RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಗೋಕಾಕ ಕ್ರೀಡೆ , ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಪ್ರಸಿದ್ದಿ ಹೊಂದಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ

ಗೋಕಾಕ:ಗೋಕಾಕ ಕ್ರೀಡೆ , ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಪ್ರಸಿದ್ದಿ ಹೊಂದಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ 

ಗೋಕಾಕ ಕ್ರೀಡೆ , ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಪ್ರಸಿದ್ದಿ ಹೊಂದಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 24 :

 

 

ಗೋಕಾಕ ಕ್ರೀಡೆ , ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಪ್ರಸಿದ್ದಿ ಹೊಂದಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಧಾರವಾಡ ವಲಯದ ಅಧ್ಯಕ್ಷ ಅವಿನಾಶ ಪೋತದಾರ ಹೇಳಿದರು

ರವಿವಾರದಂದು ನರಗದ ಜೆಎಸ್ಎಸ್ ಕ್ರೀಡಾಂಗಣದಲ್ಲಿ ಇಲ್ಲಿಯ ಗೋಕಾಕ ಕ್ರಿಕೆಟ್ ಕ್ಲಬ್ ವತಿಯಿಂದ ಪ್ರಾರಂಭಿಸಲಾದ ನೂತನ ಕ್ರಿಕೆಟ್ ನೆಟ್ ಪ್ರ್ಯಾಕಟಿಸ್ ಫೀಚ್ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾ ಪಟ್ಟುಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಸಾಧಕರಾಗಿರೆಂದು ಹಾರೈಸಿದರು.ಇಂದಿನ ಯುವ ಪೀಳಿಗೆ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿಯೊಂದಿಗೆ ಪಾಲ್ಗೋಳಬೇಕು ತಮ್ಮಲ್ಲಿರುವ ಸಾರ್ಮಥ್ಯದ ಮೇಲೆ ವಿಶ್ವಾಸ ವಿಟ್ಟು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ಸಾಧಕರಾಗಿರಿ ನಮ್ಮ ಅಸೋಸಿಯೇಷನ್ ನಿಂದ ಎಲ್ಲ ರೀತಿಯ ಸಹಾಯ ಸಹಕಾರವನ್ನು ನೀಡುವದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಸರ್ವೋತ್ತಮ ಜಾರಕಿಹೊಳಿ, ಕಿಶೋರ ಭಟ್ ,ಆನಂದ ಕೋಣ್ಣೂರ ,ದಯಾನಂದ ಕಾಟೈಯಾ , ನೀಲಕಂಠ ಪಟ್ಟಣಶೆಟ್ಟಿ, ಮನೋಹರ ಸತ್ತಗೇರಿ, ಬಸವರಾಜ ಕತ್ತಿ ,ರಮೇಶ ಕಲಾಲ, ರವಿ ಕಲಾಲ ,ಸಿದ್ದು ತೋಳಿನವರ ಸೇರಿದಂತೆ ಇತರರು ಇದ್ದರು

Related posts: