RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನೀರಾವರಿ ಮಂತ್ರಿಯಾಗಲು ರಾಜೀನಾಮೆ ನೀಡಿದ್ದಾರೆ: ಜಂಗಮ ಜೋಳಿಗೆ ಹಾಕಿ ಮತಭೀಕ್ಷೆಗೆ ಇಳಿದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ವಾಗ್ದಾಳಿ

ಗೋಕಾಕ:ನೀರಾವರಿ ಮಂತ್ರಿಯಾಗಲು ರಾಜೀನಾಮೆ ನೀಡಿದ್ದಾರೆ: ಜಂಗಮ ಜೋಳಿಗೆ ಹಾಕಿ ಮತಭೀಕ್ಷೆಗೆ ಇಳಿದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ವಾಗ್ದಾಳಿ 

ನೀರಾವರಿ ಮಂತ್ರಿಯಾಗಲು ರಾಜೀನಾಮೆ ನೀಡಿದ್ದಾರೆ: ಜಂಗಮ ಜೋಳಿಗೆ ಹಾಕಿ ಮತಭೀಕ್ಷೆಗೆ ಇಳಿದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ವಾಗ್ದಾಳಿ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 25 :

 

ಜಾರಕಿಹೊಳಿ ಸಹೋದರರಿಗೆ ಪೈಪೋಟಿ ನೀಡಿ ಜೆಡಿಎಸ್ ಪಕ್ಷದಿಂದ ಉಪ ಚುನಾವಣೆ ಸ್ವರ್ಧಿಸಿರುವ ಅಶೋಕ ಪೂಜಾರಿ ಸೋಮವಾರದಂದು ಜಂಗಮ ಜೋಳಿಗೆ ಹಾಕಿ ಮತ ಭೇಟೆ ನಡೆಸಿದರು

ಸೋಮವಾರದಂದು ನಗರದ ಶೂನ್ಯ ಸಂಪಾದನ ಮಠದಿಂದ ಮತಯಾಚನೆ ಪ್ರಾರಂಭಿಸಿದ ಅಶೋಕ ಪೂಜಾರಿ ಅವರಿಗೆ ಮಠದ ಪೀಠಾಧಿಪತಿ ಮುರಘರಾಜೇಂದ್ರ ಮಹಾಸ್ವಾಮಿಗಳು ಆರ್ಶಿವಾದ ಪಡೆದು ಚುನಾವಣಾ ಪ್ರಚಾರ ಆರಂಭಿಸಿದರು

ನಂತರ ನಗರದ ಬಣಗಾರ ಗಲ್ಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಶೋಕ ಪೂಜಾರಿ ಜನ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿ ಕಳುಹಿಸಿದ್ದ ಶಾಸಕರು ಅದನ್ನು ಬಿಟ್ಟು ಗೋಕಾಕ ಜಿಲ್ಲಾ ಆಗಲು, ಕಾರಖಾನೆ ಹಾಕಲು ರಾಜೀನಾಮೆ ಕೊಟ್ಟಿದ್ದರೆ ನಾನೇ ಮಾಲೆ ಹಾಕಿ ಅವರೊಂದಿಗೆ ಬರುತ್ತದೆ. ನೀರಾವರಿ ಖಾತೆ ಕೊಟ್ಟಾಲ್ಲ ಅಂತಾ ರಾಜೀನಾಮೆ . ಕೋಟಿದ್ದಾರೆ ಎಂದು ಹೆಸರು ಹೇಳದೆ ಬಿಜಿಇ ಅಭ್ಉ ರಮೇಶ ಜಾರಕಿಹೊಳಿ ಅವರ ಮೇಲೆ ಹರಿಹಾಯ್ದರು ಮುಂದೆ ಯಡಿಯೂರಪ್ಪ ಅವರ ಮೇಲೆ ಪ್ರಹಾರ ನಡೆಸಿ ಅವರ ಸರಕಾರವನ್ನು ಕೆಡವಲು ಜಾರಕಿಹೊಳಿ ಸಹೋದರರು ಹಿಂಜರಿಯುವದಿಲ್ಲ .ಗೋಕಾಕದಲ್ಲಿ ಜನ ಭಯದಲ್ಲಿ ಬಾಳುತ್ತಿದ್ದಾರೆ ‌.ಬಾಯಿ ಬಿಟ್ಟು ಮಾತಾಡುವ ವಾತಾವರಣ ಇಲ್ಲ ಅದನ್ನ ಮಟ್ಟ ಹಾಕಬೇಕಾಗಿದೆ

ಚುನಾವಣಾ ನಿಲ್ಲಲು ಆಗುವದಿಲ್ಲ ಎಂದು ಹಿಂದೆ ಸರಿದಿದೆ ಆದರೆ ಬೇರೆ ಅವರು ತಯಾರು ಆಗಲಿಲ್ಲ , ಅನಿರ್ವಾಯವಾಗಿ ನಿಂತಿದ್ದೇನೆ . ರೋಕ್ಕದ ಮೇಲೆ ಚುನಾವಣೆ ನಡೆದಿದ್ದರಿಂದ ನಾನು ಕಳೆದ ಮುರೂ ಬಾರಿ ಸೋತಿದ್ದೇನೆ . ನನ್ನ ಮೇಲೆ ಸುಳ್ಳು ಆಪಾದನೆ ಬಂದಾಗ ‌ ಆಣೆ ಮಾಡಿ ಪ್ರಮಾಣ ಮಾಡಿದ್ದೇನೆಂದು ಭಾವುಕರಾದ ಅಶೋಕ ಪೂಜಾರಿ ಸ್ವಾತಂತ್ರ್ಯ ಹೋರಾಟ ಹೇಗೆ ನಿರಂತರ ವಾಗಿರುತ್ತೋ ಹಾಗೆ ಈ ಹೋರಾಟ ಆಗಿದೆ ಎಲ್ಲರೂ ಸಂಪೂರ್ಣ ಬೆಂಬಲ ನೀಡಬೇಕೆಂದು ಮತ ಭೀಕ್ಷೆ ನೀಡಿ ಎಂದು ಹೇಳಿದರು

ಪರಿಶುದ್ಧ ಜೋಳಿಗೆ ಇರುವದರಿಂದ ಅದರಲ್ಲಿ ಪರಿಶುದ್ಧ ಹಣ ಬರುತ್ತವೆ ಜೋಳಿಗೆಯಲ್ಲಿ ಬಂದ ಹಣ ಸದುಪಯೋಗ ವಾಗತ್ತದೆ ಮತದಾರರಿಂದ ಹಣ ಇಸಿದುಕೊಂಡು ಹಣವನ್ನು ಮತದಾರ ಅಭಿವೃದ್ಧಿ ನೀಡಲಾಗುವದು ಸಾಂಕೇತಿಕವಾಗಿ ನಾನು ಚುನಾವಣೆ ನಿಂತಿದ್ದೇನೆ ನಾನು ಆಯ್ಕೆಯಾದರೆ ನೀವು ಆಯ್ಕೆಯಾದಂತೆ ನನ್ನ ಸೋಲು ಗೆಲುವು ನಿಮ್ಮ ಮೆಲಿದೆ ಎಂದು ಹೇಳಿದರು 

ಸ್ವಾಭಿಮಾನದ ಹೋರಾಟ : ಸರಕಾರಿ ಕಛೇಯಲ್ಲಿ ಜಾರಕಿಹೊಳಿ ಅವರ ಪೋನ ಬಂದ ಮೇಲೆ ಕೆಲಸ ಆಗುತ್ತದೆ ಹಿಂತಹ ವ್ಯವಸ್ಥೆ ಎಲ್ಲಿಯೂ ಇಲ್ಲ .ಸಾವಕಾರ ಕಡೆಯಿಂದ ಪೋನ ಬಂದರೆ ಮಾತ್ರ ಕೆಲಸ ಎಂದು ಒಬ್ಬ ತಹಶೀಲ್ದಾರ್ ಹೇಳುತ್ತಾರೆ ಇದು ಹೀಗೆ ಮುಂದೆವರೆದರೆ ಚಿಕ್ಕೋಳಿ ಪೂಲ ಕಡೆಯಿರುವ ಮನೆಗೆ ಇಲ್ಲಿಯ ಕಛೇರಿಗಳು ಸ್ಥಳಾಂತರ ಆಗುತ್ತವೆ ಮುಂದೆ ಸರಕಾರವೇ ಜಾರಕಿಹೊಳಿ ಕುಟುಂಬಕ್ಕೆ ಗೋಕಾಕನ್ನು ಜಾಗೀರ ಬರೆದು ಕೋಡುವ ಪರಿಸ್ಥಿತಿ ಬರಬಹುದು ಬದಲಾವಣೆಗಾಗಿ ಈ ಬಾರಿ ನಿರ್ಭಿಡೆಯಿಂದ ಮತ ಹಾಕಬೇಕು ಎಂದು ಪೂಜಾರಿ ವಿನಂತಿಸಿದ್ದರಲ್ಲದೆ ನಮ್ಮ ಹೋರಾಟ ಭ್ರಷ್ಟಾಚಾರ ವಿರೋಧ ಹೋರಾಟವಾಗಿದ್ದು ಈ ಸ್ವಾಭಿಮಾನದ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು

ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ , ಭೀಮಪ್ಪ   ಗಡಾದ ಸೇರಿದಂತೆ ಅನೇಕರು ಸಾಥ್ ನೀಡಿದರು

Related posts: