ಗೋಕಾಕ:ಗೋಕಾಕ ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ : ಲಖನ್ ಜಾರಕಿಹೊಳಿ
ಗೋಕಾಕ ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ : ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ನ 22 :
ಗೋಕಾಕ ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ. ಅವರ ಮಾತುಕೇಳದೇ ತಾವು ಧೈರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ಅವರು ಶುಕ್ರವಾರದಂದು ಪ್ರಥಮ ಬಾರಿಗೆ ಪ್ರಚಾರ ಪ್ರಾರಂಭಿಸಿ ತಾಲೂಕಿನ ಶಿಂದಿಕುರಬೇಟ ಗ್ರಾಮದ ಮುಸ್ಲಿಂ ಸಮಾಜದ ಬಾಂಧವರಿಗೆ ಭೇಟಿ ನೀಡಿ ಮತಯಾಚಿಸಿದರು.
ಚುನಾವಣೆಯ ಎರಡು ದಿನ ಮುಂಚಿತವಾಗಿ ಜಾರಕಿಹೊಳಿ ಸಹೋದರರು ನಾವೆಲ್ಲ ಒಂದೇ ಅಂತಾ ಹೇಳಿ ತಪ್ಪು ದಾರಿಗೆ ಎಳೆಯುತ್ತಾರೆ ಅವರ ಮಾತಿಗೆ ತಲೆ ಕಡಿಸಿಕೊಳ್ಳಬಾರದು.
ನಮ್ಮದು ಭ್ರಷ್ಠಾಚಾರದ ವಿರುದ್ಧ ಹೋರಾಟವಾಗಿದೆ. ಅಭಿವೃದ್ದಿ ಪರ ಹೋರಾಟವಾಗಿದೆ. ನಾನು ರಮೇಶ ಪರವಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದು ನನ್ನನೇ ಮರೆತಿದ್ದಾರೆ. ನೀವು ಯಾವ ಲೆಕ್ಕ. ಅಲ್ಲದೇ ನನಗೆ ಕಾಂಗ್ರೆಸ್ ನಿಂದ ಟೀಕೇಟ್ ತಪ್ಪಿಸಲು ರಮೇಶನ ಕೈವಾಡ ಇತ್ತು. ಆದರೆ ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ತಾವು ನನಗೆ ಮತ ನೀಡಬೇಕು.
ಹಳೆಯ ಅಂಗಡಿ ಬಂದ್ ಮಾಡಿ ಹೊಸ ಅಂಗಡಿ ತೆರೆದಿದ್ದು ತಾವುಗಳು ವಿಚಾರ ಮಾಡಿ ಮತ ನೀಡಬೇಕು. ಚುನಾವಣೆವಿದ್ದಾಗ ಮಾತ್ರ ಬಾ ಅಂತಾ ಹೇಳುತ್ತಾರೆ. ಚುನಾವಣೆ ಮುಗಿದ ನಂತರ ನಾಳೆ ಬಾ ಅಂತಾ ಅಂತಾರೆ. ಮಾವ ಅಳಿಯ ಮತ್ತು ಅವರ ಜೊತೆಯಲ್ಲಿರುವವರು ನಾವೆಲ್ಲಾ ಒಂದೇ ಅಂತಾರೆ ಅವರ ಮಾತು ಕೇಳಬಾರದು ಎಂದರಲ್ಲದೇ ಚುನಾವಣೆಯಲ್ಲಿ ನಿಮಗೆ ಗದ್ದಾ ಹಿಡಿದು ಮಾತನಾಡುತ್ತಾರೆ ನಂತರ ಕುತ್ತಿಗೆ ಹಿಡಿದು ಕಳುಹಿಸುತ್ತಾರೆ ಎಂದರು.
ಬಾಲಚಂದ್ರ ಕಡೆಯಿಂದ ಬುಲಾವ್: ರಮೇಶ ಗೋಸ್ಕರ ಬಿಜೆಪಿಗೆ ಮತ ನೀಡಬೇಕು ಅಂತಾ ಬಾಲಚಂದ್ರ ಜಾರಕಿಹೊಳಿ ಬುಲಾವ ಬರಬಹುದು. ತಾವುಗಳು ನಿಮಗೆ ಗೊತ್ತಿಲ್ಲ ಸುಮ್ಮನಿರಿ ಈ ಸಲ ಮಾವ ಅಳಿಯ ಮತ್ತು ಅವರ ಬಟಾಲಿಯನ್ ಗೆ ಬುದ್ದಿ ಕಲಿಸುತ್ತೇವೆ ನಿಮ್ಮ ಕ್ಷೇತ್ರನೇ ಬೇರೆ ನಮ್ಮ ಕ್ಷೇತ್ರವೇ ಬೇರೆ ಅಂತಾ ಹೇಳಬೇಕು. ಪ್ರಥಮ ಬಾರಿಗೆ ನಾವು ಪ್ರಚಾರ ಪ್ರಾರಂಭ ಮಾಡಿದ್ದು ತಾವು ನನ್ನ ಮೇಲೆ ಭರವಸೆ ಇಟ್ಟಿದ್ದೀರಿ ನಿಮ್ಮ ಭರವಸೆ ಸುಳ್ಳು ಮಾಡುವುದಿಲ್ಲ. ನಾನು ಬಂದ ಮೇಲೆ ಇನ್ ಕಮಿಂಗ್ ಬಂದ ಆಗುತ್ತದೆ. ತಾವುಗಳು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಅಂತಾ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯರು, ಯುವಕರು ಇದ್ದರು.
ಇದಕ್ಕೂ ಮೊದಲು ಯುವಕರು ಶಿಂದಿಕುರಬೇಟ ಕ್ರಾಸ್ ದಿಂದ ಬೈಕ್ ರ‍್ಯಾಲಿಯ ಮೂಲಕ ಸ್ವಾಗತ ನೀಡಿದರು.
ಫೋಟೋ: ತಾಲೂಕಿನ ಶಿಂದಿಕುರಬೇಟ ಗ್ರಾಮದ ಮುಸ್ಲಿಂ ಸಮಾಜದ ಬಾಂಧವರಿಗೆ ಬೇಟಿ ನೀಡಿ ಮತಯಾಚಿಸಿದರು.