್ನು ಕಮಲ ಚಿಹ್ನೆಯತ್ತ ವಾಲಿಸಲು ಕೆಲಸ ನಿರ್ವಹಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಡಿ.೫ ರಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ಎಲ್ಲ ೧೫ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿಯಾಗಿ ಜಯ ದಾಖಲಿಸಲಿದೆ. ಬಾಕಿ ಉಳಿದಿರುವ ಮೂರುವರೆ ವರ್ಷ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಆಡಳಿತ ನಡೆಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಮತಗಟ್ಟೆ ಮೂಲಕ ಕಾರ್ಯಕರ್ತರು ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಕನಿಷ್ಠ ೫೦ ಸಾವಿರ ಮತಗಳ ಮುನ್ನಡೆಯೊಂದಿಗೆ ಜಯ ಸಾಧಿಸುತ್ತಾರೆ. ಈಗಾಗಲೇ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಪಡೆಯನ್ನು ರಚಿಸಲಾಗಿದೆ ಎಂದು ಹೇಳಿದರು.
ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪಾದ ಕಳ್ಳಿ, ಘೂಳಪ್ಪ ಹೊಸಮನಿ, ಧನಂಜಯ ಜಾಧವ, ರವಿ ಹಿರೇಮಠ, ಗೋಕಾಕ ನಗರ ಬಿಜೆಪಿ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಗೋಕಾಕ ಗ್ರಾಮೀಣ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ನಾಗಲಿಂಗ ಪೋತದಾರ, ಸುರೇಶ ಪಾಟೀಲ, ಜಿ.ಎಸ್. ರಜಪೂತ, ಲಕ್ಕಪ್ಪ ತಹಶೀಲ್ದಾರ, ಗೋವಿಂದ ಕೊಪ್ಪದ, ಸುರೇಶ ಕಾಡದವರ, ಮಹಾಂತೇಶ ತಾಂವಶಿ, ಬಸು ಹಿರೇಮಠ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸಭೆ : ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೆ. ಅರುಣಕುಮಾರ ಅವರು ಚುನಾವಣಾ ನಿರ್ವಹಣಾ ಸಮೀತಿಯ ಸಭೆಯನ್ನು ನಡೆಸಿದರು. ಗೋಕಾಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಗೆಲುವಿನ ರಣತಂತ್ರ ಹೆಣೆಯುವ ಸಂಬAಧ ಮುಖಂಡರೊಂದಿಗೆ ಗೌಪ್ಯ ಸಭೆ ನಡೆಸಿದರು.
ಹಿರಿಯ ಶಾಸಕ ಹಾಗೂ ಮಾಜಿ ಸಚಿವರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಎ.ಎಸ್. ಪಾಟೀಲ(ನಡಹಳ್ಳಿ), ಅಭಯ ಪಾಟೀಲ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related posts: